ಬೆಂಗಳೂರು: ನಿನ್ನೆ ರಾಜಧಾನಿಯಲ್ಲಿ ಧಾರಾಕಾರ ಮಳೆಯಾಗಿದ್ದು, ಮಳೆ ಗಾಳಿಯಿಂದ ನಗರದಲ್ಲಿ ಸಾಕಷ್ಟು ಹಾನಿ ಸಂಭವಿಸಿದೆ. ಈ ಸ್ಥಳಗಳಿಗೆ ಬಿಬಿಎಂಪಿ ಆಯುಕ್ತ ಅನಿಲ್ ಕುಮಾರ್ ಹಾಗೂ ವಿಶೇಷ ಆಯುಕ್ತ ಜಿ.ಮಂಜುನಾಥ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಗರದಲ್ಲಿ ಮಳೆಯಿಂದ ಕೆಲವು ಕಡೆ ಮರಗಳು ಧರೆಗುರುಳಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಈ ಕುರಿತಂತೆ ಪರಿಶೀಲನೆಗೆ ಮುಂದಾದ ಆಯುಕ್ತರ ತಂಡ, ಲಿ ಮೇರೇಡಿಯನ್ ಜಂಕ್ಷನ್, ವಿಂಡ್ಸರ್ ಮ್ಯಾನರ್ ಜಂಕ್ಷನ್, ಕಾವೇರಿ ಜಂಕ್ಷನ್, ಶೇಷಾದ್ರಿಪುರಂ, ಒಕಳಿಪುರಂ, ಡಾ. ರಾಜ್ ಕುಮಾರ್ ರಸ್ತೆ, ಸುಬ್ರಹ್ಮಣ್ಯನಗರ ಹಾಗೂ ಇನ್ನಿತರ ಸ್ಥಳಗಳಲ್ಲಿ ಪರಿಶೀಲಿಸಿ ಸಿಬ್ಬಂದಿಯಿಂದ ಕಾರ್ಯಾಚರಣೆ ಮಾಡಿಸಿದರು.
ಎಲ್ಲೆಲ್ಲಿ, ಎಷ್ಟೆಷ್ಟು ಮಳೆಯಾಗಿದೆ:
- ಪೂರ್ವ ವಿಭಾಗ-0.51ರಿಂದ 31.50 ಮಿ.ಮೀ.
- ದಕ್ಷಿಣದಲ್ಲಿ- 5 ರಿಂದ 25.50 ಮಿ.ಮೀ.
- ಆರ್ಆರ್ ನಗರ- 4.50 ರಿಂದ 67 ಮಿ.ಮೀ.
- ಯಲಹಂಕ-33.50 ರಿಂದ 71.50 ಮಿ.ಮೀ
- ದಾಸರಹಳ್ಳಿ- 35 ರಿಂದ 53 ಮಿ.ಮೀ.
- ಮಹದೇವಪುರ- 2 ರಿಂದ 27 ಮಿ.ಮೀ.
- ಬೊಮ್ಮನಹಳ್ಳಿ- 3.50 ರಿಂದ 26.50 ಮಿ.ಮೀ.
- ಪಶ್ಚಿಮ ವಿಭಾಗ- 20.50 ರಿಂದ 55.50 ಮಿ.ಮೀ. ಮಳೆಯಾಗಿದೆ.
ಅಲ್ಲದೆ ಹೆಗಡೆನಗರ, ರಾಜಾಜಿನಗರ, ಮಾಗಡಿ ರಸ್ತೆ, ಚಾಮರಾಜಪೇಟೆ, ಜಯಮಹಲ್, ಸಂಜಯನಗರ, ವಿದ್ಯಾರಣ್ಯಪುರದಲ್ಲೂ ಮರಗಳು ಬಿದ್ದಿರುವ ಕುರಿತ ಮಾಹಿತಿ ಲಭ್ಯವಾಗಿದೆ.