ETV Bharat / state

ಕೊರೊನಾ ಸಂಕಷ್ಟಗಳನ್ನು ಬಿಚ್ಚಿಟ್ಟ ಪಾಲಿಕೆ ಸದಸ್ಯರು: ಸುಧಾರಿಸುವ ಕುರಿತು ಆಯುಕ್ತರ ಭರವಸೆ

ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ವಯೋಸಹಜ ಹಾಗೂ ಅನ್ಯ ಕಾರಣದಿಂದ ಸಾವಿಗೀಡಾಗುವವರಿಗೆ ಶವ ಸಂಸ್ಕಾರ ಮಾಡಲು ಚಿತಾಗಾರಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಕೇಳ್ತಿದ್ದಾರೆ. ಹೀಗಾಗಿ ಅಂತ್ಯಕ್ರಿಯೆ ಎರಡು ಮೂರು ದಿನ ವಿಳಂಬ ಆಗ್ತಿದೆ ಎಂದು ಮಾಜಿ ಮೇಯರ್ ಸಂಪತ್ ಕುಮಾರ್ ಕೌನ್ಸಿಲ್ ಗಮನಕ್ಕೆ ತಂದರು.

BBMP Council Meeting
ಕೊರೊನಾ ಸಂಕಷ್ಟಗಳನ್ನು ಬಿಚ್ಚಿಟ್ಟ ಪಾಲಿಕೆ ಸದಸ್ಯರು
author img

By

Published : Jul 29, 2020, 2:22 AM IST

ಬೆಂಗಳೂರು: ನಿನ್ನೆ ನಡೆದ ಪಾಲಿಕೆ ಸಭೆಯಲ್ಲಿ ವಾರ್ಡ್​ಗಳಿಗೆ ಎದುರಾದ ಕೋವಿಡ್ ಸಂಕಷ್ಟದ ಕುರಿತು, ಸೌಲಭ್ಯಗಳ ಕುಂದುಕೊರತೆ, ಜನರು ಅನುಭವಿಸುತ್ತಿರುವ ಕಷ್ಟಗಳ ಬಗ್ಗೆ ವಾರ್ಡ್ ಸದಸ್ಯರು ಬಿಬಿಎಂಪಿ ಆಯುಕ್ತರು, ಮೇಯರ್ ಗಮನಕ್ಕೆ ತಂದರು.

ಪಾಲಿಕೆ ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದ ಆಯುಕ್ತ ಮಂಜುನಾಥ್ ಪ್ರಸಾದ್, ಕೊರೊನಾ ಸೋಂಕು ಒಂದು ಸಾಮಾನ್ಯ ಜ್ವರ, ಇದಕ್ಕೆ ತೀವ್ರ ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ ಎಂದರು. ವಾರ್ಡ್ ಮಟ್ಟದಲ್ಲಿ ಕೊರೊನಾ ಸೋಂಕಿತರ ಮಾಹಿತಿ ನೀಡಲಾಗುವುದು. ವಾರ್ಡ್ ಕಮಿಟಿ ಸದಸ್ಯರು, ಸೋಂಕಿತರನ್ನು ಹೋಂ ಐಸೋಲೇಷನ್ ಮಾಡಲು, ಪತ್ತೆ ಹಚ್ಚಲು ಸಹಕಾರ ನೀಡಬೇಕು. ನಿತ್ಯ ಹದಿಮೂರು ಸಾವಿರ ಜನರ ಸೋಂಕು ಪರೀಕ್ಷೆ ನಡೆಸಲಾಗ್ತಿದೆ. ನಗರದಲ್ಲಿ ಏಳುನೂರು ಆಂಬುಲೆನ್ಸ್, ಟಿಟಿ ಹಾಗೂ ಶವ ಸಾಗಿಸುವ ವಾಹನಗಳಿದ್ದು, ವಾರ್ಡ್​ಗೆ ಎರಡು ಆಂಬುಲೆನ್ಸ್ ನೀಡಲಾಗಿದೆ ಎಂದರು.

