ಬೆಂಗಳೂರು : ಕೇಂದ್ರ ಸರ್ಕಾರದ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಹಮ್ಮಿಕೊಂಡ 'ಸ್ವಚ್ಛ ಸರ್ವೇಕ್ಷಣ್ 2021' (40 ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆ ವರ್ಗ) ಸ್ಪರ್ಧೆಯಲ್ಲಿ ಬೆಂಗಳೂರು ಬೃಹತ್ ಮಹಾನಗರ ಪಾಲಿಕೆಗೆ(BBMP) ರಾಷ್ಟ್ರೀಯ ಮಟ್ಟದಲ್ಲಿ "ಸ್ವಚ್ಛ ನಗರ" ಪ್ರಶಸ್ತಿ ಲಭಿಸಿದೆ.
ಬಿಬಿಎಂಪಿ ಈ ರಾಷ್ಟ್ರೀಯ ಮಟ್ಟದ ಪುರಸ್ಕಾರ ಪಡೆದಿರುವುದಕ್ಕೆ ಪಾಲಿಕೆ ಆಡಳಿತಾಧಿಕಾರಿ ರಾಕೇಶ್ ಸಿಂಗ್(Rakesh singh) ಸಂತಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ:ಕರ್ನಾಟಕದ ಮುಡಿಗೆ ಕೇಂದ್ರದ “ಸ್ವಚ್ಛ ಸರ್ವೇಕ್ಷಣಾ-2021" ಪ್ರಶಸ್ತಿ..
'ಸ್ವಚ್ಛ ನಗರ ಪ್ರಶಸ್ತಿ' (swachh city award)ಯನ್ನು ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿಗಳಾದ ದುರ್ಗಾ ಶಂಕರ್ ಮಿಶ್ರಾ ಇಂದು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಿದರು.
ಬಿಬಿಎಂಪಿ ಪರವಾಗಿ ಮುಖ್ಯ ಆಯುಕ್ತರಾದ ಗೌರವ್ ಗುಪ್ತರವರಿಗೆ 'ಸ್ವಚ್ಛ ನಗರ ಪ್ರಶಸ್ತಿ' ಅನ್ನು ಪ್ರದಾನ ಮಾಡಿದರು. ವೇದಿಕೆಯಲ್ಲಿ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರು ಡಾ. ಹರೀಶ್ ಕುಮಾರ್ ಮತ್ತು ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತರಾದ ಸರ್ಫರಾಜ್ ಖಾನ್ ಭಾಗಿಯಾಗಿದ್ದರು.