ETV Bharat / state

ಆರೋಗ್ಯ ವ್ಯವಸ್ಥೆಯಲ್ಲಿ ತಂತ್ರಾಂಶ ಬಳಕೆ: 2 ಆ್ಯಪ್ ಬಿಡುಗಡೆ ಮಾಡಿದ ಬಿಬಿಎಂಪಿ - ಕೋವಿಡ್ ಪಿ.ಹೆಚ್.ಸಿ ಆ್ಯಪ್

ಇಂದು ಬಿಬಿಎಂಪಿಯಿಂದ ಕೋವಿಡ್ ಆಸ್ಪತ್ರೆಗಳ ಹಾಸಿಗೆ ನಿರ್ವಹಣಾ ವ್ಯವಸ್ಥೆ ಆ್ಯಪ್ ಹಾಗೂ ಕೋವಿಡ್ ಪಿ.ಹೆಚ್.ಸಿ ಆ್ಯಪ್ ಬಿಡುಗಡೆ ಮಾಡಲಾಯಿತು.

Bbmp
Bbmp
author img

By

Published : Aug 6, 2020, 1:08 PM IST

ಬೆಂಗಳೂರು: ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆ ಎಲ್ಲ ಮಾಹಿತಿಯನ್ನು ಒಳಗೊಂಡ ಆ್ಯಪ್ ಅನ್ನು ಬಿಬಿಎಂಪಿ ಯಿಂದ ಡಿಸಿಎಂ ಅಶ್ವಥ್ ನಾರಾಯಣ್ ಇಂದು ಬಿಡುಗಡೆ ಮಾಡಿದರು.

ಕೋವಿಡ್ ಆಸ್ಪತ್ರೆಗಳ ಹಾಸಿಗೆ ನಿರ್ವಹಣಾ ವ್ಯವಸ್ಥೆ ಆ್ಯಪ್ ಹಾಗೂ ಕೋವಿಡ್ ಪಿ.ಹೆಚ್.ಸಿ ಆ್ಯಪ್ ಬಿಡುಗಡೆ ಮಾಡಲಾಯಿತು. ಕೋವಿಡ್ ಪಿ.ಹೆಚ್.ಸಿ ಆ್ಯಪ್​​​​ನಲ್ಲಿ ಯಾವ ಆಸ್ಪತ್ರೆಯಲ್ಲಿ ಎಷ್ಟು ಹಾಸಿಗೆ ಇದೆ. ಪ್ರಾಥಮಿಕ ಆರೋಗ್ಯ ಕೇಂದ್ರ ಎಲ್ಲಿದೆ ಎಂಬ ಮಾಹಿತಿ ಲಭ್ಯವಾಗಲಿದೆ‌. ಜೊತೆಗೆ ಕೋವಿಡ್ ಸಂಪರ್ಕಿತರ ಮಾಹಿತಿ ಪತ್ತೆ ಹಂಚುವಿಕೆ, ಕಂಟೇನ್​​​ಮೆಂಟ್ ವಲಯ ನಿರ್ವಹಣೆ, ಜ್ವರ ತಪಾಸಣಾ ಕೇಂದ್ರಗಳ ನಿರ್ವಹಣೆ, ಗಂಟಲು ದ್ರವ ಮಾದರಿ ಪರೀಕ್ಷೆ ಮಾಹಿತಿಗಳನ್ನು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ ಪಡೆದು, ಸಮಗ್ರ ವರದಿಯನ್ನು ನಿತ್ಯ ಪ್ರಚಾರ ಪಡಿಸಲು ಕ್ರಮ ಕೈಗೊಳ್ಳಲಾಗಿದೆ.

ಕೋವಿಡ್ ಪ್ರಕರಣಗಳನ್ನು ತ್ವರಿತವಾಗಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್ ಅಡಿ ದಾಖಲಿಸಲು "ಕೋವಿಡ್ ಹಾಸ್ಪಿಟಲ್ ಬೆಡ್ ಮ್ಯಾನೇಜ್​​ಮೆಂಟ್ ಸಿಸ್ಟಂ" ಸಿ ಹೆಚ್ ಬಿ ಎಂ ಎಸ್ ಎಂಬ ತಂತ್ರಾಂಶ ಅಭಿವೃದ್ಧಿ ಮಾಡಲಾಗಿದೆ.

ಬಿಬಿಎಂಪಿ ಆಯುಕ್ತರಾದ ಮಂಜುನಾಥ್ ಪ್ರಸಾದ್ ಮಾತನಾಡಿ, ಆರೋಗ್ಯದ ವ್ಯವಸ್ಥೆಯಲ್ಲಿ ಬದಲಾವಣೆ ತರುವ ಉದ್ದೇಶದಿಂದ ಬಿಬಿಎಂಪಿ ಆ್ಯಪ್ ಪರಿಚಯಿಸಿದೆ. 141 ಪ್ರೈಮರಿ ಹೆಲ್ತ್ ಸೆಂಟರ್ ಇದ್ದು, ಅಲ್ಲಿಗೆ ಬರುವ ರೋಗಿಗಳ ಮಾಹಿತಿ, ಚಿಕಿತ್ಸೆಯ ಮಾಹಿತಿಗಾಗಿ ಈ ಆ್ಯಪ್ ಬಿಡುಗಡೆ ಮಾಡಲಾಗಿದೆ ಎಂದರು.

ಡಿಸಿಎಂ ಅಶ್ವತ್ಥ ನಾರಾಯಣ್ ಮಾತನಾಡಿ, ಬೆಂಗಳೂರಿನಲ್ಲಿ ಒಂದೂವರೆ ಕೋಟಿ ಜನ ವಾಸ ಮಾಡುತ್ತಿದ್ದಾರೆ. ಲಕ್ಷ ಗಟ್ಟಲೆ ಜನ ನಗರಕ್ಕೆ ಬರುತ್ತಿದ್ದು, ಆರೋಗ್ಯಕ್ಕೆ ಹೆಚ್ಚು ಗಮನ ಕೊಡಬೇಕಾಗಿದೆ. ಆರೊಗ್ಯ ಕ್ಷೇತ್ರದಲ್ಲಿ ಸಬಲೀಕರಣ ಹಾಗೂ ಉತ್ತಮ ಸೇವೆ ನೀಡಲು ಬಿಬಿಎಂಪಿ ಮುಂದಾಗಿದೆ. ಈ ಆ್ಯಪ್ ಮೂಲಕ ಆರೋಗ್ಯ ಕೇಂದ್ರದಲ್ಲಿನ ಪ್ರತಿಯೊಬ್ಬ ರೋಗಿಯ ಮಾಹಿತಿ ನೀಡುತ್ತದೆ. ಜೊತೆಗೆ ನರ್ಸ್, ಆಶಾ ಕಾರ್ಯಕರ್ತೆಯರು, ಎಲ್ಲ ಫೀಲ್ಡ್ ಕೆಲಸಗಾರರಿಗೆ ಟ್ಯಾಬ್ ನೀಡಲಾಗುತ್ತದೆ ಎಂದರು.

ಈ ವೇಳೆ, ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್ ರಾಜು, ಮೇಯರ್ ಗೌತಮ್ ಕುಮಾರ್, ಆಯುಕ್ತರಾದ ಮಂಜುನಾಥ್ ಪ್ರಸಾದ್, ವಿಶೇಷ ಆಯುಕ್ತ ರಂದೀಪ್ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.