ಜೊತೆಗೆ ನಗರದ ಖಾಸಗಿ ಆಸ್ಪತ್ರೆಗಳು ಶೇಕಡಾ ನೂರರಷ್ಟು ಆಸ್ತಿ ತೆರಿಗೆ ವಿನಾಯಿತಿ ಕೇಳಿದ್ದಾರೆ. ಅರ್ಧ ಬೆಡ್​ಗಳನ್ನು ಕೋವಿಡ್ ಗೆ ಕೊಡುವುದರಿಂದ ಬೇರೆ ರೋಗಿಗಳು ದಾಖಲಾಗುತ್ತಿಲ್ಲ. ಹೀಗಾಗಿ ಪೂರ್ತಿ ಆಸ್ಪತ್ರೆ ಕೋವಿಡ್​ ಗೆ ಮೀಸಲಿಡುತ್ತೇವೆ ಎನ್ನುತ್ತಿದ್ದಾರೆ. ಕೆಲವು ಆಸ್ಪತ್ರೆಗಳು ವೆಂಟಿಲೇಟರ್​ಕೊಳ್ಳಲು ಅನುದಾನ ಕೊಡುವಂತೆ ಪ್ರಸ್ತಾವನೆ ಸಲ್ಲಿಸಿದ್ದು, ಈ ಎಲ್ಲವೂ ಚರ್ಚೆಯ ಹಂತದಲ್ಲಿದೆ ಎಂದು ವಿಷಯವನ್ನು ಚರ್ಚೆಗೆ ಇಟ್ಟರು.

ಕೊರೊನಾ ಸಂಕಷ್ಟಗಳನ್ನು ಬಿಚ್ಚಿಟ್ಟ ಪಾಲಿಕೆ ಸದಸ್ಯರು

ಶವಸಂಸ್ಕಾರ ಸಮಸ್ಯೆ:

ನಗರದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದ್ದರಿಂದ ವಯೋಸಹಜ ಹಾಗೂ ಅನ್ಯ ಕಾರಣದಿಂದ ಸಾವಿಗೀಡಾಗುವವರಿಗೆ ಶವ ಸಂಸ್ಕಾರ ಮಾಡಲು ಚಿತಾಗಾರಗಳಲ್ಲಿ ಕೋವಿಡ್ ನೆಗೆಟಿವ್ ವರದಿ ಕೇಳ್ತಿದ್ದಾರೆ. ಹೀಗಾಗಿ ಅಂತ್ಯಕ್ರಿಯೆ ಎರಡು ಮೂರು ದಿನ ವಿಳಂಬ ಆಗ್ತಿದೆ ಎಂದು ಮಾಜಿ ಮೇಯರ್ ಸಂಪತ್ ಕುಮಾರ್ ಕೌನ್ಸಿಲ್ ಗಮನಕ್ಕೆ ತಂದು ವ್ಯವಸ್ಥೆ ಸರಿಪಡಿಸುವಂತೆ ತಿಳಿಸಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ವಿಶೇಷ ಆಯುಕ್ತ ರಂದೀಪ್, ಆಸ್ಪತ್ರೆಯಲ್ಲಿ ಮೃತಪಟ್ಟರೆ ವೈದ್ಯರೇ ಮರಣ ಪತ್ರಕ್ಕೆ ಸಹಿ ಮಾಡುತ್ತಾರೆ. ಮನೆಯಲ್ಲಿ ಸಾವನ್ನಪ್ಪಿದರೆ, ಸ್ಥಳೀಯ ವೈದ್ಯಾದಿಕಾರಿ ರ್ಯಾಪಿಡ್ ಆಂಟಿಜೆನ್ ಟೆಸ್ಟ್ ಮಾಡಿ, ಪ್ರಮಾಣಪತ್ರ ನೀಡ್ತಾರೆ ಎಂದರು.

