ETV Bharat / state

ಬೆಂಗಳೂರಿನ ಒಮಿಕ್ರೋನ್‌ ಸೋಂಕಿತ ವೈದ್ಯರ ಪತ್ನಿಗೂ ಪಾಸಿಟಿವ್​​; ಮನೆ ರಸ್ತೆ ಸೀಲ್​ಡೌನ್​ - Omicron-infected doctor's wife admitted to hospital

ಸದ್ಯ ಒಮಿಕ್ರೋನ್ ಸೋಂಕಿತ ವೈದ್ಯ ಹಾಗು ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ವೈದ್ಯರ ಮನೆಯಲ್ಲಿ ಒಟ್ಟು 10 ಮಂದಿ ವಾಸವಿದ್ದು, ಉಳಿದ 8 ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿದೆ.

BBMP seal down infected doctor's house road
ಸೋಂಕಿತ ವೈದ್ಯರ ಮನೆ ರಸ್ತೆ ಸೀಲ್​ಡೌನ್​
author img

By

Published : Dec 3, 2021, 11:08 AM IST

ಬೆಂಗಳೂರು: ಬೆಂಗಳೂರಿನ ವೈದ್ಯರಲ್ಲಿ ಒಮಿಕ್ರೋನ್ ವೈರಸ್ ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿತ್ತು. ಇದೀಗ ಅವರ ಪತ್ನಿಗೂ ಕೂಡ ಕೋವಿಡ್​ ಪಾಸಿಟಿವ್ ದೃಢಪಟ್ಟಿದ್ದು, ಅವರ ಸ್ಯಾಂಪಲ್ ಅ​ನ್ನು ಜಿನೋಮ್ ಸೀಕ್ವೆನ್ಸಿಂಗ್‌ಗೆ ಕಳುಹಿಸಲಾಗಿದೆ.

ವೈದ್ಯರ ಪತ್ನಿಗೆ ಕೊರೊನಾ ಪಾಸಿಟಿವ್ ಕಂಡುಬಂದಿರುವ ಕಾರಣಕ್ಕೆ ಆರ್‌ಬಿಐ ಲೇಔಟ್​ನ 100 ಮೀಟರ್ ರಸ್ತೆಯನ್ನು ಬಿಬಿಎಂಪಿ ಸೀಲ್​ಡೌನ್ ಮಾಡಿದೆ. ಬ್ಯಾರಿಕೇಡ್, ರೆಡ್​ಟೇಪ್​ ಹಾಕಲಾಗಿದ್ದು ಸೋಂಕಿತ ವೈದ್ಯರ ಮನೆಗೆ ನಿರ್ಬಂಧಿತ ಪ್ರದೇಶ ಎಂದು ಸೂಚಿಸಲಾಗಿದೆ.

ಹಾಗೆಯೇ, ಹೆಚ್ಚಿನ ಸುರಕ್ಷತೆ ದೃಷ್ಟಿಯಿಂದ ಸೋಂಕಿತ ವ್ಯಕ್ತಿಯ ಅಕ್ಕಪಕ್ಕದ ಮನೆಯವರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಇಲ್ಲಿಯವರೆಗೆ ಸುಮಾರು 32 ಜನರ ಸ್ಯಾಂಪಲ್ಸ್​ ಅನ್ನು ಬಿಬಿಎಂಪಿ ಸಂಗ್ರಹಿಸಿದ್ದು, ಇಂದು ಎಲ್ಲರ ವರದಿ ಬರಲಿದೆ.

ಒಮಿಕ್ರಾನ್ ಸೋಂಕಿತ ವೈದ್ಯರ ಪತ್ನಿ ವಿಕ್ಟೋರಿಯಾ ಕ್ಯಾಂಪಸ್​ನಲ್ಲಿ ಕಣ್ಣಿನ ವೈದ್ಯರಾಗಿ ಕೆಲಸ ಮಾಡ್ತಿದ್ದಾರೆ. ಕಣ್ಣಿನ ವೈದ್ಯರಾಗಿರೋದ್ರಿಂದ ರೋಗಿಗಳ ಜೊತೆ ಕ್ಲೋಸ್‌ ಕಾಂಟ್ಯಾಕ್ಟ್ ಉಂಟಾಗಿರಬಹುದು. ಹೀಗಾಗಿ, ಆಸ್ಪತ್ರೆಯ ವೈದ್ಯರು ಹಾಗೂ ಸಿಬ್ಬಂದಿಯನ್ನು ಟೆಸ್ಟ್​ಗೆ ಒಳಪಡಿಸಲಾಗಿದೆ.

ಸದ್ಯ ಒಮಿಕ್ರೋನ್ ಸೋಂಕಿತ ವೈದ್ಯ ಹಾಗು ಪತ್ನಿಯನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸೋಂಕಿತ ವೈದ್ಯರ ಮನೆಯಲ್ಲಿ ಒಟ್ಟು 10 ಮಂದಿ ವಾಸವಿದ್ದು, ಉಳಿದ 8 ಮಂದಿಯ ವರದಿ ಕೋವಿಡ್ ನೆಗೆಟಿವ್ ಆಗಿದೆ. ಹೀಗಾಗಿ, 8 ಮಂದಿಯನ್ನು ಹೋಮ್ ಐಸೋಲೇಷನ್​ನಲ್ಲಿ ಇರಿಸಲಾಗಿದೆ. ವೈದ್ಯರ ಮನೆಯನ್ನು ಕಂಟೈನ್​ಮೆಂಟ್​ ಝೋನ್​ ಎಂದು ಘೋಷಿಸಿ ಸೀಲ್​​ ಮಾಡಲಾಗಿದೆ.

ಇದನ್ನೂ ಓದಿ: ದೇಶದಲ್ಲಿ 2 ಒಮಿಕ್ರೋನ್ ಪ್ರಕರಣ ಸೇರಿ 9 ಸಾವಿರಕ್ಕೂ ಹೆಚ್ಚು ಸೋಂಕಿತರು ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.