ETV Bharat / state

ಬಿಬಿಎಂಪಿ ಮೇಯರ್​ ಚುನಾವಣೆಗೆ ಮುಹೂರ್ತ ಮರು ನಿಗದಿ.. - ಮೇಯರ್​ ಹಾಗೂ ಉಪ ಮೇಯರ್​ ಚುನಾವಣೆ

ಈ ಹಿಂದೆ ಸೆಪ್ಟೆಂಬರ್ 27ಕ್ಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, ಇದೀಗ ಅಡ್ವೋಕೇಟ್ ಜನರಲ್ ಸೂಚನೆ ಮೇರೆಗೆ ಅಕ್ಟೋಬರ್ 1ರಂದು ಚುನಾವಣೆಗೆ ದಿನಾಂಕ ಮರುನಿಗದಿಯಾಗಿದೆ.

ಬಿಬಿಎಂಪಿ
author img

By

Published : Sep 23, 2019, 9:14 PM IST

ಬೆಂಗಳೂರು: ಬಿಬಿಎಂಪಿ ಮೇಯರ್, ಉಪಮೇಯರ್ ಹಾಗೂ 12 ಸ್ಥಾಯಿ ಸಮಿತಿಗಳ ಚುನಾವಣೆಗೆ ಕಡೆಗೂ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 1ರಂದು ಚುನಾವಣೆಗೆ ದಿನಾಂಕ ಮರುನಿಗದಿ ಮಾಡಲಾಗಿದೆ.

press relese
ಪತ್ರಿಕಾ ಪ್ರಕಟಣೆ

ಈ ಹಿಂದೆ ಸೆಪ್ಟೆಂಬರ್ 27ಕ್ಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ, 12ಸ್ಥಾಯಿ ಸಮಿತಿಗಳ ಚುನಾವಣೆಯನ್ನೂ ಜೊತೆಗೆ ನಡೆಸಬೇಕೆಂದು ಬಿಜೆಪಿ ಪತ್ರ ಬರೆದಿತ್ತು. ಈ ಕುರಿತು ಸ್ಪಷ್ಟನೆ ಕೇಳಿ ನಗರಾಭಿವೃದ್ಧಿ ಇಲಾಖೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿತ್ತು‌. ಸ್ಥಾಯಿ ಸಮಿತಿಗಳ ಅವಧಿ ಡಿಸೆಂಬರ್ ತಿಂಗಳವರೆಗೆ ಇರಲಿದೆ. ಆದರೆ, ಮೇಯರ್ ಚುನಾವಣೆ ಜೊತೆಗೇ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಸಲು ಅಡ್ವೋಕೇಟ್ ಜನರಲ್ ಯಾವುದೇ ಸಮಸ್ಯೆ ಇಲ್ಲವೆಂದು ಸೂಚಿಸಿದ್ದಾರೆ ಎಂದು ಪತ್ರ ಬರೆದಿದ್ದರು. ಹೀಗಾಗಿ ಅಡ್ವೋಕೇಟ್ ಜನರಲ್ ಸೂಚನೆ ಮೇರೆಗೆ ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆಯನ್ನ ಜೊತೆಗೆ ನಡೆಸಲು ತೀರ್ಮಾನಿಸಲಾಗಿದೆ.

ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಮೇಯರ್ ಚುನಾವಣೆಗೆ ಯಾವುದೇ ರೀತಿಯಲ್ಲಿ ಅಡ್ಡಿ ಪಡಿಸುವುದಿಲ್ಲ ಎಂಬ ಕಾರಣಕ್ಕೆ ಉಪಚುನಾವಣೆ ಮೊದಲೇ ಮೇಯರ್ ಚುನಾವಣೆ ನಡೆಸಲಾಗುತ್ತಿದೆ. ಮೇಯರ್ ಚುನಾವಣೆ ಮುಂದೂಡಲು ಕಾಂಗ್ರೆಸ್ ಮುಖಂಡರು ನಡೆಸಿದ ಪ್ರಯತ್ನವೂ ವಿಫಲವಾಗಿದೆ.

