ಬೆಂಗಳೂರು : ಸೇಂಟ್ ಜಾನ್ಸ್ ಆಸ್ಪತ್ರೆಯಲ್ಲಿ 1250 ಹಾಸಿಗೆಗಳಲ್ಲಿ 729 ಬಿಬಿಎಂಪಿಗೆ ದೊರೆತಿದ್ದು, ಹಾಸಿಗೆಗಾಗಿ 1912ಗೆ ಕರೆ ಮಾಡಿ ಎನ್ನುವ ಸಂದೇಶ ಸಾಮಾಜಿಕ ಜಾಲತಾಣ ಹಾಗೂ ವಾಟ್ಸ್‌ಆ್ಯಪ್ ಮೂಲಕ ಸಂದೇಶ ಬೆಳಗಿನಿಂದ ಹರಿದಾಡಿದೆ. ಈ ಬಗ್ಗೆ ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತಾ ಸ್ಪಷ್ಟೀಕರಣ ನೀಡಿದ್ದಾರೆ.
ವದಂತಿಗಳಿಗೆ ಕಿವಿಗೊಡದಂತೆ ಬೆಂಗಳೂರಿನ ಜನರಲ್ಲಿ ವಿನಂತಿಸಿರುವ ಗೌರವ ಗುಪ್ತಾ ಅವರು, ಆಸ್ಪತ್ರೆಗಳು ಮತ್ತು ಕೋವಿಡ್ ಕೇರ್ ಕೇಂದ್ರಗಳಲ್ಲಿ ಸರ್ಕಾರಿ ಕೋಟಾ ಅಡಿಯಲ್ಲಿ ಲಭ್ಯವಿರುವ ಹಾಸಿಗೆಗಳ ಕುರಿತು ಮಾಹಿತಿಗಾಗಿ ದಯವಿಟ್ಟು bbmpgov.com/chbms/ಗೆ ಭೇಟಿ ನೀಡಿ ಅಥವಾ #BBMPHelpline 1912ಗೆ ಕರೆ ಮಾಡಿ ಎಂದು ಸಾಮಾಜಿಕ ಜಾಲತಾಣದ ಮೂಲಕ ಮನವಿ ಮಾಡಿದ್ದಾರೆ.