ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ 243 ವಾರ್ಡ್ ಮರು ವಿಂಗಡಣೆಯ ಕರಡು ಅಧಿಸೂಚನೆ ಬಿಡುಗಡೆಯಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿ, ಕೆಲ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ಹೆಚ್ಚಳವಾಗಿದೆ. ಕೆಲ ವಿಧಾನಸಭಾ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ಕಡಿಮೆಯಾಗಿದೆ. ಇನ್ನೂ ಕೆಲ ಕ್ಷೇತ್ರಗಳಲ್ಲಿ ವಾರ್ಡ್ಗಳ ಸಂಖ್ಯೆ ಯಥಾಸ್ಥಿತಿ ಇದೆ. ಜಂಟಿ ಆಯುಕ್ತರ ಕಚೇರಿಯಲ್ಲಿ ಮಾಹಿತಿ ಸಿಗಲಿದೆ.
ಮುಂದಿನ 15 ದಿಗಳಲ್ಲಿ ಸಾರ್ವಜನಿಕರು ಆನ್ ಲೈನ್ ಮೂಲಕ ಹಾಗೂ ನೇರವಾಗಿ ನಗರಾಭಿವೃದ್ಧಿ ಇಲಾಖೆಯ ಕಚೇರಿಗೆ ಆಕ್ಷೇಪಣೆ ಕಳುಹಿಸಬಹುದು. 2011ರ ಜನಗಣತಿ ಆಧಾರದ ಮೇಲೆ 198 ರಿಂದ 243 ವಾರ್ಡ್ಗೆ ಹೆಚ್ಚಿಸಿ ವಿಂಗಡನೆ ಮಾಡಲಾಗಿದೆ ಎಂದು ಹೇಳಿದರು.
ಇದನ್ನೂ ಓದಿ: 'ಬಿಬಿಎಂಪಿ ವಾರ್ಡ್ ವಿಂಗಡನೆ ಕಾರ್ಯ ಕೇಶವ ಕೃಪಾ, ಬಿಜೆಪಿ ಕಚೇರಿಯಲ್ಲಿ ನಡೆದಿದೆ'
ವಾರ್ಡ್ಗಳಿಗೆ ಕೆಲ ವ್ಯಕ್ತಿಗಳ ಹೆಸರಿಟ್ಟಿರುವ ವಿವಾದದ ಕುರಿತು ಪ್ರತಿಕ್ರಿಯಿಸಿ, ಕೆಲ ವಾರ್ಡ್ಗಳಿಗೆ ಕೆಲ ಹೋರಾಟಗಾರರು, ಇತಿಹಾಸಕಾರರ ಹೆಸರಿಡಲಾಗಿದೆ. ಇದು ಆಯಾ ಕ್ಷೇತ್ರಕ್ಕೆ, ಜನರ ಭಾವನೆಗೆ ಅನುಗುಣವಾಗಿದೆ ಎಂದರು.
ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೂ ಮುನ್ನ ಹಾಕಿದ್ದ ಡಾಂಬರ್ ಕಿತ್ತುಬಂದ ವಿಚಾರಕ್ಕೆ ಉತ್ತರಿಸಿ, ನಿನ್ನೆ ಸಿಎಂ ಸೂಚನೆ ಕೊಟ್ಟಿದ್ದು, ತನಿಖೆ ನಡೆಸಲಾಗುತ್ತಿದೆ. ಗುಂಡಿ ಬಿದ್ದ ಜಾಗದಲ್ಲಿ ಹಿರಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ. ವರದಿ ಬಳಿಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.