ETV Bharat / state

ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕಾ ಮೇಳ: ಬಿಬಿಎಂಪಿ ವ್ಯಾಪ್ತಿಯಲ್ಲಿ 5 ಲಕ್ಷ ಮಂದಿಗೆ ಲಸಿಕೆ ಗುರಿ

ಗರದ ಕೊಳಗೇರಿ ಪ್ರದೇಶಗಳು, ಲಸಿಕೆ ಪಡೆಯದ ಪ್ರದೇಶಗಳು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಟ್ಟಡ ನಿರ್ಮಾಣ ಮಾಡುವ ಸಿಬ್ಬಂದಿ ಸೇರಿದಂತೆ ಇನ್ನಿತರೆ ಸ್ಥಳಗಲ್ಲಿ‌ ವಿಶೇಷ ಕ್ಯಾಂಪ್​ಗಳ ವ್ಯವಸ್ಥೆ ಮಾಡಿಕೊಂಡು ಲಸಿಕೆ ನೀಡಲಾಗುವುದು

BBMP held Huge vaccination drive on sep 17
ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕಾ ಮೇ
author img

By

Published : Sep 15, 2021, 11:54 PM IST

ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿ ಸೆಪ್ಟೆಂಬರ್ 17 ರಂದು ಬೃಹತ್ ಕೋವಿಡ್ ಲಸಿಕಾ ಮೇಳವನ್ನು ಹಮ್ಮಿಕೊಳ್ಳಲಾಗಿದ್ದು, ಪಾಲಿಕೆ ಹಾಗೂ ಖಾಸಗಿ ಆಸ್ಪತ್ರೆಗಳು ಸೇರಿದಂತೆ 5 ಲಕ್ಷ ಮಂದಿಗೆ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಪಾಲಿಕೆ ತಿಳಿಸಿದೆ.

ನಗರದ ಕೊಳಗೇರಿ ಪ್ರದೇಶಗಳು, ಲಸಿಕೆ ಪಡೆಯದ ಪ್ರದೇಶಗಳು, ಬೀದಿ ಬದಿ ವ್ಯಾಪಾರಿಗಳು, ವಿವಿಧ ಕಾರ್ಖಾನೆಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ, ಕಟ್ಟಡ ನಿರ್ಮಾಣ ಮಾಡುವ ಸಿಬ್ಬಂದಿ ಸೇರಿದಂತೆ ಇನ್ನಿತರೆ ಸ್ಥಳಗಲ್ಲಿ‌ ವಿಶೇಷ ಕ್ಯಾಂಪ್​ಗಳ ವ್ಯವಸ್ಥೆ ಮಾಡಿಕೊಂಡು ಲಸಿಕೆ ನೀಡಲಾಗುವುದು. ಅದಕ್ಕಾಗಿ ಈಗಾಗಲೇ ಪಾಲಿಕೆಯ ಎಲ್ಲಾ ವಲಯಗಳಲ್ಲಿ ವಿಧಾನಸಭಾ ಕ್ಷೇತ್ರವಾರು ಬರುವ ವಾರ್ಡ್​ಗಳಲ್ಲಿ ಎಲ್ಲೆಲ್ಲಿ ಲಸಿಕೆ ನೀಡಬೇಕು ಎಂಬುದರ ಬಗ್ಗೆ ಆರೋಗ್ಯ ವೈದ್ಯಾಧಿಕಾರಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳು ಮೈಕ್ರೊ ಪ್ಲಾನ್ ಸಿದ್ದಪಡಿಸಿಕೊಂಡಿದ್ದಾರೆ ಎಂದು ಪಾಲಿಕೆ ಮಾಹಿತಿ ನೀಡಿದೆ.

ಪಾಲಿಕೆ ಪ್ರಾಕ್ಟಟಿಸಿರುವ ಬೃಹತ್ ಲಸಿಕಾ ಮೇಳದ‌ ಪ್ರಮುಖ ಅಂಶಗಳು:

  • ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 760 ಕೊಳಗೇರಿ ಪ್ರದೇಶಗಳಲ್ಲಿ ಲಸಿಕೆ ಪಡೆಯದವರಿಗೆ ಲಸಿಕೆ ನೀಡಲು ಎಲ್ಲಾ ರೀತಿಯ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.
  • ಕೋವಿಡ್ ಲಸಿಕೆ ನೀಡಲು 2178 ಸೆಷನ್ ಸೈಟ್ ಗಳ‌ ವ್ಯವಸ್ಥೆ ಮಾಡಲಾಗಿದೆ.
  • ಪ್ರತಿ ವಾರ್ಡ್​ನಲ್ಲೂ ಕನಿಷ್ಠ 10 ರಿಂದ 12 ಸೆಷನ್​ಗಳ ವ್ಯವಸ್ಥೆ ಮಾಡಿಕೊಂಡು, ಅದರಲ್ಲಿ 1 ಅಥವಾ 2 ಸ್ಥಿರ ಸೈಟ್‌ಗಳಗಳಲ್ಲಿ ಲಸಿಕೆ ನೀಡುವುದು ಎಂದು ಪ್ಲಾನ್ ಮಾಡಲಾಗಿದೆ.
  • ಪ್ರತಿ ಸೆಷನ್ ಸೈಟ್‌ನಲ್ಲಿ ಕನಿಷ್ಠ 225 ಡೋಸ್‌ಗಳನ್ನು ನೀಡುವ ಗುರಿ ಹೊಂದಲಾಗಿದೆ.
  • ಬಿಎಲ್‌ಎಸ್ ಆಂಬ್ಯುಲೆನ್ಸ್‌ನಿಂದ ದೂರದ ಸ್ಥಳಗಳು ಅಥವಾ ಹಿರಿಯ ನಾಗರಿಕರು/ಭಿನ್ನ ಸಾಮರ್ಥ್ಯ ಹೊಂದಿರುವವರ ಮನೆಗಳಿಗೆ ಭೇಟಿ ನೀಡಿ ಲಸಿಕೆ ಹಾಕಲಾಗುವುದು ಎಂದು ಪಾಲಿಕೆ ತಿಳಿಸಿದೆ.
  • ಪಾಲಿಕೆ ವ್ಯಾಪ್ತಿಯಲ್ಲಿ ನಿಖರ ಗುರಿಯನ್ನು ತಲುಪುವ ಸಲುವಾಗಿ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 8.00 ರಿಂದ ರಾತ್ರಿ 8.00 ಗಂಟೆಯವರೆಗೆ ಹಾಗೂ ಔಟ್ ರೀಚ್ ಸೆಷನ್​ಗಳಲ್ಲಿ ಬೆಳಗ್ಗೆ 8.00 ರಿಂದ ಸಂಜೆ 5.00 ಗಂಟೆಯವರೆಗೆ ಲಸಿಕೆ ನೀಡಲಾಗುವುದು ಎಂದಿದೆ
  • ಪಾಲಿಕೆ ಹಾಗೂ ಇತರೆ ಲಸಿಕಾ ತಂಡಗಳನ್ನು ಬಳಸಿಕೊಂಡು ಹೆಚ್ಚು ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ಉಲ್ಲೇಖಿಸಿದೆ.
  • ಅಜೀಂ ಪ್ರೇಮ್ ಜಿ ಫೌಂಡೇಶನ್ ಮತ್ತು ಇತರ ಎನ್‌ಜಿಒ ಪಾಲುದಾರರು ನೀಡುವ ವ್ಯಾಕ್ಸಿನೇಟರ್ ತಂಡಗಳನ್ನು ಮತ್ತು ಖಾಸಗಿ ಆಸ್ಪತ್ರೆಗಳು ನೀಡುವ ತಂಡಗಳು, ವೈದ್ಯಕೀಯ/ನರ್ಸಿಂಗ್ ಕಾಲೇಜುಗಳು ನೀಡುವ ತಂಡಗಳನ್ನು ಬಳಸಿಕೊಳ್ಳಲಾಗುವುದು ಎಂದು ಹೇಳಿದೆ.
  • ಖಾಸಗಿ ಆಸ್ಪತ್ರೆಯ ಆವರಣವನ್ನು ಕೂಡ ಲಸಿಕೆಗಾಗಿ ಬಳಸಲಾಗುವುದು. ಆಸ್ಪತ್ರೆಗಳು ಲಸಿಕೆ ನೀಡಲು ಸಿಬ್ಬಂದಿಯನ್ನು ಒದಗಿಸಲಿವೆ. ಜೊತೆಗೆ ಲಸಿಕೆ ನೀಡುವ ಸ್ಥಳದಲ್ಲಿ ಇಐಸಿ ಚಟುವಟಿಕೆಗಳನ್ನು ಕಡ್ಡಾಯವಾಗಿ ಅನುಸರಿಸಲಾಗುವುದು ಎಂದಿದೆ.
  • ಪಾಲಿಕೆ ಕೇಂದ್ರ ಕಛೇರಿಯಿಂದ ಲಸಿಕೆ ನೀಡುವ ಸ್ಥಳಗಗಳಿಗೆ ಇಐಸಿ ಸಂಬಂಧಿಸಿದಂತೆ ಬಿತ್ತಿಪತ್ರಗಳು ಮತ್ತು ಬ್ಯಾನರ್​ಗಳ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.