ETV Bharat / state

ದುರ್ಗಾಪೂಜೆಗೆ ಬಿಬಿಎಂಪಿ ಪ್ರತ್ಯೇಕ ಮಾರ್ಗಸೂಚಿ: ಸಾರ್ವಜನಿಕ ಸ್ಥಳಗಳಲ್ಲಿ 5 ದಿನ ಪೂಜೆಗೆ ಅವಕಾಶ - Durga Puja

ಅಕ್ಟೋಬರ್ 11 ರಿಂದ ಅ.15 ರವರೆಗೆ ದುರ್ಗಾ ಪೂಜೆಗೆ ಅವಕಾಶ ಕೊಡುವಂತೆ ಮೈತ್ರಿ ಬಂಧನ್ ಸಮಾಜ ಮನವಿ ಮಾಡಿದ ಹಿನ್ನೆಲೆಯಲ್ಲಿ ಬಿಬಿಎಂಪಿ ಅನುಮತಿ ನೀಡಿ, ಮಾರ್ಗಸೂಚಿ ಬಿಡುಗಡೆ ಮಾಡಿದೆ.

BBMP
BBMP
author img

By

Published : Oct 6, 2021, 12:17 PM IST

ಬೆಂಗಳೂರು: ನವರಾತ್ರಿ ವೇಳೆ ದುರ್ಗಾ ಪೂಜೆಗೆ ಸಂಬಂಧಿಸಿದಂತೆ ಬಿಬಿಎಂಪಿ, ನಗರಕ್ಕೆ ಪ್ರತ್ಯೇಕ ಮಾರ್ಗಸೂಚಿ ಹೊರಡಿಸಿದೆ.

ಅಕ್ಟೋಬರ್ 11 ರಿಂದ ಅ.15 ರವರೆಗೆ ದುರ್ಗಾ ಪೂಜೆಗೆ ಅವಕಾಶ ಕೊಡುವಂತೆ ಮೈತ್ರಿ ಬಂಧನ್ ಸಮಾಜ ಮನವಿ ಮಾಡಿದ್ದು ಬಿಬಿಎಂಪಿ ಅನುಮತಿ ನೀಡಿ, ಈ ಕೆಳಗಿನ ಮಾರ್ಗಸೂಚಿಗಳನ್ನು ಪಾಲಿಸುವಂತೆ ಹೇಳಿದೆ.

  • ನಗರದಲ್ಲಿ 5 ದಿನ ದುರ್ಗಾ ಪೂಜೆಗೆ ಅವಕಾಶ
  • 4 ಅಡಿ ಮೀರದಂತೆ ದುರ್ಗಾದೇವಿ ಮೂರ್ತಿ ಇರಬೇಕು
  • ಮೂರ್ತಿ ಕೂರಿಸುವ ಸ್ಥಳ ಸ್ಯಾನಿಟೈಸ್ ಮಾಡಬೇಕು
  • ವಾರ್ಡ್​ಗೆ ಒಂದೇ ಮೂರ್ತಿ ಕೂರಿಸಲು ಅವಕಾಶವಿದ್ದು, ಜಂಟಿ ಆಯುಕ್ತರಿಂದ ಅನುಮತಿ ಪಡೆಯಬೇಕು
  • ಸಾಮಾನ್ಯ ಪ್ರಾರ್ಥನೆಗೆ ಮಾತ್ರ ಅವಕಾಶ
  • 50 ಜನ ಮೀರದಂತೆ ಪ್ರಾರ್ಥನೆಯಲ್ಲಿ ಭಾಗವಹಿಸಬೇಕು
  • ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಅಗತ್ಯ
  • ಪೂಜಾ ಸ್ಥಳದಲ್ಲಿ ಹಣ್ಣು, ಹೂ, ಸಿಹಿ ವಿತರಣೆಗೆ ಅವಕಾಶವಿಲ್ಲ
  • ಕೇವಲ 100 ಜನರಿಗೆ ಮಾತ್ರ ಪಾಸ್, ಅಹ್ವಾನ ಪತ್ರಿಕೆ ನೀಡಬೇಕು
  • ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ
  • ದಿನಕ್ಕೆ ನಾಲ್ಕು ಬಾರಿ ಕುರ್ಚಿ, ಟೇಬಲ್​ಗಳಿಗೆ ಸ್ಯಾನಿಟೈಸ್ ಮಾಡಬೇಕು
  • ಕೋವಿಡ್ ನಿಯಮಗಳ ಕುರಿತು ಡಿಸ್ ಪ್ಲೇ ಅಳವಡಿಸಬೇಕು
  • ಕುಡಿಯುವ ನೀರಿನ ವ್ಯವಸ್ಥೆ ಮಾಡಬೇಕು
  • ಮೂರ್ತಿ ವಿಸರ್ಜನೆಗೆ ಜಂಟಿ ಆಯುಕ್ತರು ಅನುಮತಿ ನೀಡಿರುವ ಸಾರ್ವಜನಿಕ ಕೆರೆ, ಟ್ಯಾಂಕ್​ನಲ್ಲಿಯೇ ಬಿಡಬೇಕು.

ಈ ಮೇಲಿನ ನಿಯಮಗಳನ್ನು ಸಂಘಟನೆಗಳು ಪಾಲಿಸದಿದ್ದಲ್ಲಿ, ಪೂಜಾ ಅನುಮತಿ ಹಿಂಪಡೆಯಲಾಗುವುದು ಎಂದು ಬಿಬಿಎಂಪಿ ಎಚ್ಚರಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.