ಬೆಂಗಳೂರು: ಕೇಂದ್ರ ಸರ್ಕಾರದ ಸ್ವಚ್ಛ ಸರ್ವೇಕ್ಷಣಾ ರ್ಯಾಂಕಿಂಗ್ ನಲ್ಲಿ ಉತ್ತಮ ಅಂಕ ಗಳಿಸಲು ಬಿಬಿಎಂಪಿ ಶತಾಯ ಗತಾಯ ಪ್ರಯತ್ನಿಸುತ್ತಿದೆ. ಇದರ ಭಾಗವಾಗಿ ನಗರದಲ್ಲಿ ಅತಿಹೆಚ್ಚು ಮೂತ್ರ ವಿಸರ್ಜನೆ ಮಾಡುವ ಐದು ರಸ್ತೆಗಳ ಗೋಡೆಗೆ ಬೃಹತ್ ಕನ್ನಡಿ ಅಳವಡಿಸಿದೆ.
ನಿಯಮ ಬಾಹಿರವಾಗಿ ರಸ್ತೆ ಬದಿ ಮೂತ್ರ ವಿಸರ್ಜಿಸಿ, ನಗರದ ಅಂದಕ್ಕೆ ಧಕ್ಕೆ ತರುವ ಕೃತ್ಯವನ್ನು ತಡೆಯಲು ಕನ್ನಡಿ ಅಳವಡಿಸಲಾಗಿದೆ. ಕನ್ನಡಿ ನೋಡಿದ ಮೇಲಾದ್ರು ನಾಚಿಕೆಗೊಂಡು ತಪ್ಪು ಮಾಡದೇ ಇರಬಹುದು ಎಂಬ ಲೆಕ್ಕಾಚಾರದಲ್ಲಿ ಕನ್ನಡಿ ಹಾಕಲಾಗಿದೆ. ಅಲ್ಲದೆ ಕನ್ನಡಿಯಲ್ಲಿ ಕ್ಯೂಆರ್ ಕೋಡ್ ಅಳವಡಿಸಿದ್ದು, ಕೋಡ್ ಸ್ಕ್ಯಾನ್ ಮಾಡಿದರೆ ಹತ್ತಿರದ ಶೌಚಾಲಯದ ದಾರಿ ತೋರಿಸಲಿದೆ.
ಸದ್ಯ ನಗರದ ಕೆ.ಆರ್ ಮಾರುಕಟ್ಟೆ, ಚರ್ಚ್ ಸ್ಟ್ರೀಟ್, ಇಎಸ್ಐ ಆಸ್ಪತ್ರೆ, ಇಂದಿರಾನಗರ, ಶಿವಾಜಿನಗರದ ಕ್ವೀನ್ಸ್ ರಸ್ತೆ ಬಳಿ ಅಳವಡಿಸಲಾಗಿದೆ. ಈ ಕನ್ನಡಿಯ ಬೆಲೆ ಐವತ್ತು ಸಾವಿರ ರೂಪಾಯಿ ಆಗಿದೆ. ಆದ್ರೆ ನಗರದಲ್ಲಿ ಶೌಚಾಲಯದ ಕೊರತೆ ಕೂಡ ಇರುವುದರಿಂದ ಹೆಚ್ಚು ಟಾಯ್ಲೆಟ್ ನಿರ್ಮಾಣ ಮಾಡುವ ಯೋಜನೆ ಹಾಕಿದೆ. ಸದ್ಯ ಪಾಲಿಕೆಯ ಈ ಹೊಸ ಐಡಿಯಾ ವರ್ಕ್ಔಟ್ ಆಗುತ್ತ ಕಾದು ನೋಡ್ಬೇಕಿದೆ.