ETV Bharat / state

'ಹರ್ ಘರ್ ತಿರಂಗಾ' ಅಭಿಯಾನ ಯಶಸ್ವಿಗೊಳಿಸಲು ಬಿಬಿಎಂಪಿಯಿಂದ ಸೇಲ್ಸ್ ಕೌಂಟರ್

author img

By

Published : Aug 3, 2022, 8:15 PM IST

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ ಹರ್ ಘರ್ ತಿರಂಗಾ ಅಭಿಯಾನ ನಡೆಯಲಿದೆ. ಇದನ್ನು ಯಶಸ್ವಿಗೊಳಿಸಲು ಸೇಲ್ಸ್​ ಕೌಂಟರ್​ ತೆರೆಯಲು ಬಿಬಿಎಂಪಿ ವಿಶೇಷ ಆಯುಕ್ತ ರಂಗಪ್ಪ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Har Ghar Tiranga campaign
ಪಾಲಿಕೆ ವಿಶೇಷ ಆಯುಕ್ತ ರಂಗಪ್ಪ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ “ಹರ್ ಘರ್ ತಿರಂಗಾ” ಅಭಿಯಾನವನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಆಯಾ ವಲಯ ಕಚೇರಿ, ವಾರ್ಡ್, ಸರ್ಕಾರಿ ಕಚೇರಿ/ಕಟ್ಟಡಗಳು, ಪ್ರಮುಖ ಮಾಲ್‌ಗಳು, ಜನನಿಬಿಡ ಪ್ರದೇಶಗಳೂ ಸೇರಿದಂತೆ ಇತರ ಪ್ರಮುಖ ಸ್ಥಳಗಳಲ್ಲಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವ ಸಲುವಾಗಿ ಕೂಡಲೇ ಸೇಲ್ಸ್ ಕೌಂಟರ್(ಮಾರಾಟ ಮಳಿಗೆ) ತೆರೆಯಲು ವಿಶೇಷ ಆಯುಕ್ತ ರಂಗಪ್ಪ ಎಲ್ಲ ವಲಯ ಜಂಟಿ ಆಯುಕ್ತರಿಗೆ ಸೂಚನೆ ನೀಡಿದ್ದಾರೆ.

75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 13 ರಿಂದ 15 ರವರೆಗೆ “ಹರ್ ಘರ್ ತಿರಂಗಾ” ಅಭಿಯಾನ ನಡೆಯಲಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಇದನ್ನು ಯಶಸ್ವಿಗೊಳಿಸುವ ನಿಟ್ಟಿನಲ್ಲಿ ಇಂದು ವರ್ಚುವಲ್ ಸಭೆ ನಡೆಯಿತು. ಈ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಂಗಪ್ಪ, ಆಯಾ ವಲಯ ವ್ಯಾಪ್ತಿಯಲ್ಲಿ ಮಾರಾಟ ಮಾಡುವ ಸ್ಥಳಗಳಲ್ಲಿ ಕೂಡಲೇ ಸೇಲ್ಸ್ ಕೌಂಟರ್​​ಗಳನ್ನು ತೆಗೆಯಬೇಕು, ಅಲ್ಲದೇ ಈ ಬಗ್ಗೆ ನಾಗರಿಕರಿಗೆ ಜಾಗೃತಿ ಮೂಡಿಸುವಂತೆ ಸೂಚಿಸಿದರು.

