ETV Bharat / state

ಬಿಬಿಎಂಪಿ ಹೊಸ ಟೆಂಡರ್​​ಗೆ​ ಇನ್ನೂ ಫಿಕ್ಸ್​ ಆಗದ ಮುಹೂರ್ತ: ಹಸಿ ಕಸಕ್ಕಿಲ್ಲ ಮುಕ್ತಿ - ಬಿಬಿಎಂಪಿ ಹೊಸ ಟೆಂಡರ್

ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸೆ. 1ರಿಂದ ಜಾರಿಯಾಗಬೇಕಿದ್ದ ನೂತನ ಟೆಂಡರ್​ಗೆ ಇನ್ನೂ ಮುಹೂರ್ತ ಮಾತ್ರ ಫಿಕ್ಸ್​ ಆಗಿಲ್ಲ.

ಬಿಬಿಎಂಪಿ
author img

By

Published : Aug 17, 2019, 8:43 AM IST

ಬೆಂಗಳೂರು: ಬಿಬಿಎಂಪಿಯಲ್ಲಿ ಕಸ ನಿರ್ವಹಣೆ ಅತಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಸೆ. 1ರಿಂದ ನೂತನ ಟೆಂಡರ್ ಕಸ ಸಮಸ್ಯೆಗೆ ಮುಕ್ತಿ ಹಾಡಲಿದೆ ಎಂದು ನಿರೀಕ್ಷೆಯಲ್ಲಿದ್ದ ಜನತೆಗೆ ನಿರಾಸೆಯಾಗಲಿದೆ.

ಲೋಕಸಭಾ ಚುನಾವಣೆ ಪೂರ್ವದಿಂದಲೇ ನೂತನ ಟೆಂಡರ್ ಸಿದ್ಧಪಡಿಸಿ, ಟೆಂಡರ್ ಆಹ್ವಾನಿಸಿ, ಒಟ್ಟು 160 ಟೆಂಡರ್ ಕಡತಗಳನ್ನು ಅಂತಿಮಗೊಳಿಸಲಾಗಿದೆ. ಅಧಿಕಾರಿಗಳು ತಮ್ಮ ಕಾರ್ಯ ಪೂರ್ಣಗೊಳಿಸಿದ್ದರೂ ಇದಕ್ಕೆ ಅನುಮತಿ ನೀಡಬೇಕಾದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ನಿರ್ಲಕ್ಷ್ಯ ವಹಿಸಿದೆ ಎನ್ನಲಾಗಿದೆ. ಈ ಸಮಿತಿಯ ಅಧ್ಯಕ್ಷ, ಕಾರ್ಪೋರೇಟರ್ ಮುಜಾಹಿದ್ ಪಾಷಾ ಕೂಡಾ ಧಾರ್ಮಿಕ ಕೇಂದ್ರಕ್ಕೆ ಪ್ರವಾಸ ಹೋಗಿದ್ದಾರೆ. ಅಲ್ಲದೇ ಕೆಲವು ಲಾಬಿಗಳಿಗಾಗಿಯೇ ಟೆಂಡರ್ ಕಡತಗಳು ಪಾಸ್ ಮಾಡದೆ, ಅನಾವಶ್ಯಕ ವಿಳಂಬ ಮಾಡಲಾಗಿದೆ ಎಂದು ಹೇಳಲಾಗ್ತಿದೆ.

ಇನ್ನು ಎಲ್ಲಾ ಕಾರ್ಪೋರೇಟರ್​ಗಳಿರುವ ಕೌನ್ಸಿಲ್​ನಲ್ಲೂ ಈವರೆಗೆ ಟೆಂಡರ್​ಗೆ ಅನುಮತಿ ಸಿಕ್ಕಿಲ್ಲ. ಈ ಎಲ್ಲಾ ಕಾರಣಗಳಿಂದ ಸೆ. 1ಕ್ಕೆ ಹೊಸ ಟೆಂಡರ್ ಜಾರಿಯಾಗೋದು ಅಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.

