ಬೆಂಗಳೂರು: ಲಾಕ್ಡೌನ್ ಸಡಿಲಿಕೆ ಬೆನ್ನಲ್ಲೆ ಬಿಬಿಎಂಪಿ ಆಯುಕ್ತ ಬಿ.ಹೆಚ್. ಅನಿಲ್ ಕುಮಾರ್, ಪಾಲಿಕೆ ವ್ಯಾಪ್ತಿಯ ಹೋಟೆಲ್, ಮಾಲ್, ರೆಸ್ಟೋರೆಂಟ್ಗಳಿಗೆ ಹೊಸ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದ್ದಾರೆ.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ಮಾಸ್ಕ್, ಸ್ಯಾನಿಟೈಸರ್ ಬಳಕೆ, ಪಾರ್ಕಿಂಗ್ ವ್ಯವಸ್ಥೆಗೆ ತಾತ್ಕಾಲಿಕ ನಿರ್ಬಂಧ, ಅರ್ಧದಷ್ಟು ಜನರಿಗೆ ಮಾತ್ರ ಹೋಟೆಲ್ನಲ್ಲಿ ಅವಕಾಶ ನೀಡಬೇಕೆಂದು ಆದೇಶಿಸಿದ್ದಾರೆ. ಇ-ಪೇಮೆಂಟ್ ಬಳಕೆ, ಆರ್ಡರ್ ಮಾಡಲು ಇ-ತಂತ್ರಾಂಶ ಬಳಕೆ, ಪ್ರತಿ ಬಾರಿಯೂ ಟೇಬಲ್, ಕುರ್ಚಿಗಳಿಗೆ ಸ್ಯಾನಿಟೈಸ್ ಮಾಡುವುದು, ಕೊರೊನಾ ಸೋಂಕು ಜಾಗೃತಿಗೆ ಸಂಬಂಧಿಸಿದಂತೆ ಸಾಕ್ಷ್ಯಚಿತ್ರ, ಹಾಡು, ಚಿತ್ರಗಳ ಮೂಲಕ ಜಾಗೃತಿ ಮೂಡಿಸುವುದು, ಎಸಿ ಪ್ರಮಾಣ 30 ಡಿಗ್ರಿ ಸೆಲ್ಸಿಯಸ್ನಷ್ಟು ಮಾತ್ರ ಬಳಕೆ, ಅನಾರೋಗ್ಯ ಸಮಸ್ಯೆ ಬಂದರೆ ಕೂಡಲೇ ಪಾಲಿಕೆ ಗಮನಕ್ಕೆ ತರಲು ಸೂಚಿಸಲಾಗಿದೆ.

ಮಾಲ್, ರೆಸ್ಟೋರೆಂಟ್ಗಳಲ್ಲೂ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆಯೇ ಆದೇಶ ಹೊರಡಿಸಿದ್ದಾರೆ. ಆರ್.ಆರ್. ನಗರ ಸೇರಿದಂತೆ ಹಲವೆಡೆ ಅಧಿಕಾರಿಗಳು ಹೋಟೆಲ್ಗಳಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.