ವರದಿ ನೀಡಲು ಅಧಿಕಾರಿಗಳಿಗೆ ಸೂಚನೆ: ಬಿಬಿಎಂಪಿ ವ್ಯಾಪ್ತಿಯಲ್ಲಿ ಇದುವರೆಗೆ 6 ಲಕ್ಷ ರಾಷ್ಟ್ರ ಧ್ವಜಗಳನ್ನು ವಿತರಿಸಲಾಗಿದೆ. ಅದಲ್ಲದೆ ಇಂದು ಇನ್ನೂ 4 ಲಕ್ಷ ರಾಷ್ಟ್ರ ಧ್ವಜಗಳು ಬರಲಿದ್ದು, ಅವುಗಳನ್ನು ಕೂಡ ವಲಯವಾರು ಹಂಚಿಕೆ ಮಾಡಲಾಗುವುದು. ಈ ಪೈಕಿ ನಗರದ ಪ್ರಮುಖ ಸ್ಥಳಗಳಾದ ವಿಧಾನಸೌಧ, ಎಂ.ಎಸ್ ಬಿಲ್ಡಿಂಗ್, ಬಿಬಿಎಂಪಿ ಕೇಂದ್ರ ಕಚೇರಿಯ ನಾಗರಿಕ ಸೇವಾ ಕೇಂದ್ರ, ರವೀಂದ್ರ ಕಲಾಕ್ಷೇತ್ರ, ಮಂತ್ರಿ ಮಾಲ್, ಒರಾಯನ್ ಮಾಲ್, ಆರ್.ಎಂ.ಝಡ್ ಮಾಲ್ ಸೇರಿದಂತೆ ಇನ್ನಿತರೆ ಪ್ರಮುಖ ಸ್ಥಳಗಳಲ್ಲಿ ಮಾರಾಟ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕು. ಜೊತೆಗೆ ವಲಯವಾರು ಎಷ್ಟು ಸ್ಥಳಗಳಲ್ಲಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲಾಗುತ್ತಿದೆ, ವಲಯವಾರು ವಿತರಿಸಿರುವ ರಾಷ್ಟ್ರ ಧ್ವಜಗಳಲ್ಲಿ ಎಷ್ಟು ಮಾರಾಟವಾಗಿವೆ. ಇನ್ನೂ ಎಷ್ಟು ಮಾರಾಟ ಮಾಡಬೇಕಿದೆ ಎಂಬುದರ ಬಗ್ಗೆ ಪ್ರತಿನಿತ್ಯ ವರದಿಯನ್ನು ನೀಡಲು ಅಧಿಕಾರಿಗಳಿಗೆ ಹೇಳಿದರು.

ದೇಶ ಭಕ್ತಿ ಬಿಂಬಿಸಲು ಕರಪತ್ರ: ಪಾಲಿಕೆಯ ಆಯಾ ವಲಯ ವ್ಯಾಪ್ತಿಯಲ್ಲಿ ಪ್ರತಿ ಮನೆ ಮನೆಯಲ್ಲೂ ರಾಷ್ಟ್ರ ಧ್ವಜವನ್ನು ಹಾರಿಸಿ ದೇಶ ಭಕ್ತಿ ಬಿಂಬಿಸಲು ಕರಪತ್ರ, ಬ್ಯಾಡ್ಜ್ ಸೇರಿದಂತೆ ಇನ್ನಿತರೆ ಸೂಕ್ತ ಪ್ರಚಾರ ಸಾಮಗ್ರಿಗಳಿಂದ ಪ್ರಚಾರ ಕಾರ್ಯ ಕೈಗೊಳ್ಳಬೇಕು. ಪಾಲಿಕೆಯ ಘನತ್ಯಾಜ್ಯ ವಿಭಾಗ ವಾಹನಗಳನ್ನು ಹರ್ ಘರ್ ತಿರಂಗಾ ಅಭಿಯಾನದ ಪ್ರಚಾರ ಕಾರ್ಯಕ್ಕೆ ಉಪಯೋಗಿಸಿಕೊಳ್ಳಬೇಕು. ರಾಷ್ಟ್ರ ಧ್ವಜ ಬಳಕೆಯ ಹಾಗೂ ಅಭಿಯಾನ ಮುಗಿದ ನಂತರ ರಾಷ್ಟ್ರಧ್ವಜವನ್ನು ಶಿಷ್ಠಾಚಾರದ ರೀತಿ ಬದಿಗರಿಸುವ ಬಗ್ಗೆ ನಾಗರಿಕರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದು ತಿಳಿಸಿದರು.

ಜಾಗೃತಿ ಕಾರ್ಯಕ್ರಮ: ಪಾಲಿಕೆಯ ಅಧಿಕಾರಿಗಳು ಪ್ರತಿ ಮನೆ-ಮನೆಗೂ ಭೇಟಿ ನೀಡಿ ರಾಷ್ಟ್ರ ಧ್ವಜಗಳನ್ನು ಮಾರಾಟ ಮಾಡಬೇಕು. ಹರ್ ಘರ್ ತಿರಂಗಾ ಅಭಿಯಾನದ ಬಗ್ಗೆ ಸಾಮಾನ್ಯ ಜನರಿಗೆ ತಿಳುವಳಿಕೆ ನೀಡಬೇಕು. ಪಾಲಿಕೆಯ ಶಾಲಾ-ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಮೂಲಕ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಭೆಯಲ್ಲಿ ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.