ಹಸಿ ಕಸಕ್ಕಿಲ್ಲ ಮುಕ್ತಿ

ಈ ಬಗ್ಗೆ ಈಟಿವಿ ಭಾರತದ ಜೊತೆ ಪಾಲಿಕೆಯ ವಿಶೇಷ ಆಯುಕ್ತ ರಂದೀಪ್ ಮಾತನಾಡಿ, ಸಮಿತಿಗೆ ಕಳಿಸಿರುವ 160 ಟೆಂಡರ್ ಕಡತಗಳಲ್ಲಿ, 35 ಕಡತಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿದ್ದಾರೆ. ಆಯುಕ್ತರಾದ ಮಂಜುನಾಥ್ ಪ್ರಸಾದ್ ಟೆಂಡರ್ ಕಡತಗಳನ್ನು ಆದಷ್ಟು ಬೇಗ ಪಾಸ್ ಮಾಡಿಕೊಡುವಂತೆ ಪತ್ರ ಬರೆದಿದ್ದಾರೆ. ಇದು ತುರ್ತು ಅವಶ್ಯಕತೆ ಆಗಿರುವುದರಿಂದ ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯಲಿದ್ದಾರೆ ಎಂದು ತಿಳಿಸಿದರು.

ಆದರೆ ಈ ಬಗ್ಗೆ ಪಾಲಿಕೆಯ ಆಡಳಿತ ಪಕ್ಷದ ಬಳಿ ಕೇಳಿದ್ರೆ ಬೇರೆಯದೇ ಸಬೂಬು ನೀಡುತ್ತಿದ್ದಾರೆ. ಹೊಸ ಸರ್ಕಾರ ಎಲ್ಲಾ ಹೊಸ ಯೋಜನೆ, ಹೊಸ ಟೆಂಡರ್​​ಗಳನ್ನು ಸ್ಥಗಿತ ಮಾಡಲು ಹೇಳಿರುವುದರಿಂದ ಹಸಿ ಕಸದ ಟೆಂಡರ್ ಪ್ರಕ್ರಿಯೆಗಳು, ಕಡತಗಳ ಕೆಲಸಗಳು ಅರ್ಧಕ್ಕೆ ನಿಂತಿವೆ. ಈಗಾಗಲೇ ಒಪ್ಪಿಗೆ ನೀಡಿರುವ 35 ಟೆಂಡರ್ ಕಡತಗಳಿಗೆ ಆಯುಕ್ತರು ವರ್ಕ್ ಆರ್ಡರ್ ನೀಡಲಿ, ಕೆಲಸ ಆರಂಭಿಸಲಿ. ಹೀಗಾದಲ್ಲಿ ಒಂದೇ ವಾರದಲ್ಲಿ ಎಲ್ಲಾ ಕಡತಗಳನ್ನು ಪಾಸ್ ಮಾಡಿಸಿ ಕೊಡುತ್ತೇವೆ. ಆರೋಗ್ಯ ಸ್ಥಾಯಿ ಸಮಿತಿಯಿಂದ ವಿಳಂಬವಾದ್ರೂ ಕೌನ್ಸಿಲ್​​ನಲ್ಲಿ ಪಾಸ್ ಮಾಡಿಸಿ ಕೊಡುತ್ತೇವೆ ಎಂದು ಆಡಳಿತ ಪಕ್ಷದ ನಾಯಕ ವಾಜಿದ್ ಹೇಳಿದರು.

ಇವೆಲ್ಲದರ ನಡುವೆ ಹೊಸ ಸರ್ಕಾರದ ಸಿಎಂ ಯಡಿಯೂರಪ್ಪ, ಹೊಸ ಯೋಜನೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲು ತಿಳಿಸಿರುವುದರಿಂದ ಈ ಟೆಂಡರ್​​ಗೆ ಹಿನ್ನಡೆಯಾಗಿದೆ. ಇದರಿಂದ ತಮ್ಮ ಅವಧಿಯಲ್ಲೇ ಕಸದ ಟೆಂಡರ್ ಜಾರಿ ಮಾಡಿದ ಕೀರ್ತಿಗೆ ಪಾತ್ರರಾಗಲಿದ್ದ ಮೇಯರ್ ಗಂಗಾಂಬಿಕೆ ಕನಸಿಗೂ ತಣ್ಣೀರೆರಚಿದಂತಾಗಿದೆ.

