ಬೆಂಗಳೂರು: ಬಿಬಿಎಂಪಿಯ 2020-21 ನೇ ಸಾಲಿನ ಬಜೆಟ್ ಗೆ ಸರ್ಕಾರ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಿದೆ.

ಒಟ್ಟು 11,969.5 ಕೋಟಿ ಮೊತ್ತದ ಬಜೆಟ್ನಲ್ಲಿ 254 ಕೋಟಿ ರೂ ಕಡಿತ ಮಾಡಿ, 11,715 ಕೋಟಿ ರೂ ಆಯವ್ಯಯಕ್ಕೆ ಅನುಮೋದನೆ ನೀಡಿದೆ.
ರಸ್ತೆಗುಂಡಿ ಮುಚ್ಚಲು ನೀಡಿದ್ದ 120 ಕೋಟಿ ರೂಗಳನ್ನು, ಐದು ಕೋಟಿ ರೂ.ಗೆ ಇಳಿಸಲಾಗಿದೆ. ಮಳೆ ನೀರುಗಾಲುವೆ ನಿರ್ವಹಣೆಯ 75 ಕೋಟಿ ರೂ. ಗಳನ್ನು 25 ಕೋಟಿ ರೂಪಾಯಿಗೆ ಕಡಿತಗೊಳಿಸಲಾಗಿದೆ. ಜೊತೆಗೆ ವಿಧಾನಸಭಾ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾಮಗಾರಿಗೆ 75 ಕೋಟಿ ರೂ ನೀಡಲಾಗಿತ್ತು. ಅದನ್ನು 50 ಕೋಟಿಗೆ ಇಳಿಸಲಾಗಿದೆ.

ಬೆಳ್ಳಂದೂರು ,ವರ್ತೂರು ಕೆರೆ ಅಭಿವೃದ್ಧಿಗೆ ಬಿಬಿಎಂಪಿ ಅನುದಾನ ಮೀಸಲಿಟ್ಟಿರಲಿಲ್ಲ, ಆದರೆ ಸರ್ಕಾರ ಈಗ ಕ್ರಮವಾಗಿ 25 ಕೋಟಿ ಹಾಗೂ 20 ಕೋಟಿ ಮೀಸಲಿಟ್ಟು ಪರಿಷ್ಕರಣೆಗೊಳಿಸಿದೆ.