ETV Bharat / state

ಹೈಟೆನ್ಷನ್ ಲೈನ್ ಕೆಳಗೆ ವಾಸಿಸುವ ಮನೆ ಮಾಲೀಕರಿಗೆ ಶುರುವಾಯ್ತು ಆತಂಕ.. - ETV Bharath Kannada news

ಹೈಟೆನ್ಷನ್ ಲೈನ್​ಗೆ ಗಾಳಿಪಟ ತಗುಲಿ ಬಾಲಕನ ಸಾವು - ಬಿಬಿಎಂಪಿಯಿಂದ ಹೈಟೆನ್ಷನ್ ಲೈನ್ ಅಡಿ ಮನೆ ಕಟ್ಟಿದವರಿಗೆ ನೋಟಿಸ್​ -​ ಪರ್ಯಾಯ ವ್ಯವಸ್ಥೆ ಬಗ್ಗೆಯೂ ಚಿಂತನೆ.

high tension lines
ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ
author img

By

Published : Jan 21, 2023, 5:31 PM IST

ಬಿಬಿಎಂಪಿಯಿಂದ ಹೈಟೆನ್ಷನ್ ಲೈನ್ ಅಡಿ ಮನೆ ಕಟ್ಟಿದವರಿಗೆ ನೋಟಿಸ್ - ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ

ಬೆಂಗಳೂರು: ಮನೆ ಮೇಲೆ ಗಾಳಿಪಟ ಹಾರಿಸಲು ಹೋದ 11 ವರ್ಷದ ಬಾಲಕನಿಗೆ ಹೈಟೆನ್ಷನ್ ಲೈನ್ ತಾಕಿ ಮೃತಪಟ್ಟ ಘಟನೆ ಹಿನ್ನಲೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ಹೈಟೆನ್ಷನ್ ಲೈನ್ ಹಾದು ಹೋಗಿರುವ ಪ್ರದೇಶಗಳಲ್ಲಿ ಅನಧಿಕೃತವಾಗಿ ಕಟ್ಟಡ ಕಟ್ಟಿಕೊಂಡು ವಾಸಿಸುತ್ತಿರುವವರಿಗೆ ನೋಟೀಸ್ ನೀಡಲು ತೀರ್ಮಾನಿಸಲಾಗಿದೆ. ಇದರಿಂದ ಮನೆ ಮಾಲೀಕರುಗಳಿಗೆ ಆತಂಕ ಶುರುವಾಗಿದೆ. ಹೈಟೆನ್ಷನ್ ಲೈನ್ ಹಾದು ಹೋಗಿರುವ ಜಾಗದಲ್ಲಿ ಸುಮಾರು 10 ಸಾವಿರ ಮನೆಗಳನ್ನು ನಿರ್ಮಾಣ ಮಾಡಿಕೊಳ್ಳಲಾಗಿದೆ. ಈ ಮನೆಗಳನ್ನು ತೆರವುಗೊಳಿಸುವಂತೆ ಬೆಸ್ಕಾಂ ಸಂಸ್ಥೆಯವರು ಬಿಬಿಎಂಪಿಯವರಿಗೆ ಮನವಿ ಮಾಡಿಕೊಂಡಿದ್ದಾರೆ. ಅಲ್ಲದೇ ಪರ್ಯಾಯ ವ್ಯವಸ್ಥೆ ಮಾಡುವ ಸಾಧ್ಯತೆಗಳ ಬಗ್ಗಯೂ ಚಿಂತಿನೆ ಮಾಡಲಾಗುವುದು. ಹೀಗಾಗಿ ನೋಟಿಸ್ ನೀಡಲು ನಿರ್ಧರಿಸಿದ್ದೇವೆ ಎಂದು ಬಿಬಿಎಂಪಿ ವಿಶೇಷ ಆಯುಕ್ತ ರವೀಂದ್ರ ತಿಳಿಸಿದ್ದಾರೆ.