ಇನ್ನು ಮಿಟಗಾನಹಳ್ಳಿ ಕ್ವಾರಿಯ ತಾತ್ಕಾಲಿಕ ಟೆಂಡರ್ ಹಾಗೂ ಹಸಿಕಸದ ಟೆಂಡರ್ ಬಗ್ಗೆ ತುರ್ತು ಕ್ರಮ ಕೈಗೊಳ್ಳುವಂತೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಪತ್ರ ಬರೆಯಲಿದ್ದಾರೆ. ಅಷ್ಟೇ ಅಲ್ಲದೆ ಇಂದು ನಡೆಯುವ ಕೌನ್ಸಿಲ್ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಲಿದೆ. ಆದರೂ ನಗರದ ಜನ ನಿರೀಕ್ಷೆ ಇಟ್ಟುಕೊಂಡಿದ್ದ ಕಸದ ಟೆಂಡರ್ ವಿಚಾರ ಪರಸ್ಪರ ಕೆಸರೆರಚಾಟದಿಂದಲೇ ವಿಳಂಬವಾಗ್ತಿರೋದು ಮಾತ್ರ ವಿಪರ್ಯಾಸ.

Intro:ಹಸಿ ಕಸದ ಟೆಂಡರ್ ಗೆ ಬಿಬಿಎಂಪಿಯಲ್ಲೇ ದುಷ್ಮನ್ ಗಳು- ಹೊಸ ಟೆಂಡರ್ ಗಿಲ್ಲ ಮುಹೂರ್ತ

ಬೆಂಗಳೂರು- ಸೆಪ್ಟೆಂಬರ್ ಒಂದರಿಂದ ಜಾರಿಯಾಗುವ ನೂತನ ಟೆಂಡರ್ ಕಸ ಸಮಸ್ಯೆಗೆ ಮುಕ್ತಿ ಹಾಡಲಿದೆ ಎಂದು ನಿರೀಕ್ಷೆಯಲ್ಲಿದ್ದ ಬೆಂಗಳೂರಿಗರಿಗೆ ನಿರಾಸೆ ಕಟ್ಟಿಟ್ಟಬುತ್ತಿ.. ಯಾಕಂದ್ರೆ ಬಿಬಿಎಂಪಿ ಜನಪ್ರತಿನಿಧಿಗಳಲ್ಲೇ ಈ ಉತ್ಸಾಹ ಇಲ್ಲ.
ಎಂಪಿ ಚುನಾವಣೆ ಪೂರ್ವದಿಂದಲೇ ನೂತನ ಟೆಂಡರ್ ಸಿದ್ಧಪಡಿಸಿ, ಟೆಂಡರ್ ಆಹ್ವಾನಿಸಿ, ಒಟ್ಟು 160 ಟೆಂಡರ್ ಕಡತಗಳನ್ನು ಅಂತಿಮಗೊಳಿಸಿ ಅಧಿಕಾರಿಗಳು ತಮ್ಮ ಕಾರ್ಯ ಸಂಪೂರ್ಣಗೊಳಿಸಿದ್ದರೂ, ಇದಕ್ಕೆ ಅನುಮತಿ ನೀಡಬೇಕಾದ ಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ನಿರ್ಲಕ್ಷ್ಯವಹಿಸಿದೆ.
ಈ ಸಮಿತಿಯ ಅಧ್ಯಕ್ಷ, ಕಾರ್ಪೋರೇಟರ್ ಮುಜಾಹಿದ್ ಪಾಷಾ ಕೂಡಾ ಧಾರ್ಮಿಕ ಕೇಂದ್ರಕ್ಕೆ ಪ್ರವಾಸ ಹೋಗಿದ್ದಾರೆ. ಇದ್ದಾಗಲೂ ಕೆಲವು ಲಾಬಿಗಳಿಗಾಗಿಯೇ ಟೆಂಡರ್ ಕಡತಗಳ‌್ನು ಪಾಸ್ ಮಾಡದೆ ಅನಾವಶ್ಯಕ ವಿಳಂಬ ಮಾಡಲಾಗಿದೆ. ಇನ್ನು ಎಲ್ಲಾ ಕಾರ್ಪೋರೇಟರ್ಸ್ ಗಳಿರುವ ಕೌನ್ಸಿಲ್ ನಲ್ಲೂ ಈವರೆಗೆ ಅನುಮತಿ ಸಿಕ್ಕಿಲ್ಲ.
