ಬೆಂಗಳೂರು: ಪ್ರಸಕ್ತ ವರ್ಷದ ಬೀದಿ ನಾಯಿಗಳ ಸಮೀಕ್ಷೆಯನ್ನು ಬಿಬಿಎಂಪಿ ಮುಗಿಸಿದೆ. ಪಾಲಿಕೆಯ ಹೆಲ್ತ್ ಸ್ಪೆಷಲ್ ಕಮಿಷನರ್ ತ್ರಿಲೋಕ್ ಚಂದ್ರ ವಲಯವಾರು ಬೀದಿ ನಾಯಿಗಳ ಪಟ್ಟಿ ಬಿಡುಗಡೆ ಮಾಡಿದ್ದಾರೆ. ಬೆಂಗಳೂರು ನಗರದಲ್ಲಿ ಒಟ್ಟು 2,79,335 ಬೀದಿ ನಾಯಿಗಳನ್ನು ಗುರುತಿಸಲಾಗಿದೆ.
ಶೇ. 71.85ರಷ್ಟು ಸಂತಾನಹರಣ ಚಿಕಿತ್ಸೆ: ಇತ್ತೀಚೆಗೆ ಬೀದಿ ನಾಯಿಗಳ ದಾಳಿಗೆ ಬೆಂಗಳೂರು ಜನರು ಒಳಗಾಗಿದ್ದರು. ಈ ಹಿನ್ನೆಲೆಯಲ್ಲಿ ಮೂರು ತಿಂಗಳ ಹಿಂದೆಯೇ ಬಿಬಿಎಂಪಿ ಸಮೀಕ್ಷೆ ನಡೆಸುವುದಾಗಿ ಹೇಳಿತ್ತು. 2019ರ ಸಮೀಕ್ಷೆ ಪ್ರಕಾರ, ನಗರದಲ್ಲಿ ಬೀದಿ ನಾಯಿಗಳ ಸಂಖ್ಯೆಯಲ್ಲಿ ಗಣನೀಯ ಇಳಿಕೆ ಕಂಡಿದೆ. ಪಾಲಿಕೆ ಪಶುಪಾಲನೆ ವಿಭಾಗವು 2019ರಲ್ಲಿ 3.10 ಲಕ್ಷ ಬೀದಿ ನಾಯಿಗಳನ್ನು ಗುರುತಿಸಿತ್ತು. ಸುಮಾರು 32 ಸಾವಿರ ಬೀದಿ ನಾಯಿಗಳ ಸಂತತಿ ಕಾಲಕ್ರಮೇಣ ಕಡಿಮೆಯಾಗಿದೆ. 2.79 ಲಕ್ಷ ಬೀದಿ ನಾಯಿಗಳ ಪೈಕಿ ಶೇ 71.85ರಷ್ಟು ಸಂತಾನಹರಣ ಚಿಕಿತ್ಸೆ ನಡೆಸಲಾಗಿದೆ. ಬಿಬಿಎಂಪಿ ಬೀದಿ ನಾಯಿ ಸಮೀಕ್ಷೆಗಾಗಿ ವಿವಿಧ ತಂಡ ರಚಿಸಲಾಗಿತ್ತು ಎಂದು ಪಾಲಿಕೆಯ ಹೆಲ್ತ್ ಸ್ಪೆಷಲ್ ಕಮಿಷನರ್ ತ್ರಿಲೋಕ್ ಚಂದ್ರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು. ಐಸಿಎಆರ್ ಹಿರಿಯ ವಿಜ್ಞಾನಿ ಡಾ.ಸುರೇಶ್ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.
ಸಮೀಕ್ಷೆಗೆ 50 ತಂಡಗಳ ರಚನೆ: ರೇಬೀಸ್ ರೋಗವನ್ನು ತಡೆಗಟ್ಟಲು ಸಮೀಕ್ಷೆ ನಡೆಸಲಾಗಿದೆ. ಬೀದಿನಾಯಿಗಳ ಪರಿಪಾಲನೆ ದೃಷ್ಟಿಯಿಂದಲೂ ಸಮೀಕ್ಷೆ ಮಾಡಲಾಗಿದೆ. ಪಾಲಿಕೆಯಿಂದ ಸತತವಾಗಿ ಸಂತಾನಹರಣ ಚಿಕಿತ್ಸೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ. ಬೀದಿ ನಾಯಿಗಳ ಸಮೀಕ್ಷೆ ನಡೆದು ನಾಲ್ಕು ವರ್ಷ ಆಗಿತ್ತು. ವೈಜ್ಞಾನಿಕವಾಗಿ 50 ತಂಡಗಳ ಮೂಲಕ ನಾವು ಸಮೀಕ್ಷೆ ನಡೆಸಿ, ವರದಿ ಕೊಟ್ಟಿದ್ದೇವೆ. ಸಮೀಕ್ಷೆ ಸಿಬ್ಬಂದಿಗೆ ಬಿಬಿಎಂಪಿಯಿಂದ ನಾವು ತರಬೇತಿ ಕೊಟ್ಟಿದ್ದೆವು ಎಂದರು.
ನಾಯಿಗಳಿಗೆ ಜಿಯೋ ಟ್ಯಾಗಿಂಗ್: ಸಮೀಕ್ಷೆ ನಡೆಸಲು ಡ್ರೋನ್ ಅನ್ನು ಕೂಡ ಬಳಸಲಾಗಿದೆ. ಕೆರೆ ಹಾಗೂ ಖಾಲಿ ಪ್ರದೇಶಗಳಲ್ಲಿ ಸಮೀಕ್ಷೆ ನಡೆಸಲು ಡ್ರೋನ್ ಬಳಸಲಾಗಿದೆ. ಈ ರೀತಿಯ ಬೀದಿ ನಾಯಿಗಳ ಸಮೀಕ್ಷೆಗಾಗಿ ಟೆಕ್ನಾಲಜಿ ಬಳಸುವಲ್ಲಿ ಯಶಸ್ವಿಯಾಗಿದ್ದೇವೆ. ಬೀದಿ ನಾಯಿಗಳ ಮೇಲೆ ನಿಗಾ ಇಡಲು ನಾಯಿಗಳಿಗೆ ಜಿಯೋ ಟ್ಯಾಗಿಂಗ್ ಮಾಡಲಾಗುತ್ತದೆ. ಮೈಕ್ರೋ ಚಿಪ್ ಅಳವಡಿಕೆ ಮಾಡುವ ಮೂಲಕ ಬೀದಿ ನಾಯಿಗಳ ಮೇಲೆ ನಿಗಾ ಇಡಬಹುದು ಎಂದು ತಿಳಿಸಿದರು.
ವಲಯವಾರು ಬೀದಿನಾಯಿಗಳ ವಿವರ: ಪ್ರಸಕ್ತ ವರ್ಷದ ಬೀದಿ ನಾಯಿಗಳ ಸಮೀಕ್ಷೆ ಪೂರ್ಣಗೊಂಡಿದ್ದು ಯಾವ ಯಾವ ವಲಯದಲ್ಲಿ ಎಷ್ಟು ಬೀದಿ ನಾಯಿಗಳಿವೆ ಅನ್ನೋ ಅಂಕಿ-ಅಂಶವಿದು.
ಇದನ್ನೂ ಓದಿ: 47 ವರ್ಷ ಸೇವೆ ಸಲ್ಲಿಸಿದ ಆನೆ, ಶ್ವಾನ ನಿವೃತ್ತಿ; ಅಧಿಕಾರಿಗಳಿಂದ ಗೌರವಪೂರ್ಣ ಬೀಳ್ಕೊಡುಗೆ