ಬೆಂಗಳೂರು : ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕು ಏರಿಕೆಯಾಗುತ್ತಿರುವ ಜೊತೆಗೆ ನಗರದ ಕೊರೊನಾ ಕ್ಲಸ್ಟರ್‌ಗಳ ಸಂಖ್ಯೆ ಕೂಡ 15ಕ್ಕೆ ಏರಿಕೆಯಾಗಿದೆ.
ನಿನ್ನೆ ಒಂದೇ ದಿನ 1,186 ಮಂದಿಗೆ ಕೊರೊನಾ ಮಹಾಮಾರಿ ಅಂಟಿದೆ. ನಗರದಲ್ಲಿ ಸಕ್ರಿಯ ಸೋಂಕಿತರ ಸಂಖ್ಯೆ 9044ಕ್ಕೆ ಏರಿಕೆಯಾಗಿದೆ. ಇನ್ನೊಂದೆಡೆ ಒಂದಾದ ಮೇಲೊಂದರಂತೆ ಅಪಾರ್ಟ್ಮೆಂಟ್ಗಳಲ್ಲಿ, ವಿದ್ಯಾರ್ಥಿ ನಿಲಯಗಳಲ್ಲಿ ಕೊರೊನಾ ದಾಖಲೆ ಮಟ್ಟದಲ್ಲಿ ಪತ್ತೆಯಾಗುತ್ತಿದೆ.
ಒಟ್ಟು 15 ಸಕ್ರಿಯ ಕ್ಲಸ್ಟರ್ ಕಂಟೇನ್ಮೆಂಟ್‌ಗಳು ಸದ್ಯ ಬೆಂಗಳೂರಿನಲ್ಲಿವೆ. ನಗರದಲ್ಲಿ 10ಕ್ಕಿಂತ ಹೆಚ್ಚು ಕ್ಲಸ್ಟರ್ಗಳು ನಿರ್ಮಾಣವಾದರೆ ಅದು ಅಪಾಯದ ಮುನ್ಸೂಚನೆ ಎಂದು ತಜ್ಞರು ಈ ಮುನ್ನವೇ ಎಚ್ಚರಿಸಿದ್ದರು. ಸದ್ಯ ನಗರದಲ್ಲಿ ದಿನಕ್ಕೆ ಒಂದು ಅಥವಾ ಎರಡು ಕ್ಲಸ್ಟರ್ಗಳು ನಿರ್ಮಾಣವಾಗುತ್ತಿವೆ. ಇನ್ನು 5ಕ್ಕಿಂತ ಹೆಚ್ಚು ಕೋವಿಡ್ ಕೇಸ್ ಪತ್ತೆಯಾದ್ರೆ ಕೊರೊನಾ ಕ್ಲಸ್ಟರ್ ಎಂದು ಬಿಬಿಎಂಪಿ ಘೋಷಿಸುತ್ತಿದೆ.
ನಗರದಲ್ಲಿರೋ 15 ಕೊರೊನಾ ಕ್ಲಸ್ಟರ್ಗಳು:
1) ಯಲಹಂಕದ ಇನಸ್ಪೈರ್ ಲೈವ್ ಸೂಟ್ ಪಿಜಿ- 12
2) ಬಿ.ನಾರಾಯಣಪುರ ಸರ್ಕಾರಿ ಶಾಲೆ- 9
3) ರಾಚೇನಹಳ್ಳಿ ನವಗ್ರಹ ಅಪಾರ್ಟ್ ಮೆಂಟ್- 6
4) ವಿದ್ಯಾಪೀಠದ ಸರ್ಕಾರಿ ಮೆಡಿಕಲ್ ಕಾಲೇಜು ಹಾಸ್ಟೆಲ್- 8
5) ಸಲಾರ್‌ಪುರಿಯಾ ಸತ್ವ ಲಕ್ಕೂರಿಯಾ ಅಪಾರ್ಟ್‌ಮೆಂಟ್- 6
6) ದಾಸರಹಳ್ಳಿ ನೃಪತುಂಗ ರಸ್ತೆಯ ಅಪಾರ್ಟ್‌ಮೆಂಟ್- 5
7) ಆರ್ಯ ಈಡಿಗರ ವಿದ್ಯಾರ್ಥಿನಿಯರ ಹಾಸ್ಟೆಲ್- 15
8) ಅಡ್ಮಿರಾಲಿಟಿ ಅವೆನ್ಯು- 7
9) ಯಲಹಂಕದ ಗೋವರ್ಧನ ರೆಸಿಡೆನ್ಸಿ- 7
10) ಬಿಇಎಲ್ ಲೇಔಟ್ ನ ಅಭಿಂಜನ ಬಿಲ್ಡಿಂಗ್ -7
11) ಚಿಕ್ಕಬೊಮ್ಮಸಂದ್ರದ ಅಪಾರ್ಟ್‌ಮೆಂಟ್- 6
12) ಪೂರ್ವ ವಲಯದ ಅಡ್ಮಿರಾಲಿಟಿ ಅವೆನ್ಯು -7
13) ದಾಸರಹಳ್ಳಿಯ ಶಿವಕೃಪ ನಿಲಯ- 7
14) ಸ್ವಾನ್ ಡಿಕ್ಸ್- 5
15) ವೈಯಾಲಿಕಾವಲ್- 7