ಬೆಂಗಳೂರು: ಹೋಮ್ ಕ್ವಾರಂಟೈನ್ನಲ್ಲಿ ಇರಬೇಕಾದವರ ಪಟ್ಟಿಯನ್ನು ನಗರದ ಆಯಾ ವಿಭಾಗದ ಪೊಲೀಸರುವ ಮತ್ತು ಬಿಬಿಎಂಪಿ ಆರೋಗ್ಯಾಧಿಕಾರಿಗಳು ಬಿಡುಗಡೆ ಮಾಡಿದ್ದಾರೆ.
ಮಾಹಾಮಾರಿ ಕೊರೊನಾ ವೈರಸ್ ರಾಜ್ಯದ ಜನರಲ್ಲಿ ಆತಂಕ ಸೃಷ್ಟಿಸಿದೆ. ಪೀಡಿತರ ಮತ್ತು ಶಂಕಿತರ ಸಂಖ್ಯೆ ಗಣನೀಯವಾಗಿ ಏರಿಕೆ ಕಾಣುತ್ತಿದೆ. ಬಿಬಿಎಂಪಿಯ ಆರೋಗ್ಯಧಿಕಾರಿಗಳು ಕೈಗೆ ಸೀಲು ಹಾಕಿ ಮನೆ ಬಿಟ್ಟು ಎಲ್ಲೂ ಹೋಗದಂತೆ ಎಚ್ಚರಿಕೆ ನೀಡಿದ್ದಾರೆ.
ಒಂದು ವೇಳೆ ಮನೆಯಿಂದ ಈ ವ್ಯಕ್ತಿಗಳು ಹೊರ ಬಂದರೆ ಪೊಲೀಸರು ಸೆಕ್ಷನ್ 269 ಹಾಗೂ 270ರ ಅಡಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.