ETV Bharat / state

ಬೀದಿನಾಯಿ ಕಾಟ ನಿಯಂತ್ರಣಕ್ಕೆ ಬಿಬಿಎಂಪಿಯಿಂದ ಸಂತಾನಹರಣ ಚಿಕಿತ್ಸೆ - ಪಾಲಿಕೆಯ ಎಲ್ಲಾ ವಲಯಗಳಲ್ಲಿ ಬೀದಿನಾಯಿಗಳ ಸಂತಾನಹರಣ

ಬೆಂಗಳೂರಿನಲ್ಲಿ ಬೀದಿ ನಾಯಿ ದಾಳಿ ಬಗ್ಗೆ ಹಲವಾರು ಪ್ರಕರಣಗಳು ಸಂಭವಿಸಿದ ಬಳಿಕ ಬಿಬಿಎಂಪಿ ಕಡೆಗೂ ಎಚ್ಚೆತ್ತುಕೊಂಡಿದ್ದು, ನಾಯಿಗಳಿಗೆ ಸಂತಾನಹರಣ ಚಿಕಿತ್ಸೆಗೆ ಮುಂದಾಗಿದೆ.

ಬಿಬಿಎಂಪಿ
ಬಿಬಿಎಂಪಿ
author img

By

Published : Feb 17, 2020, 11:59 PM IST

ಬೆಂಗಳೂರು: ನಗರದ ಕಾಕ್ಸ್ ಟೌನ್ ಪ್ರದೇಶದಲ್ಲಿ 48 ಬೀದಿನಾಯಿಗಳನ್ನು ಹಿಡಿದು ಇಂದು ಸಂತಾನಹರಣ ಚಿಕಿತ್ಸೆ ಮಾಡಲಾಯಿತು.

ಪಾಲಿಕೆಯ ಎಲ್ಲಾ ವಲಯಗಳಲ್ಲಿ ಬೀದಿನಾಯಿಗಳ ಸಂತಾನಹರಣ ಚಿಕಿತ್ಸೆಯನ್ನು ಒಂದೊಂದು ಎನ್​ಜಿಒ ಮುಖಾಂತರ ಮಾಡಿಸಲಾಗ್ತಿದೆ. ಚಿಕಿತ್ಸೆ ಬಳಿಕ ಅವುಗಳ ಸ್ಥಳಕ್ಕೆ ಬಿಡಲಾಗುತ್ತದೆ ಎಂದು ಬಿಬಿಎಂಪಿ ಆಯುಕ್ತರಾದ ಬಿ.ಹೆಚ್.ಅನಿಲ್ ಕುಮಾರ್ ತಿಳಿಸಿದರು.

ನಾಯಿಗಳ ಸಂತಾನಹರಣ ಚಿಕಿತ್ಸೆ ಕುರಿತು ತಿಳಿಸಿದ ಬಿ.ಹೆಚ್ ಅನಿಲ್ ಕುಮಾರ್

ಇನ್ನು ಈ ಕುರಿತು ಟ್ವೀಟ್​ ಮಾಡಿರುವ ಅವರು, ಬೀದಿ ನಾಯಿಗಳ ನಿಯಂತ್ರಣಕ್ಕೆ ಬಿಬಿಎಂಪಿ ಶ್ರಮಿಸುತ್ತಿದೆ. ಎಲ್ಲೆಡೆ ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಚಿಕಿತ್ಸೆ ಮಾಡಲಾಗುತ್ತಿದೆ. ಇಂದು ಕಾಕ್ಸ್​​ ಟೌನ್​​ ಪ್ರದೇಶದಲ್ಲಿ 48 ನಾಯಿಗಳಿಗೆ ವ್ಯಾಕ್ಸಿನೇಷನ್​ ಮಾಡಲಾಗಿದೆ ಎಂದು ತಿಳಿಸಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.