ETV Bharat / state

ಬಿಬಿಎಂಪಿ 243 ವಾರ್ಡ್​​ಗಳಿಗೆ ಪುನರ್ ವಿಂಗಡಣೆ ವಿಳಂಬ: ಸಮಿತಿಯ ಅವಧಿ ವಿಸ್ತರಣೆ

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡ್​​​ಗಳನ್ನು 243 ವಾರ್ಡ್​​​ಗಳಿಗೆ ಹೆಚ್ಚಿಸಿ ಪುನರ್ ವಿಂಗಡಣೆ ಮಾಡಲು ಆರು ತಿಂಗಳು ಕಾಲಾವಧಿಯನ್ನು ನಿಗದಿ ಮಾಡಿತ್ತು. ಆದರೆ ಕಾರ್ಯ ಪೂರ್ಣವಾಗದ ಹಿನ್ನೆಲೆಯಲ್ಲಿ ಕಾಲಮಿತಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

BBMP
ಬಿಬಿಎಂಪಿ
author img

By

Published : Oct 31, 2021, 3:34 PM IST

ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಪುನರ್ ವಿಂಗಡಣೆ ಮಾಡುವ ಕಾಲಮಿತಿಯನ್ನು ರಾಜ್ಯ ಸರ್ಕಾರ ವಿಸ್ತರಣೆ ಮಾಡಿ ಅಧಿಕೃತ ಆದೇಶ ಹೊರಡಿಸಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ 198 ವಾರ್ಡ್​​​ಗಳನ್ನು 243 ವಾರ್ಡ್​​​ಗಳಿಗೆ ಹೆಚ್ಚಿಸಿ ಪುನರ್ ವಿಂಗಡಣೆ ಮಾಡಲು ಸಮಿತಿ ರಚಿಸಿ ಸರ್ಕಾರ ಆರು ತಿಂಗಳ ಅವಧಿಯನ್ನು ನಿಗದಿಪಡಿಸಿತ್ತು. ಆದರೆ ಕೋವಿಡ್ ನಿಯಂತ್ರಿಸಲು ಬಿಬಿಎಂಪಿ ಕಾರ್ಯಪ್ರವೃತ್ತವಾಗಿದ್ದ ಹಿನ್ನೆಲೆಯಲ್ಲಿ ಸಮಿತಿಗೆ ನಿಗದಿಪಡಿಸಿದ ಅವಧಿಯಲ್ಲಿ ವಾರ್ಡ್​​ಗಳ ಪುನರ್ ವಿಂಗಡಣಾ ಕಾರ್ಯ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.

order copy
ಆದೇಶದ ಪ್ರತಿ

ಹೀಗಾಗಿ ಬಿಬಿಎಂಪಿ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಿರುವ ಸಮಿತಿಯ ಅವಧಿಯನ್ನು ನಗರಾಭಿವೃದ್ಧಿ ಇಲಾಖೆಯು 2021ರ ಜುಲೈ 28ರಿಂದ ಆರು ತಿಂಗಳವರೆಗೆ ವಿಸ್ತರಿಸಿದೆ. ಹಾಗಾಗಿ ಸಮಿತಿ 2020ರ ಜ.28ರವರೆಗೆ ಅಸ್ತಿತ್ವದಲ್ಲಿರಲಿದ್ದು, ಅಷ್ಟರೊಳಗೆ ಬಿಬಿಎಂಪಿ ವ್ಯಾಪ್ತಿಗೆ ಗಡಿಯಂಚಿನ ಗ್ರಾಮಗಳ ಸೇರ್ಪಡೆ ಹಾಗೂ ವಾರ್ಡ್‌ಗಳ ಮರುವಿಂಗಡಣೆ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಬೇಕಿದೆ.

ಹೊಸದಾಗಿ ವಾರ್ಡ್ ಪುನರ್ ವಿಂಗಡಣೆ ಆದ ಬಳಿಕ ಬಿಬಿಎಂಪಿ ಚುನಾವಣೆ ನಡೆಯಲಿದೆ. ಬಿಬಿಎಂಪಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಸೆ.2020ಕ್ಕೆ ಕೊನೆಯಾಗಿತ್ತು. ನಂತರದಿಂದ ಆಡಳಿತಾಧಿಕಾರಿಗಳ ಆಡಳಿತ ನಡೆಯುತ್ತಿದೆ. ಈ ಮಧ್ಯೆ ಬಿಬಿಎಂಪಿ ನೂತನ ಕಾಯ್ದೆಯೂ ಜಾರಿಗೆ ಬಂದಿತು. ಈ ಪ್ರಕಾರ ವಾರ್ಡ್ ಹೆಚ್ಚಳದ ಅವಕಾಶವನ್ನು ಇದರಲ್ಲಿ ನಮೂದಿಸಲಾಗಿತ್ತು.

ನಂತರ ವಾರ್ಡ್ ಪುನರ್ ವಿಂಗಡಣೆಗೆ ಸರ್ಕಾರ ಸಮಿತಿ ರಚಿಸಿತು. ಈ ಸಮಿತಿಯಲ್ಲಿ ನಾಲ್ವರು ಅಧಿಕಾರಿಗಳ ಸಮಿತಿ ಇದಾಗಿದ್ದು, ಬಿಬಿಎಂಪಿ ಮುಖ್ಯ ಆಯುಕ್ತರು ಇದರ ಅಧ್ಯಕ್ಷರಾಗಿದ್ದು, ನಗರ ಜಿಲ್ಲಾಧಿಕಾರಿ, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಬಿಬಿಎಂಪಿ (ಕಂದಾಯ) ವಿಶೇಷ ಆಯುಕ್ತರು ಇದರ ಸದಸ್ಯರಾಗಿದ್ದಾರೆ.

ಇದನ್ನೂ ಓದಿ: ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ಪೊಲೀಸರ ಶ್ರಮ ಬಹಳ ಇದೆ : ಗೃಹ ಸಚಿವ ಆರಗ ಜ್ಞಾನೇಂದ್ರ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.