ETV Bharat / state

ರಾಜಕಾಲುವೆ ಒತ್ತುವರಿದಾರರಿಗೆ ಶಾಕ್: ಮಹದೇವಪುರದಲ್ಲಿ ಜೆಸಿಬಿಗಳ ಘರ್ಜನೆ - ಒತ್ತುವರಿ ತೆರವು

ಮಳೆ ಪ್ರವಾಹದ ಬೆನ್ನಲ್ಲೆ ಎಚ್ಚೆತ್ತ ಸರ್ಕಾರ. ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ಕಾರ್ಯಾಚರಣೆ.

ರಾಜಕಾಲುವೆ ಒತ್ತುವರಿದಾರರಿಗೆ ಶಾಕ್
ರಾಜಕಾಲುವೆ ಒತ್ತುವರಿದಾರರಿಗೆ ಶಾಕ್
author img

By

Published : Sep 13, 2022, 8:22 PM IST

ಮಹದೇವಪುರ: ಮಳೆ ಪ್ರವಾಹದಿಂದ ಬೆಂಗಳೂರು ನಗರದಲ್ಲಿ ಅವಾಂತರ ಸೃಷ್ಟಿಯಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾದ ಬಳಿಕ ಸರ್ಕಾರ ಎತ್ತೆಚ್ಚುಕೊಂಡು ಕಾರ್ಯಾಚರಣೆಗೆ ಇಳಿದಿದೆ. ಸರ್ಕಾರ ಕಳೆದ ಎರಡು ದಿನಗಳಿಂದ ಮಹದೇವಪುರ ಭಾಗದಲ್ಲಿ ಒತ್ತುವರಿದಾರರಿಗೆ ನಡುಕ ಶಾಕ್ ನೀಡುತ್ತಿದ್ದಾರೆ. ಜೆಸಿಬಿ, ಬುಲ್ಡೋಜರ್​​ಗಳು ಒತ್ತುವರಿ ಕಟ್ಟಡ, ಕಾಂಪೌಂಡ್, ಗೇಟ್, ಪಾರ್ಕಿಂಗ್ ಜಾಗ ಸೇರಿ ಎಲ್ಲವನ್ನ ಮುಲಾಜಿಲ್ಲದೇ ನೆಲಸಮಗೊಳಿಸುತ್ತಿವೆ.

ಮಹದೇವಪುರದಲ್ಲಿ ಜೆಸಿಬಿಗಳ ಘರ್ಜನೆ: ಕಾರ್ಯಾಚರಣೆಯ ಎರಡನೇ ದಿನವಾದ ಇಂದು ಬೆಳಗ್ಗೆಯಿಂದ ಮುನ್ನೇಕೊಳ್ಳಾಲ, ಬಸವಣ್ಣನಗರ, ಚಲ್ಲಘಟ್ಟ ಪ್ರದೇಶಗಳಲ್ಲಿ ಬಿಬಿಎಂಪಿ ಬಿಸಿ ಮುಟ್ಟಿಸಿದೆ. ಒತ್ತುವರಿ ಕಟ್ಟಡಗಳ ಮೇಲೆ ಬುಲ್ಡೋಜರ್​​ಗಳು ಘರ್ಜಿಸಿವೆ. ಪೊಲೀಸರ ಸರ್ಪಗಾವಲಲ್ಲಿ ಆಪರೇಷನ್ ನಡೆಯುತ್ತಿದ್ದು ಹಲವು ಕಟ್ಟಡಗಳು ನೆಲಕುರುಳಿದವು.

ರಾಜಕಾಲುವೆ ಒತ್ತುವರಿದಾರರಿಗೆ ಶಾಕ್

ಸೋಮವಾರ ಮಹದೇವಪುರ ವಲಯದ ಚಿನ್ನಪ್ಪನಹಳ್ಳಿ, ಬಸವಣ್ಣನಗರ, ಮುನ್ನೇನಕೊಳ್ಳಾಲದಲ್ಲಿ ತೆರವು ಕಾರ್ಯಾಚರಣೆ ನಡೆದಿತ್ತು. ಇಂದು ಸಹ ಮುನ್ನೇನಕೊಳ್ಳಾಲದ ಶಾಂತಿನಿಕೇತನ‌ ಲೇಔಟ್​ನಿಂದ ಆರಂಭವಾದ ತೆರವು ಕಾರ್ಯಾಚರಣೆ ಮುನ್ನೇನಕೊಳ್ಳಾಲು ಗಡಿ, ಬಸವಣ್ಣನಗರವರೆಗೆ ಅಂತ್ಯವಾಗಿದೆ. ಶಾಂತಿನಿಕೇತನ ಲೇಔಟ್​​ನಲ್ಲಿ 7, ಪಾಪರೆಡ್ಡಿಪಾಳ್ಯದಲ್ಲಿ 1 ಕಟ್ಟಡ ಮತ್ತು ಚಲ್ಲಘಟ್ಟದಲ್ಲಿ ನಲಪಾಡ್ ಅಕಾಡೆಮಿ ಹಾಗೂ ಬಸವಣ್ಣನಗರದಲ್ಲಿ ಒಂದು ಕಾಂಪೌಂಡ್ ಗೋಡೆ ಗುರುತಿಸಿ ಒತ್ತುವರಿ ತೆರವು ಮಾಡಿದ್ದಾರೆ. ಹಲವಾರು ಮನೆ ಮಾಲೀಕರು ತೆರವು ಕಾರ್ಯಚರಣೆಗೆ ವಿರೋಧ ವ್ಯಕ್ತಪಡಿಸಿದರು.

ರಾಜಕಾಲುವೆ ಒತ್ತುವರಿದಾರರಿಗೆ ಶಾಕ್
ರಾಜಕಾಲುವೆ ಒತ್ತುವರಿದಾರರಿಗೆ ಶಾಕ್

ಸದ್ಯ ಕೇವಲ ಆಟದ ಮೈದಾನ, ಖಾಲಿ ಜಾಗ, ಕಾಂಪೌಂಡ್ ಗೇಟ್, ಸಜ್ಜೆ ಕೆಡವುತ್ತಿರುವ ಅಧಿಕಾರಿಗಳು ಸಂಪೂರ್ಣವಾಗಿ ರಾಜಕಾಲುವೆ ಸಂಪರ್ಕದ ಒತ್ತುವರಿ ಜಾಗವನ್ನ ಯಾವಾಗ ತೆರವು ಮಾಡ್ತಾರೆ ಅನ್ನೋದನ್ನು ಕಾದುನೋಡಬೇಕಾಗಿದೆ.

(ಇದನ್ನೂ ಓದಿ: ವೈಜ್ಞಾನಿಕವಾಗಿ ಸರ್ವೇ ನಡೆಸದೆ ಬಿಬಿಎಂಪಿಯಿಂದ ಮನೆಗಳ ತೆರವು.. ಸ್ಥಳೀಯರ ಆರೋಪ)

ETV Bharat Logo

Copyright © 2025 Ushodaya Enterprises Pvt. Ltd., All Rights Reserved.