ಈ ಎಲ್ಲಾ ಕಾರಣಗಳಿಂದ ಸೆಪ್ಟೆಂಬರ್ ಒಂದಕ್ಕೆ ಹೊಸ ಟೆಂಡರ್ ಜಾರಿಯಾಗೋದು ಅಸಾಧ್ಯ ಎಂಬ ಮಾತು ಕೇಳಿಬರುತ್ತಿದೆ.
ಈ ಬಗ್ಗೆ ಈಟಿವಿ ಭಾರತ್ ಜೊತೆ ಪಾಲಿಕೆಯ ವಿಶೇಷ ಆಯುಕ್ತರಾದ ರಂದೀಪ್, ಸಮಿತಿಗೆ ಕಳಿಸಿರುವ 160 ಟೆಂಡರ್ ಕಡತಗಳಲ್ಲಿ, 35 ಕಡತಗಳಿಗೆ ಮಾತ್ರ ಒಪ್ಪಿಗೆ ಸೂಚಿಸಿದ್ದಾರೆ. ಆಯುಕ್ತರಾದ ಮಂಜುನಾಥ್ ಪ್ರಸಾದ್ ಟೆಂಡರ್ ಕಡತಗಳನ್ನು ಆದಷ್ಟು ಬೇಗ ಪಾಸ್ ಮಾಡಿ ಕೊಡುವಂತೆ ಪತ್ರ ಬರೆದಿದ್ದಾರೆ. ಇದು ತುರ್ತು ಅವಶ್ಯಕತೆ ಆಗಿರುವುದರಿಂದ ಸರ್ಕಾರಕ್ಕೂ ಈ ಬಗ್ಗೆ ಪತ್ರ ಬರೆಯಲಿದ್ದಾರೆ ಎಂದರು.
ಆದ್ರೆ ಈ ಬಗ್ಗೆ ಪಾಲಿಕೆಯ ಆಡಳಿತ ಪಕ್ಷದ ಬಳಿ ಕೇಳಿದ್ರೆ ಬೇರೆಯದೇ ಸಬೂಬು ನೀಡುತ್ತಿದ್ದಾರೆ. ಹೊಸ ಸರ್ಕಾರ ಎಲ್ಲಾ ಹೊಸ ಯೋಜನೆ, ಹೊಸ ಟೆಂಡರ್ ಗಳನ್ನು ಸ್ಥಗಿತ ಮಾಡಲು ಹೇಳಿರುವುದರಿಂದ ಹಸಿಕಸದ ಟೆಂಡರ್ ಪ್ರಕ್ರಿಯೆಗಳು ,ಕಡತಗಳ ಕೆಲಸಗಳು ಅರ್ಧಕ್ಕೆ ನಿಂತಿವೆ ಎಂದು ಸರ್ಕಾರದ ಮೇಲೆ ಗೂಬೆ ಕೂರಿಸುತ್ತಿದ್ದಾರೆ. ಈಗಾಗಲೇ ಒಪ್ಪಿಗೆ ನೀಡಿರುವ 35 ಟೆಂಡರ್ ಕಡತಗಳಿಗೆ ಆಯುಕ್ತರು ವರ್ಕ್ ಆರ್ಡರ್ ನೀಡಲಿ, ಕೆಲಸ ಆರಂಭಿಸಲಿ. ಹೀಗಾದಲ್ಲಿ ಒಂದೇ ವಾರದಲ್ಲಿ ಎಲ್ಲಾ ಕಡತಗಳನ್ನು ಪಾಸ್ ಮಾಡಿಸಿ ಕೊಡುತ್ತೇವೆ. ಆರೋಗ್ಯ ಸ್ಥಾಯಿ ಸಮಿತಿಯಿಂದ ವಿಳಂಬವಾದ್ರೂ ಕೌನ್ಸಿಲ್ ನಲ್ಲಿ ಪಾಸ್ ಮಾಡಿಸಿ ಕೊಡುತ್ತೇವೆ ಎಂದು ಆಡಳಿತ ಪಕ್ಷದ ನಾಯಕ ವಾಜಿದ್ ಹೇಳುತ್ತಾರೆ.