ನಗರದಲ್ಲಿ ಹಲವೆಡೆ ಅದಕ್ಕೂ ಮೀರಿ ಕಟ್ಟಡಗಳನ್ನು ಕಟ್ಟಿಕೊಂಡಿರುವುದು ಪತ್ತೆಯಾಗಿದೆ ಎಂದು ಅವರು ಹೇಳಿದ್ದಾರೆ. ಈ ರೀತಿ ಕಾನೂನು ಉಲ್ಲಂಘಿಸಿ ಕಟ್ಟಡ ಕಟ್ಟಿಕೊಂಡಿರುವವರಿಗೂ ನೋಟೀಸ್‌ ನೀಡಲು ನಾವು ತೀರ್ಮಾನಿಸಿದ್ದೇವೆ. ಜೊತೆಗೆ ಬೆಸ್ಕಾಂನವರು ನೀಡಿರುವ 10 ಸಾವಿರ ಮನೆಗಳ ಸರ್ವೇ ಮಾಡಿ ದಾಖಲೆ ಪರಿಶೀಲನೆ ನಡೆಸುವಂತೆ ಎಲ್ಲಾ ವಲಯ ಮುಖ್ಯ ಅಭಿಯಂತರರಿಗೆ ಸೂಚನೆ ನೀಡಲಾಗಿದೆ ಎಂದು ರವೀಂದ್ರ ವಿವರಿಸಿದ್ದಾರೆ.

ಕಾನೂನೂ ಮೀರಿ ಅಂತಸ್ತು ನಿರ್ಮಾಣ: ತ್ವರಿತಗತಿಯಲ್ಲಿ ಬೆಸ್ಕಾಂ ಪಟ್ಟಿ ಸರ್ವೇ ಮಾಡಿ ಮಾಹಿತಿ ದಾಖಲಿಸುವಂತೆ ಪಾಲಿಕೆ ಇಂಜಿನಿಯರ್​ಗಳಿಗೆ ತಾಕೀತು ಮಾಡಲಾಗಿದೆ. ಜನರು ಕಾನೂನು ಮೀರಿ ಹೆಚ್ಚುವರಿ ಅಂತಸ್ತು ನಿರ್ಮಾಣ ಮಾಡಿರುವುದರಿಂದ ಇಂತಹ ಅವಘಡಗಳು ಸಂಭವಿಸುತ್ತಿದ್ದು, ಭವಿಷ್ಯದಲ್ಲಿ ಮತ್ತೆ ಇಂತಹ ಘಟನೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ನಾವು ಈ ತೀರ್ಮಾನ ಕೈಗೊಂಡಿದ್ದೇವೆ ಎಂದು ಸಮಜಾಯಿಷಿ ನೀಡಿದ್ದಾರೆ.

ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಘಟನೆ: ಇತ್ತೀಚೆಗೆ ಬೆಂಗಳೂರಿನಲ್ಲಿ ಮನೆಯ ಟೆರೇಸ್​ನಲ್ಲಿ ಗಾಳಿಪಟ ಹಾರಿಸುವಾಗ ಹೈಟೆನ್ಷನ್ ತಂತಿ ತಗುಲಿ ಬಾಲಕ ಸಾವನ್ನಪ್ಪಿರುವ‌ ಘಟನೆ ಆರ್.ಟಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಚಾಮುಂಡಿ ನಗರದ ವಿಶ್ವೇಶ್ವರಯ್ಯ ಲೇಔಟ್​ನಲ್ಲಿ‌ ಕಳೆದ‌ ಸೋಮವಾರ ಸಂಭವಿಸಿತ್ತು. 12 ವರ್ಷದ ಅಬೂಬಕರ್ ಸಾವನ್ನಪ್ಪಿದ್ದರು.

