ಬೆಂಗಳೂರು: ಆಸ್ತಿ ತೆರಿಗೆ ಘೋಷಣೆ ವಿವರದಲ್ಲಿ ತೆರಿಗೆ ಕಡಿಮೆ ಮಾಡಲು ವಲಯಗಳನ್ನು ತಪ್ಪಾಗಿ ಘೋಷಿಸಿಕೊಂಡಿದ್ದ ಆಸ್ತಿ ಮಾಲೀಕರನ್ನು ಬಿಬಿಎಂಪಿ ಪತ್ತೆಹಚ್ಚಿದೆ.
ಸ್ವಯಂ ಘೋಷಿತ ಆಸ್ತಿ ತೆರಿಗೆ ಪದ್ಧತಿಯಡಿ ತಪ್ಪಾಗಿ ಆಸ್ತಿ ಘೋಷಣೆ ಮಾಡಿದ್ದ ಬೃಹತ್ ಕಟ್ಟಡ ಮಾಲೀಕರನ್ನು ಬಿಬಿಎಂಪಿ ಪತ್ತೆಹಚ್ಚಿತ್ತು. ಇದೀಗ ಸಾಮಾನ್ಯ ನಾಗರಿಕರ ಸರದಿ. ಒಟ್ಟು 3,90,000 ಆಸ್ತಿ ಮಾಲೀಕರಿಗೆ ನೋಟಿಸ್ ನೀಡಿರುವ ಬಿಬಿಎಂಪಿ, ಹೆಚ್ಚುವರಿ ತೆರಿಗೆಯನ್ನು ದಂಡ ಹಾಗೂ ಬಡ್ಡಿಯ ಜೊತೆಗೆ ಪಾವತಿಸುವಂತೆ ಸೂಚಿಸಿದೆ. ಕೇವಲ ನಾಗರೀಕರಿಂದಷ್ಟೇ ಅಲ್ಲದೆ ಕೆಲ ಕಂದಾಯ ಅಧಿಕಾರಿಗಳೂ ತಪ್ಪಾಗಿ ವಲಯ ನಮೂದನೆ ಮಾಡಿ ವಂಚಿಸಿದ್ದಾರೆ.
ಪ್ರಸ್ತುತ ಪಾಲಿಕೆಯಲ್ಲಿ ಹೊಸ ತಂತ್ರಜ್ಞಾನ ಬಳಸಲಾಗುತ್ತಿದ್ದು, ಪ್ರತೀ ದತ್ತಾಂಶಗಳನ್ನು ಮೊದಲೇ ತಂತ್ರಜ್ಞಾನದಲ್ಲಿ ನಮೂದಿಸಲಾಗಿರುತ್ತದೆ. ಇದರಿಂದಾಗಿ ಅಧಿಕಾರಿಗಳಾಗಲಿ, ಆಸ್ತಿ ಮಾಲೀಕರಾಗಲಿ ವಲಯ ಬದಲಾವಣೆ ಅಥವಾ ತಿದ್ದುಪಡಿ ಮಾಡಲು ಸಾಧ್ಯವಿಲ್ಲ, ಮನೆಯ ವಿಳಾಸ ಹಾಕಿದ ಕೂಡಲೇ ಸ್ವಯಂಚಾಲಿತವಾಗಿ ವಲಯ ನಮೂದನೆಗೊಳ್ಳಲಿದೆ. ಪಾಲಿಕೆ ಬೊಕ್ಕಸಕ್ಕೆ ವಂಚಿಸಲು ಸಾಧ್ಯವಿಲ್ಲ ಎಂದು ಆಯುಕ್ತ ಮಂಜುನಾಥ್ ಪ್ರಸಾದ್ ತಿಳಿಸಿದ್ದಾರೆ.
ಇದನ್ನೂ ಓದಿ:ಅಸ್ತಿತ್ವ ಉಳಿಸಿಕೊಳ್ಳಲು ಜೆಡಿಎಸ್ನಿಂದ ತಯಾರಿ : ಗ್ರಾ.ಪಂ. ಚುನಾವಣೆಯಲ್ಲಿ ವರ್ಕೌಟ್ ಆಗುತ್ತಾ ಹೊಸ ಪ್ಲಾನ್?