Intro:ಬಿಬಿಎಂಪಿ ಮೇಯರ್ ಚುನಾವಣೆಗೆ ಅಕ್ಟೋಬರ್ ೧ ಮುಹೂರ್ತ ಫಿಕ್ಸ್

ಬೆಂಗಳೂರು- ಬಿಬಿಎಂಪಿಯ ಮೇಯರ್ ಉಪಮೇಯರ್ ಹಾಗೂ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆಗೆ ಕಡೆಗೂ ದಿನಾಂಕ ನಿಗದಿಯಾಗಿದೆ. ಅಕ್ಟೋಬರ್ 1 ರಂದು ಚುನಾವಣೆಗೆ ದಿನಾಂಕ ಮರುನಿಗದಿಯಾಗಿದೆ.
ಈ ಹಿಂದೆ ಸೆಪ್ಟೆಂಬರ್ 27 ಕ್ಕೆ ಮೇಯರ್ ಹಾಗೂ ಉಪಮೇಯರ್ ಚುನಾವಣೆಗೆ ಅಧಿಸೂಚನೆ ಹೊರಡಿಸಲಾಗಿತ್ತು. ಆದರೆ ಹನ್ನೆರಡು ಸ್ಥಾಯಿ ಸಮಿತಿಗಳ ಚುನಾವಣೆಯನ್ನೂ ಜೊತೆಗೇ ನಡೆಸಬೇಕೆಂದು ಬಿಜೆಪಿ ಪತ್ರ ಬರೆದಿತ್ತು. ಈ ಕುರಿತು ಸ್ಪಷ್ಟನೆ ಕೇಳಿ ನಗರಾಭಿವೃದ್ಧಿ ಇಲಾಖೆ ಪ್ರಾದೇಶಿಕ ಚುನಾವಣಾ ಆಯುಕ್ತರಿಗೆ ಪತ್ರ ಬರೆದಿತ್ತು‌. ಸ್ಥಾಯಿ ಸಮಿತಿಗಳ ಅವಧಿ ಡಿಸೆಂಬರ್ ತಿಂಗಳ ವರೆಗೆ ಇರಲಿದೆ. ಆದ್ರೆ ಮೇಯರ್ ಚುನಾವಣೆ ಜೊತೆಗೇ ಚುನಾವಣೆ ನಡೆಸಲು ಅಡ್ವೋಕೇಟ್ ಜನರಲ್ ಯಾವುದೇ ಸಮಸ್ಯೆ ಇಲ್ಲವೆಂದು ಸೂಚಿಸಿದ್ದಾರೆ ಎಂದು ಪತ್ರ ಬರೆದಿದ್ದರು.
ಹೀಗಾಗಿ ಅಡ್ವೋಕೇಟ್ ಜನರಲ್ ಸೂಚನೆ ಮೇರೆಗೆ , ಮೇಯರ್ ಹಾಗೂ ಸ್ಥಾಯಿ ಸಮಿತಿಗಳ ಚುನಾವಣೆ ಜೊತೆಗೆ ನಡೆಸಲು ತೀರ್ಮಾನಿಸಲಾಗಿದ್ದು ಅಕ್ಟೋಬರ್ ಒಂದಕ್ಕೆ ಚುನಾವಣೆ ನಡೆಯಲಿದೆ.
ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ, ಮೇಯರ್ ಚುನಾವಣೆಗೆ ಯಾವುದೇ ರೀತಿಯಲ್ಲಿ ಅಡ್ಡಿ ಪಡಿಸುವುದಿಲ್ಲ ಎಂಬ ಕಾರಣಕ್ಕೆ ಉಪಚುನಾವಣೆ ಮೊದಲೇ ಮೇಯರ್ ಚುನಾವಣೆ ನಡೆಸಲಾಗುತ್ತಿದೆ. ಮೇಯರ್ ಚುನಾವಣೆ ಮುಂದೂಡಲು ಕಾಂಗ್ರೆಸ್ ಮುಖಂಡರು ನಡೆಸಿದ ಪ್ರಯತ್ನವೂ ವಿಫಲವಾಗಿದೆ.

ಸೌಮ್ಯಶ್ರೀ
Kn_bng_04_mayor_election_7202707Body:.Conclusion:.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.