ಅಬೂಬಕರ್ ಗಾಳಿಪಟ ಹಾರಿಸುವಾಗ ಪಕ್ಕದಲ್ಲಿ ಹೈಟೆನ್ಷನ್ ಕಂಬದ ತಂತಿಯಿಂದ ವಿದ್ಯುತ್ ಪ್ರವಹಿಸಿ ಗಾಯಗೊಂಡಿದ್ದ. ತಕ್ಷಣ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಬಾಲಕ ಸಾವನ್ನಪ್ಪಿದ್ದಾನೆ. ಈ ಸಂಬಂಧ ಬಾಲಕನ ಮನೆಯವರು ಪೊಲೀಸರಿಗೆ ದೂರು ನೀಡಿಲ್ಲ. ದೂರು ಬಂದರೆ ಪ್ರಕರಣ ದಾಖಲಿಸಿಕೊಂಡು ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಆರ್.ಟಿ.ನಗರ ಪೊಲೀಸರು ತಿಳಿಸಿದ್ದರು. ನಂತರ ಬಾಲಕನ ತಂದೆ ಬಿಬಿಎಂಪಿ, ಬೆಸ್ಕಾಂ ಮತ್ತು ಕೆಪಿಟಿಸಿಎಲ್ ಅಧಿಕಾರಿಗಳ ವಿರುದ್ಧ ದಾಖಲು ಮಾಡಿದ್ದಾರೆ.

ಕಳೆದ ವರ್ಷ ಡಿಸೆಂಬರ್ 1ರಂದು ಮಹಾಲಕ್ಷ್ಮೀ ಲೇಔಟ್‌ನಲ್ಲಿ ಹೈಟೆನ್ಶನ್ ಲೈನ್ ತಗುಲಿ ಸುಪ್ರೀತ್ ಹಾಗೂ ಚಂದು ಸಾವನ್ನಪ್ಪಿದ್ದರು. ಪಾರಿವಾಳ ಹಿಡಿಯಲು ಹೋಗಿ ಇಬ್ಬರಿಗೆ ವಿದ್ಯುತ್ ತಂತಿ ತಗುಲಿತ್ತು. ಪಾರಿವಾಳ ಹಿಡಿಯಲು ಸ್ನೇಹಿತನ ಜೊತೆ ಹೋಗಿದ್ದಾಗ ವೈರ್ ಸ್ಪರ್ಶವಾಗಿದೆ. ಈ ವೇಳೆ ಇಬ್ಬರು ಬಾಲಕರಿಗೆ ತೀವ್ರ ಸುಟ್ಟ ಗಾಯಗಳಾಗಿದ್ದವು. ತೀರ ಕೆಳಕ್ಕಿರುವ ಹೈಟೆನ್ಷನ್ ಲೈನ್ ಬಗ್ಗೆ ಬೆಸ್ಕಾಂ ವಿರುದ್ಧ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು.

ಆದರೆ ಬೆಂಗಳೂರಿನಲ್ಲಿ ಹೈಟೆನ್ಷನ್ ಲೈನ್​ ಅಡಿಯಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ನಿಯಮದಂತೆ ಅವಕಾಶ ಇಲ್ಲದಿದ್ದರೂ ಅಕ್ರಮವಾಗಿ ಮನೆ ನಿರ್ಮಾಣ ಮಾಡಲಾಗಿದೆ. ಕೆಲವರು ಲಂಚ ಕೊಟ್ಟು ಜಾಗಕ್ಕೆ ಒಪ್ಪಿಗೆಯನ್ನೂ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಿನಲ್ಲಿ ಬಿಬಿಎಂಪಿ ಅವಘಡ ಆದ ನಂತರ ಎಚ್ಚೆತ್ತುಕೊಂಡಿದ್ದು ಮುಂದೆ ಈ ರೀತಿ ಪ್ರಕರಣ ಆಗದಂತೆ ಮುನ್ನೆಚ್ಚರಿಕೆ ವಹಿಸುತ್ತಿದೆ.

ಇದನ್ನೂ ಓದಿ: ಗಾಳಿಪಟ ಹಾರಿಸುವಾಗ ಅವಘಡ: ಹೈಟೆನ್ಶನ್​ ತಂತಿ ತಗುಲಿ ಬಾಲಕ ಸಾವು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.