ಬೆಂಗಳೂರು: ಪಾಲಿಕೆ ವ್ಯಾಪ್ತಿಯಲ್ಲಿರುವ ಉದ್ಯಮಗಳಿಗೆ ಪರವಾನಗಿ ನವೀಕರಣ ಮಾಡಿಸಿಕೊಳ್ಳಲು ಮಾರ್ಚ್ 31ರವರೆಗೆ ಸಮಯಾವಕಾಶ ನೀಡಿ ಶೇ.25ರಷ್ಟು ದಂಡಪಾವತಿ ಶುಲ್ಕದಿಂದ ವಿನಾಯಿತಿ ಕೊಟ್ಟು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಆದೇಶ ಹೊರಡಿಸಿದೆ.
ನಗರದಲ್ಲಿ 2022-23ನೇ ಸಾಲಿಗೆ ಸಂಬಂಧಿಸಿದಂತೆ ಉದ್ಯಮಗಳ ಪರವಾನಗಿಯನ್ನು ಫೆಬ್ರವರಿ ತಿಂಗಳಲ್ಲಿ ದಂಡವಿಲ್ಲದೆ ನವೀಕರಣ ಮಾಡಿಕೊಡಲಾಗುತ್ತದೆ. ಮಾರ್ಚ್ ತಿಂಗಳಿನಲ್ಲಿ ಶೇ.25 ದಂಡ ಶುಲ್ಕ ವಿಧಿಸಲಾಗುತ್ತದೆ. ಏಪ್ರಿಲ್ ನಂತರ ಶೇ.100ರಷ್ಟು ದಂಡ ಶುಲ್ಕದೊಂದಿಗೆ ನವೀಕರಣ ಮಾಡಲಾಗುತ್ತದೆ ಎಂದು ಈ ಮೊದಲು ಹೇಳಲಾಗಿತ್ತು.
ಇದನ್ನೂ ಓದಿ: ಬೊಮ್ಮಾಯಿ ಜೋಳಿಗೆಯಿಂದ ಜನರಿಗೆ ಹೊರೆ ಇಲ್ಲದ, ಪ್ರಿಯವೆನಿಸುವ ಹೊಸ ಘೋಷಣೆ ಖಚಿತ!
ಉದ್ಯಮಗಳು ಸಂಕಷ್ಟದಲ್ಲಿದ್ದು, ಉದ್ಯಮ ಪರವಾನಗಿ ನವೀಕರಣ ದಂಡ ಶುಲ್ಕದಿಂದ ವಿನಾಯಿತಿ ನೀಡಲು ಮನವಿಗಳು ಸಲ್ಲಿಕೆ ಆಗಿದ್ದವು. ಈ ನಿಟ್ಟಿನಲ್ಲಿ ಮಾ.31ರವರೆಗೆ ವಿಧಿಸಲಾಗುತ್ತಿದ್ದ. ಶೇ.25 ರಷ್ಟು ದಂಡ ಶುಲ್ಕದಿಂದ ವಿನಾಯಿತಿ ನೀಡಿ ಪಾಲಿಕೆ ಆರೋಗ್ಯಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮುಂದಿನ ತಿಂಗಳು ಶೇ.100ರಷ್ಟು ದಂಡ: ಏಪ್ರಿಲ್ 1ರ ನಂತರ ನವೀಕರಣ ದಂಡ ಶುಲ್ಕ ಶೇ.100 ಹೆಚ್ಚಳವಾಗಲಿದೆ. ಮಾಹಿತಿಗೆ ಪಾಲಿಕೆ ವೆಬ್‌ಸೈಟ್ www.bbmp.gov.in ಸಂಪರ್ಕಿಸಬಹುದು.