ಅನುದಾನ ಕೊಡುವಂತೆ ಮನವಿ:

ವಾರ್ಡ್ ಗಳಲ್ಲಿ ಮಳೆ ಬಂದು, ಚರಂಡಿ ಸಮಸ್ಯೆ, ಮನೆಗಳಿಗೆ ನೀರು ನುಗ್ಗುವ ಸಮಸ್ಯೆ ಎದುರಾಗಿದೆ. ಹೀಗಾಗಿ ಈ ಕೆಲಸಗಳಿಗೆ ಅನುದಾನ ಬಿಡುಗಡೆ ಮಾಡುವಂತೆ ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್ ಒತ್ತಾಯಿಸಿದರು. ಕೋವಿಡ್ ನಿಯಂತ್ರಣಕ್ಕೂ ವಾರ್ಡ್​ಗೆ ನೀಡಲು ನಿರ್ಧರಿಸಿದ ಇಪ್ಪತ್ತು ಲಕ್ಷ ಹಣ ಬಿಡುಗಡೆ ಮಾಡಿಲ್ಲ ಎಂದು ಪಾಲಿಕೆ ಸದಸ್ಯ ರಮೇಶ್ ದೂರಿದ್ರು.

ಪಾಲಿಕೆ ಸಭೆಯಲ್ಲಿ ಕೈಗೊಂಡ ನಿರ್ಣಯಗಳಲ್ಲಿ ಪ್ರಮುಖವಾಗಿ ಆನ್ ಲೈನ್ ಶಿಕ್ಷಣ ಹಿನ್ನೆಲೆ ಬಡಮಕ್ಕಳಿಗೆ ಲ್ಯಾಪ್ ಟಾಪ್ ಹಾಗೂ ಟ್ಯಾಬ್ ನೀಡಲು ನಿರ್ಣಯ ತೆಗೆದುಕೊಳ್ಳಲಾಗಿದೆ. ಸಾಕು ನಾಯಿ ಪರವಾನಗಿ ಬೈಲಾಕ್ಕೆ ಅನುಮೋದನೆ ಸಿಕ್ಕಿದೆ. ನಾಯಿ ಸಾಕುವವರು ನಾಯಿಗಳಿಗೆ ಮಾಹಿತಿಗಳಿರುವ ಡಿಜಿಟಲ್ ಚಿಪ್ ಅಳಚಡಿಕೆ, ಸೀಮಿತ ಸಂಖ್ಯೆಯಲ್ಲಿ ನಾಯಿ ಸಾಕುವುದು, ಎಬಿಸಿ ಚಿಕಿತ್ಸೆ ಕುರಿತು ಹೊಸ ಬೈಲಾದಲ್ಲಿ ಇದೆ.

ಕಲ್ಯಾಣ ಕಾರ್ಯಕ್ರಮದ ವಿಶೇಷ ಆಯುಕ್ತರಾಗಿದ್ದ, ಎಸ್ ಜೆ ರವೀಂದ್ರ ಅವರನ್ನು ಬದಲಾಯಿಸಲು ಕ್ರಮ ಕೈಗೊಳ್ಳಲಾಯಿತು. ದಿವಂಗತ ಉಪಮೇಯರ್ ರಮೀಳಾ ಉಮಶಂಕರ್ ಹೆಸರನ್ನ ಕಾವೇರಿಪುರ ವಾರ್ಡ್ ನ ಹೆರಿಗೆ ಆಸ್ಪತ್ರೆಗೆ ನಾಮಕರಣ ಮಾಡಲು ನಿರ್ಧರಿಸಲಾಗಿದೆ. ನಗರದಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದರೆ, ಒಂದು ಕಿ.ಮೀ ರಸ್ತೆಯ ಗುಂಡಿಗಳಿಗೆ 1,30,000 ಪಾಲಿಕೆಗೆ ಹಣ ಪಾವತಿ ಮಾಡಬೇಕು. ಪೌರಕಾರ್ಮಿಕರಿಗೆ ನೀಡುವ ಇಂದಿರಾ ಕ್ಯಾಂಟೀನ್ ಊಟದ ಬದಲು ಮತ್ತೆ ಅಕ್ಷಯ ಪೌಂಡೇಶನ್​ನಿಂದ ಊಟ ನೀಡಲು ಚಿಂತಿಸಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.