ಇವೆಲ್ಲದರ ನಡುವೆ ಹೊಸ ಸರ್ಕಾರದ ನೂತನ ಮುಖ್ಯಮಂತ್ರಿ ಯಾವುದೇ ಹೊಸ ಯೋಜನೆಗಳನ್ನು ಮುಂದಿನ ಆದೇಶದವರೆಗೆ ಸ್ಥಗಿತಗೊಳಿಸಲು ತಿಳಿಸಿರುವುದರಿಂದ ಈ ಟೆಂಡರ್ ಗೆ ಹಿನ್ನಡೆಯಾಗಿದೆ. ಇದರಿಂದ ತಮ್ಮ ಅವಧಿಯಲ್ಲೇ ಕಸದ ಟೆಂಡರ್ ಜಾರಿ ಮಾಡಿದ ಕೀರ್ತಿಗೆ ಪಾತ್ರರಾಗುವ ಮೇಯರ್ ಗಂಗಾಂಬಿಕೆ ಕನಸಿಗೂ ತಣ್ಣೀರೆರೆಚಿದಂತಾಗಿದೆ.
ಇನ್ನು ಮಿಟಗಾನಹಳ್ಳಿ ಕ್ವಾರಿಯ ತಾತ್ಕಾಲಿಕ ಟೆಂಡರ್ ಹಾಗೂ, ಹಸಿಕಸದ ಟೆಂಡರ್ ಬಗ್ಗೆ ತುರ್ತುಕ್ರಮ ಕೈಗೊಳ್ಳುವಂತೆ ಆಯುಕ್ತರಾದ ಮಂಜುನಾಥ್ ಪ್ರಸಾದ್ ಪತ್ರ ಬರೆಯಲಿದ್ದಾರೆ. ಅಷ್ಟೇ ಅಲ್ಲದೆ ನಾಳೆ ನಡೆಯುವ ಕೌನ್ಸಿಲ್ ಸಭೆಯಲ್ಲೂ ಈ ಬಗ್ಗೆ ಚರ್ಚೆಯಾಗಲಿದೆ. ಆದರೂ ನಗರದ ಜನ ನಿರೀಕ್ಷೆ ಇಟ್ಟುಕೊಂಡಿದ್ದ ಕಸದ ಟೆಂಡರ್ ವಿಚಾರ ಪರಸ್ಪರ ಕೆಸೆರೆರೆಚಾಟದಿಂದಲೇ ವಿಳಂಬವಾಗ್ತಿರೊದು ಮಾತ್ರ ವಿಪರ್ಯಾಸ.. ಹೀಗಾಗಿ ಇನ್ನುಳಿದಿರುವ ಹದಿನೈದು ದಿನದಲ್ಲಿ ನೂತನ ಟೆಂಡರ್ ಜಾರಿಯಾಗುವುದು ಅನುಮಾನ ಎನ್ನಲಾಗುತ್ತಿದೆ.

ಬೈಟ್- ರಂದೀಪ್, ವಿಶೇಷ ಆಯುಕ್ತರು, ಬಿಬಿಎಂಪಿ

ಸೌಮ್ಯಶ್ರೀ
Kn_Bng_01_bbmp_new tender_special story_7202707
ಸೋಮಶೇಖರ್ ಸರ್ ಚೆಕ್ ಮಾಡಿದ್ದಾರೆ.
. Body:..Conclusion:..
ETV Bharat Logo

Copyright © 2025 Ushodaya Enterprises Pvt. Ltd., All Rights Reserved.