ETV Bharat / state

Street Dog Census: ಬೆಂಗಳೂರಲ್ಲಿ ಮೊದಲ ಬಾರಿಗೆ ಡ್ರೋನ್ ಮೂಲಕ ಬೀದಿ ನಾಯಿಗಳ ಸಮೀಕ್ಷೆ.. ವಿನೂತನ ಕ್ರಮಕ್ಕೆ ಶ್ಲಾಘನೆ

author img

By

Published : Jul 19, 2023, 6:27 PM IST

ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ವಾರ್ಡ್​ವಾರು ನಿರ್ವಹಿಸಲು ಒಂದು ತಂಡದಲ್ಲಿ ಇಬ್ಬರು ಸಮೀಕ್ಷಾದಾರರಂತೆ ಒಟ್ಟು 50 ಜನರ ತಂಡ ರಚಿಸಲಾಗಿದೆ. ಇದರ ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

Survey of street dogs using drone in bengaluru
ಡ್ರೋನ್ ಮೂಲಕ ಬೀದಿ ನಾಯಿಗಳ ಸಮೀಕ್ಷೆ

ಬೆಂಗಳೂರು: ನಗರದಲ್ಲಿ ಬೀದಿ ನಾಯಿಗಳ ಸಮೀಕ್ಷೆ ನಡೆಸಲು ಪಾಲಿಕೆ ಡ್ರೋನ್ ಬಳಸಲು ಮುಂದಾಗಿದ್ದು, ಐತಿಹಾಸಿಕ ಕ್ರಮ ಎಂಬ ಶ್ಲಾಘನೆ ಎಲ್ಲೆಡೆ ವ್ಯಕ್ತವಾಗುತ್ತಿದೆ. ಕಳೆದ ವಾರದಿಂದ ಸಿಬ್ಬಂದಿ ಗಣತಿ ನಡೆಸುತ್ತಿದ್ದಾರೆ. ಇದರ ಮುಂದುವರೆದ ಭಾಗವಾಗಿ ಪಾಲಿಕೆಯ ಪಶುಪಾಲನಾ ವಿಭಾಗ ಐಐಎಸ್‌ಸಿ ಸಹಯೋಗದಲ್ಲಿ ಡ್ರೋನ್ ಬಳಸಿ ನಿಖರವಾಗಿ ಬೀದಿ ನಾಯಿಗಳ ಸಂಖ್ಯೆ ಪತ್ತೆ ಹಚ್ಚಲಾಗುತ್ತಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ಬೀದಿ ನಾಯಿಗಳ ಸಂಖ್ಯೆ ನಿಯಂತ್ರಣ ಹಾಗೂ ರೇಬಿಸ್ ರೋಗ ತಡೆಗಟ್ಟಲು ಬೀದಿ ನಾಯಿಗಳ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆ್ಯಂಟಿರೇಬಿಸ್ ಲಸಿಕಾ ಕಾರ್ಯಕ್ರಮವನ್ನು ಪಾಲಿಕೆಯ ಪಶುಪಾಲನಾ ವಿಭಾಗ ಕೈಗೆತ್ತಿಕೊಂಡಿದೆ. 2019ನೇ ಸಾಲಿನಲ್ಲಿ ಬೀದಿ ನಾಯಿಗಳ ಸಮೀಕ್ಷೆ ಮಾಡಲಾಗಿದ್ದು, 3.10 ಲಕ್ಷ ಬೀದಿ ನಾಯಿಗಳು ಇರುವುದಾಗಿ ಅಂದಾಜಿಸಲಾಗಿತ್ತು.

ನ್ ಮೂಲಕ ಬೀದಿ ನಾಯಿಗಳ ಸಮೀಕ್ಷೆ: 50 ಜನರ ತಂಡ ರಚನೆ

50 ಜನರ ತಂಡ ರಚನೆ: ಪಾಲಿಕೆಯ 8 ವಲಯಗಳಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆ ಮತ್ತು ಆ್ಯಂಟಿರೇಬಿಸ್ ಲಸಿಕಾ ಕಾರ್ಯಕ್ರಮ 2019ನೇ ಸಾಲಿನಿಂದ ಇಲ್ಲಿಯವರೆಗೆ ನಿರಂತರವಾಗಿ ನಡೆಸಲಾಗುತ್ತಿದೆ. ಕಾರ್ಯಕ್ರಮದ ಯಶಸ್ವಿ ಅನುಷ್ಠಾನದ ಬಗ್ಗೆ ತಿಳಿಯುವ ಸಲುವಾಗಿ ಬೀದಿ ನಾಯಿಗಳ ಸಮೀಕ್ಷೆಯನ್ನು ಮತ್ತೆ ಕೈಗೊಳ್ಳಲಾಗುತ್ತಿದೆ. ಬೀದಿ ನಾಯಿ ಸಮೀಕ್ಷೆಯನ್ನು ಕ್ರಮಬದ್ಧವಾಗಿ, ವ್ಯವಸ್ಥಿತವಾಗಿ ವಾರ್ಡ್​ವಾರು ನಿರ್ವಹಿಸಲು ಒಂದು ತಂಡದಲ್ಲಿ ಇಬ್ಬರು ಸಮೀಕ್ಷಾದಾರರಂತೆ ಒಟ್ಟು 50 ಜನರ ತಂಡ ರಚಿಸಲಾಗಿದೆ. ಇದರ ಮೇಲ್ವಿಚಾರಣೆಗಾಗಿ 15 ಮೇಲ್ವಿಚಾರಕರನ್ನು ನಿಯೋಜಿಸಲಾಗಿದೆ.

