ಬೆಂಗಳೂರು: ಪಾಲಿಕೆಯಿಂದ ಕಳೆದ ಹಲವು ತಿಂಗಳಿನಿಂದ ಬರಬೇಕಿದ್ದ ಬಾಕಿ ಹಣ ಬಾರದಿದ್ದಕ್ಕೆ ಮನನೊಂದು ವನಿಕೃಷ್ಣಂ ಎನ್ನುವ ಗುತ್ತಿಗೆದಾರರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕಟ್ಟಡ ಕೆಲಸದ ಗುತ್ತಿಗೆ ಪಡೆದಿದ್ದ ಗುತ್ತಿಗೆದಾರ ವನಿಕೃಷ್ಣಂ, ಹಲವು ಬಾರಿ ಬಾಕಿ ಹಣ ನೀಡಿ ಎಂದು ಮನವಿ ಮಾಡಿಕೊಂಡಿದ್ದು, ಹಣ ನೀಡದೇ ಪಾಲಿಕೆ ಅಧಿಕಾರಿಗಳು ಸತಾಯಿಸುತ್ತಿದ್ದರು ಎನ್ನಲಾಗಿದೆ. ಬಾಕಿ ಹಣಕ್ಕಾಗಿ ಅಲೆದಾಡಿ ಇಂದು ಮಹಾಲಕ್ಷ್ಮಿ ಲೇಔಟ್ನ ತಮ್ಮ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜಾಜಿನಗರ ಕಾಂಪ್ಲೆಕ್ಸ್ ಸೇರಿದಂತೆ ಹಲವು ಕಟ್ಟಡಗಳ ಗುತ್ತಿಗೆ ವಹಿಸಿಕೊಂಡು ಕಟ್ಟಡ ನಿರ್ಮಾಣ ಮಾಡಿದ್ದರು ಎಂದು ತಿಳಿದು ಬಂದಿದೆ.
ಈ ಸುದ್ದಿಯನ್ನೂ ಓದಿ: ಬೆಂಗಳೂರು-ಹೊಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಲಾರಿ ಪಲ್ಟಿ: ಸಂಚಾರ ಅಸ್ತವ್ಯಸ್ತ
ಸದ್ಯ ಈ ಕುರಿತು ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.