ETV Bharat / state

ಬೆಂಗಳೂರು ಜನತೆಗೆ ಪಾರ್ಕಿಂಗ್​ ಬರೆ; ನಗರದೆಲ್ಲೆಡೆ ಶುಲ್ಕ ಕಡ್ಡಾಯಗೊಳಿಸಲು ಮುಂದಾದ ಪಾಲಿಕೆ

author img

By

Published : Jul 6, 2022, 7:27 PM IST

Updated : Jul 6, 2022, 7:38 PM IST

ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ಅವಕಾಶ- ಎಲ್ಲಾ ಬಗೆಯ ವಾಹನಗಳಿಗೆ ಶುಲ್ಕ - ಬೆಂಗಳೂರು ಜನತೆಗೆ ಬಿಬಿಎಂಪಿಯಿಂದ ಪಾರ್ಕಿಂಗ್​ ಬರೆ

ಬೆಂಗಳೂರಲ್ಲಿ ಪಾರ್ಕಿಂಗ್ ಶುಲ್ಕ ಕಡ್ಡಾಯಗೊಳಿಸಲು ಮುಂದಾದ ಪಾಲಿಕೆ

ಬೆಂಗಳೂರು: ಈಗಲೇ ಇಂಧನ ಬೆಲೆ ಏರಿಕೆಯಿಂದ ಕಂಗೆಟ್ಟಿರುವ ಸಿಲಿಕಾನ್ ಸಿಟಿಯ ವಾಹನ ಸವಾರರಿಗೆ ಪಾಲಿಕೆ ಪಾರ್ಕಿಂಗ್ ಶುಲ್ಕದ ಬರೆ ಎಳೆಯಲು ಮಂದಾಗಿದೆ. ನಗರದೆಲ್ಲೆಡೆ ಪಾರ್ಕಿಂಗ್​ ಫೀಸ್ ಕಡ್ಡಾಯಗೊಳಿಸಲು ಚಿಂತನೆ ನಡೆಸಿದೆ. ಜನದಟ್ಟಣೆ ಹೆಚ್ಚಾಗಿರುವ ಪ್ರದೇಶಗಳಲ್ಲಿ ಪಾರ್ಕಿಂಗ್ ಅವಕಾಶ ಕಲ್ಪಿಸಲಾಗಿದೆ. ಈ ಸ್ಥಳದಲ್ಲಿ ನಿಲ್ಲುವ ಎಲ್ಲಾ ಬಗೆಯ ವಾಹನಗಳಿಗೆ ಶುಲ್ಕ ವಿಧಿಸಲಾಗುತ್ತಿದೆ.

ಸದ್ಯ ಸಮಯದ ಅನ್ವಯ ಶುಲ್ಕ ನಿಗದಿ ಆಗಲಿದ್ದು, ಪ್ರತಿ ಗಂಟೆಗೆ 20 ರೂ, ವಿಧಿಸುವ ಸಾಧ್ಯತೆ ಇದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ. ಮೊದಲ ಹಂತದಲ್ಲಿ ಮೆಜೆಸ್ಟಿಕ್, ಗಾಂಧಿನಗರದಲ್ಲಿ ಪಾರ್ಕಿಂಗ್ ಸಮಸ್ಯೆ ನಿವಾರಿಸಲು ಪಾಲಿಕೆಯಿಂದ ಯೋಜನೆ ರೂಪಿಸಿದೆ. ಅದರಂತೆ ಪ್ರಾಯೋಗಿಕವಾಗಿ ಗಾಂಧಿನಗರದಲ್ಲಿ ಚಾಲನೆ ಸಿಗಲಿದೆ ಎಂದಿದ್ದಾರೆ.

ಬೆಂಗಳೂರು ಜನತೆಗೆ ಪಾರ್ಕಿಂಗ್​ ಬರೆ; ನಗರದೆಲ್ಲೆಡೆ ಶುಲ್ಕ ಕಡ್ಡಾಯಗೊಳಿಸಲು ಮುಂದಾದ ಪಾಲಿಕೆ

12 ರಸ್ತೆಗಳಲ್ಲಿ ಪ್ರಯೋಗ: ಗಾಂಧಿನಗರದ ಪ್ರಮುಖ 12 ರಸ್ತೆಗಳನ್ನು ಪಾರ್ಕಿಂಗ್ ವ್ಯವಸ್ಥೆಗೆ ಬಿಬಿಎಂಪಿ ಸಿದ್ಧತೆ ಮಾಡಿಕೊಂಡಿದೆ. ಇಲ್ಲಿನ ಗಾಂಧಿನಗರದ 2,3,4,5,6 ನೇ ಕ್ರಾಸ್‌ ರಸ್ತೆಗಳು, ಯಾದವ್ ಹಾಸ್ಟೆಲ್ ರಸ್ತೆ, ಸ್ವಪ್ನ ಬುಕ್ ಹೌಸ್ ರಸ್ತೆ, ಶೇಷಾದ್ರಿ ರಸ್ತೆ, ರಾಮಚಂದ್ರ ರಸ್ತೆ, ಫ್ರೀಡಂ ಪಾರ್ಕ್​​​ ರಸ್ತೆಗಳಲ್ಲಿ ಪಾರ್ಕಿಂಗ್ ಶುಲ್ಕ ವಿಧಿಸಲಾಗುತ್ತದೆ.

ಡಿಜಿಟಲ್ ಪೇ ಆ್ಯಂಡ್ ಪಾರ್ಡ್​ ವ್ಯವಸ್ಥೆ: ನಿಗದಿತ ಸ್ಥಳದಲ್ಲಿಯೇ ಪಾರ್ಕ್ ಮಾಡಬೇಕು. ಎಲ್ಲೆಂದರಲ್ಲಿ ಪಾರ್ಕ್ ಮಾಡಿದರೆ ದಂಡ ಬೀಳುತ್ತದೆ. ಡಿಜಿಟಲ್ ವ್ಯವಸ್ಥೆಯ ಮೂಲಕ ಕೂಡ ಹಣ ಪಾವತಿಸಿ ವಾಹನವನ್ನು ಪಾರ್ಕಿಂಗ್ ಮಾಡಬಹುದು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಮೊದಲ ಪ್ರಯೋಗ ಗಾಂಧಿನಗರದಲ್ಲಿ: ಸದ್ಯಕ್ಕೆ ಗಾಂಧಿನಗರದಲ್ಲಿ ಈ ವ್ಯವಸ್ಥೆಗೆ ಚಾಲನೆ ಸಿಗಲಿದ್ದು, ಹಂತ ಹಂತವಾಗಿ ಎಂಜಿ ರಸ್ತೆ, ಕಮರ್ಶಿಯಲ್ ಸ್ಟ್ರೀಟ್ ಸೇರಿದಂತೆ ಅನೇಕ ಕಡೆ ಪಾರ್ಕಿಂಗ್ ಶುಲ್ಕ ಕಡ್ಡಾಯವಾಗಲಿದೆ.

ಇದನ್ನೂ ಓದಿ: ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾಗಲು ಮಂಗಳೂರಿಗೆ ಬಂದಿಳಿದ ಸೋನು ಸೂದ್

Last Updated : Jul 6, 2022, 7:38 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.