ETV Bharat / state

ಅಣ್ಣಾವ್ರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ಬಿಬಿಎಂಪಿ ಮೇಯರ್​​

ನಗರದ ಸೌತ್ ಎಂಡ್ ವೃತ್ತದಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಾಣ ಮಾಡಿರುವ ಅಣ್ಣಾವ್ರ ಪುತ್ಥಳಿಗೆ ಮೇಯರ್ ಗೌತಮ್ ಕುಮಾರ್,​​ ಉಪ ಮೇಯರ್ ರಾಮ್ ಮೋಹನ್ ಹಾಗೂ ಮಾಜಿ ಕಾರ್ಪೋರೇಟರ್ ದೀಪ ಬೆಳಗಿಸಿ ಅಣ್ಣಾವ್ರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಡಾ. ರಾಜ್ ಅವರ ಹುಟ್ಟುಹಬ್ಬ ಆಚರಿಸಿದರು.

ಬಿಬಿಎಂಪಿ ಮೇಯರ್​
ಬಿಬಿಎಂಪಿ ಮೇಯರ್​
author img

By

Published : Apr 24, 2020, 5:04 PM IST

ಬೆಂಗಳೂರು: ಅಭಿಮಾನಿಗಳ ಆರಾಧ್ಯ ದೈವ ಡಾ. ರಾಜ್​ಕುಮಾರ್ ಅವರ ಹುಟ್ಟುಹಬ್ಬವನ್ನು ಬಿಬಿಎಂಪಿ ವತಿಯಿಂದ ಸರಳವಾಗಿ ಆಚರಿಸಲಾಯಿತು‌.

ನಗರದ ಸೌತ್ ಎಂಡ್ ವೃತ್ತದಲ್ಲಿ ಬಿಬಿಎಂಪಿ ವತಿಯಿಂದ ನಿರ್ಮಾಣ ಮಾಡಿರುವ ಅಣ್ಣಾವ್ರ ಪುತ್ಥಳಿಗೆ ಮೇಯರ್ ಗೌತಮ್ ಕುಮಾರ್,​​ ಉಪ ಮೇಯರ್ ರಾಮ್ ಮೋಹನ್ ದೀಪ ಬೆಳಗಿಸಿ ಅಣ್ಣಾವ್ರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಸರಳವಾಗಿ ಹುಟ್ಟುಹಬ್ಬ ಆಚರಿಸಲಾಯಿತು.

ಅಣ್ಣಾವ್ರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಮೇಯರ್​

ಮೇಯರ್​ ಹಾಗೂ ಉಪ ಮೇಯರ್​​ ಕಂಠೀರವ ಸ್ಟೂಡಿಯೋದಲ್ಲಿರುವ ಅಣ್ಣಾವ್ರ ಸ್ಮಾರಕಕ್ಕೆ ಭೇಟಿ ಕೊಟ್ಟು ನಮಿಸಿದ್ದಾರೆ. ಈ ವೇಳೆ ಮಾತನಾಡಿದ ಮೇಯರ್ ಗೌತಮ್ ಕುಮಾರ್, ಜೀವನದಲ್ಲಿ ಒಬ್ಬ ಮನುಷ್ಯ ಮನುಷ್ಯನಾಗಿ ಯಾವ ರೀತಿ ಬದುಕಬೇಕು ಎಂಬುದಕ್ಕೆ ಅಣ್ಣಾವ್ರು ಜೀವನ ಉದಾಹರಣೆಯಾಗಿದೆ. ಬಸವಣ್ಣನವರ ನಂತರ ಇಡೀ ಜಗತ್ತು ಆತ್ಮೀಯತೆಯಿಂದ ಅಣ್ಣಾ ಎಂದು ಕರೆಸಿಕೊಂಡ ಏಕೈಕ ವ್ಯಕ್ತಿ ಎಂದರೆ ಡಾ. ರಾಜ್ ಕುಮಾರ್ ಅವರು. ಈ ದಿನ ರಾಜ್ಯಾದ್ಯಂತ ಅವರ ಹುಟ್ಟುಹಬ್ಬ ಆಚರಿಸಿದರೆ ಸಾಲದು. ಅವರ ಜೀವನದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಒಳ್ಳೆಯ ಕೆಲಸ ಮಾಡಬೇಕು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.