ETV Bharat / state

ಬಿಬಿಎಂಪಿ ಅಧಿಕಾರಿಗೆ 2ನೇ ಬಾರಿ ಪರೀಕ್ಷೆ ನಡೆಸಿದಾಗ ಕೊರೊನಾ ನೆಗೆಟಿವ್..

author img

By

Published : Jun 2, 2020, 4:37 PM IST

ಕೊರೊನಾ ಸೋಂಕು ತಗುಲಿದೆ ಎಂದು ಹೇಳಲಾಗಿದ್ದ ಬಿಬಿಎಂಪಿ ಅಧಿಕಾರಿಗೆ 2ನೇ ಬಾರಿ ಕೋವಿಡ್​​ ಪರೀಕ್ಷೆ ನಡೆಸಿದಾಗ ಕೊರೊನಾ ರಿಪೋರ್ಟ್ ನೆಗೆಟಿವ್ ಬಂದಿದೆ.

bbmp-asistant-commissioner-kovid-report-is-negative
ಕೊರೊನಾ ರಿಪೋರ್ಟ್ ನೆಗೆಟಿವ್

ಬೆಂಗಳೂರು : ಕರ್ತವ್ಯದಲ್ಲಿದ್ದ ಬಿಬಿಎಂಪಿಯ ಸಹಾಯಕ ಆಯುಕ್ತರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ವಿಚಾರ ಪಾಲಿಕೆ ಆವರಣದಲ್ಲಿ ತಲ್ಲಣವುಂಟು ಮಾಡಿತ್ತು. ಆದರೆ, ಆ ರಿಪೋರ್ಟ್ 'Inconclusive' ಎಂದು ಬಂದ ಕಾರಣ ಮತ್ತೊಮ್ಮೆ ಗಂಟಲು ದ್ರವ ಪರೀಕ್ಷೆಗೆ ಕಳಿಸಲಾಗಿತ್ತು. ಅದರ ವರದಿ ಇದೀಗ ನೆಗೆಟಿವ್ ಎಂದು ಬಂದಿದೆ.

bbmp asistant commissioner kovid report is negative
ಕೊರೊನಾ ರಿಪೋರ್ಟ್ ನೆಗೆಟಿವ್

ಮೊದಲ ರಿಪೋರ್ಟ್​​ನಲ್ಲಿ ಸರಿಯಾಗಿ ದೃಢಪಡದ ಕಾರಣ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಅಧಿಕಾರಿ ಹೋಟೆಲ್ ಕ್ವಾರಂಟೈನ್‌ನಲ್ಲೇ ಮುಂದುವರಿದಿದ್ದರು. 2ನೇ ರಿಪೋರ್ಟ್ ನೆಗೆಟಿವ್ ಬಂದಿರುವುದರಿಂದ ನಿಟ್ಟುಸಿರು ಬಿಡುವಂತಾಗಿದೆ. ಆದರೆ, ಕೊರೊನಾ ಪಾಸಿಟಿವ್ ಬಂದಿದೆ ಎಂದು ಬಿಬಿಎಂಪಿ ಆಯುಕ್ತರೇ ಸ್ಪಷ್ಟಪಡಿಸಿದ ಕಾರಣ ಎಲ್ಲೆಡೆ ಸುದ್ದಿಯಾಗಿತ್ತು.

ಜೊತೆಗೆ ಪಾಲಿಕೆ ಕಟ್ಟಡದ 2 ಮಹಡಿಗಳನ್ನು ಸೀಲ್​​ಡೌನ್ ಮಾಡಿ ಮುನ್ನೆಚ್ಚರಿಕಾ ಕ್ರಮ ಸಹ ಕೈಗೊಳ್ಳಲಾಗಿತ್ತು. ಇದೀಗ 2ನೇ ಬಾರಿ ಟೆಸ್ಟ್​​ಗೆ ಕಳುಹಿಸಿದಾಗ ಐಸಿಎಮ್​​ಆರ್ ಹಾಗೂ ಎನ್ಐವಿ ವರದಿಯಲ್ಲಿ ಬಿಬಿಎಂಪಿ ಅಧಿಕಾರಿಗೆ ಕೋವಿಡ್-19 ಪಾಸಿಟಿವ್ ಇಲ್ಲ ಎಂದು ದೃಢಪಡಿಸಿದೆ. ಇದರಿಂದಾಗಿ ಬಿಬಿಎಂಪಿ ಸಿಬ್ಬಂದಿ ನಿಟ್ಟುಸಿರುಬಿಟ್ಟಂತಾಗಿದೆ.

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.