ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಕಟ್ಟಡ ನಿರ್ಮಾಣಕ್ಕೆ ಲೈಸೆನ್ಸ್ ಪಡೆಯಲು, ಇನ್ಮುಂದೆ ಜನರು ಆನ್ಲೈನ್ನಲ್ಲಿ ಅರ್ಜಿ ಹಾಕಬಹುದಾಗಿದೆ. ಉದ್ಯಮ ಸ್ನೇಹಿಯಾಗುವ ನಿಟ್ಟಿನಲ್ಲಿ ಬಿಬಿಎಂಪಿಯಿಂದ ಈಸ್ ಆ್ಯಪ್ ಡೂಯಿಂಗ್ ಬ್ಯುಸಿನೆಸ್ ಸಾಫ್ಟ್ ಆ್ಯಪ್ ಲಾಂಚ್ ಮಾಡಲಾಗಿದೆ.
ಇನ್‌ಫೆಂಟ್ರಿ ರಸ್ತೆಯಲ್ಲಿರುವ ಇನ್ಐಎಎಸ್ ಆಫೀಸರ್ಸ್ ಅಸೋಶಿಯೇಷನ್ ಕಛೇರಿಯಲ್ಲಿ ಮೇಯರ್ ಗೌತಮ್ ಕುಮಾರ್ ಆ್ಯಪ್ ಅನಾವರಣಗೊಳಿದ್ದಾರೆ. ಈ ಆ್ಯಪ್ನಲ್ಲಿ ಸಾರ್ವಜನಿಕರು ಕಟ್ಟಡ ನಿರ್ಮಾಣಕ್ಕೆ ಅರ್ಜಿ ಹಾಕಿದ್ರೇ ನಿರ್ಮಾಣ ಮಂಜೂರಾತಿ ಪ್ರಕ್ರಿಯೆ ಸುಲಭವಾಗಿ ಸಿಗಲಿದೆ.
ಇನ್ನು ಈ ವೇಳೆ ಉಪಮೇಯರ್ ರಾಮಮೋಹನ ರಾಜು, ವಿರೋಧ ಪಕ್ಷದ ನಾಯಕ ಅಬ್ದುಲ್ ವಾಜೀದ್, ನಗರ ಯೋಜನೆ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ಸುರೇಶ್ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.