1,360 ಕಿರು ವಲಯಗಳಲ್ಲಿ ಸಮೀಕ್ಷೆ: ಒಟ್ಟು 840 ಚ.ಕಿ.ಮೀ ವ್ಯಾಪ್ತಿಯುಳ್ಳ ಬಿಬಿಎಂಪಿಯನ್ನು (ವಸತಿ ಪ್ರದೇಶ, ಕೊಳಚೆ ಪ್ರದೇಶ, ವಾಣಿಜ್ಯ ಪ್ರದೇಶ ಹಾಗೂ ಕೆರೆಗಳು) 0.5 ಚ.ಕಿ.ಮೀ. ವ್ಯಾಪ್ತಿಯ 6,850 ಕಿರು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಅದರಲ್ಲಿ ಶೇ.20ರಷ್ಟು ಸ್ಯಾಂಪಲ್‌ಗಳನ್ನು ಅಂದರೆ 1,360 ಕಿರು ವಲಯಗಳಲ್ಲಿ ಸಮೀಕ್ಷೆಗೆ ಆಯ್ಕೆ ಮಾಡಲಾಗಿದೆ. ಅದರಂತೆ, ಬೆಂಗಳೂರು ನಗರ ಜಿಲ್ಲೆಯ ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯ 70 ಅರೆತಾಂತ್ರಿಕ ಸಿಬ್ಬಂದಿ ಹಾಗೂ ಪಾಲಿಕೆಯ ಪಶುಪಾಲನಾ ವಿಭಾಗದ 30 ಸಿಬ್ಬಂದಿ ಸೇರಿದಂತೆ 100 ಮಂದಿಯ ಮೂಲಕ ಈ ಸಮೀಕ್ಷೆಯನ್ನು ಮಾಡಲಾಗುತ್ತಿದೆ. ಆದರೆ ಕೆರೆ ಅಂಗಳದಲ್ಲಿ ಸಿಬ್ಬಂದಿ ಓಡಾಟ ಮಾಡಿ ಗಣತಿ ನಡೆಸುವುದು ಕಷ್ಟಕರವಾಗಿದೆ. ಆದ್ದರಿಂದ ಮುಖ್ಯವಾಗಿ ಸಾರಕ್ಕಿ ಕೆರೆ, ಹುಳಿಮಾವು ಕೆರೆ ಸೇರಿದಂತೆ ದೊಡ್ಡ ಕೆರೆಗಳಲ್ಲಿ ಡ್ರೋನ್ ಬಳಸಲಾಗುತ್ತಿದೆ.

ಉಚಿತವಾಗಿ ಗಣತಿ ಪ್ರಕ್ರಿಯೆ: "ಡ್ರೋನ್ ಮೂಲಕ ನಾಯಿ ಗಣತಿಗೆ ಪಾಲಿಕೆ ಯಾವುದೇ ಹೆಚ್ಚಿನ ಖರ್ಚು ಮಾಡುತ್ತಿಲ್ಲ. ಭಾರತೀಯ ವಿಜ್ಞಾನ ಸಂಸ್ಥೆಯ ಸಹಯೋಗ ಹೊಂದಿರುವ ಸ್ಟಾರ್ಟ್‌ ಅಪ್ ಕಂಪನಿಗಳು ಉಚಿತವಾಗಿ ಗಣತಿ ಪ್ರಕ್ರಿಯೆ ನಡೆಸುವುದಕ್ಕೆ ಮುಂದೆ ಬಂದಿವೆ" ಎಂದು ಬಿಬಿಎಂಪಿಯ ವಿಶೇಷ ಆಯುಕ್ತ ಡಾ. ತ್ರಿಲೋಕಚಂದ್ರ ತಿಳಿಸಿದ್ದಾರೆ. ಕೆರೆ ಅಂಗಳದಲ್ಲಿ ನಡೆಸಲಾಗುತ್ತಿರುವ ಬೀದಿ ನಾಯಿಗಳ ಗಣತಿ ಯಶಸ್ವಿಯಾದರೆ, ಮೈದಾನ, ಬಾಲಿ ನಿವೇಶನ, ಕೆರೆ ಅಂಗಳಗಳು, ಪಾರ್ಕ್ ಸೇರಿದಂತೆ ಹಲವೆಡೆ ಡ್ರೋನ್ ಬಳಕೆ ಮಾಡಿಕೊಳ್ಳಬಹುದಾಗಿದೆ. ಇದರಿಂದ ಶ್ರಮ ಕಡಿಮೆ ಆಗಲಿದೆ. ಬೇಗ ಸಮೀಕ್ಷೆ ಪ್ರಕ್ರಿಯೆ ಮುಗಿಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ನಾಗರಹೊಳೆಯಲ್ಲಿ ಆನೆ ಗಣತಿ ಮುಕ್ತಾಯ, ಗಣತಿಯಲ್ಲಿ ಕಾಣಿಸಿಕೊಂಡ 400ಕ್ಕೂ ಹೆಚ್ಚು ಆನೆಗಳು..!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.