ಬೆಂಗಳೂರು: ನಗರದಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಜೋರು ಮಳೆಯಿಂದಾಗಿ ಸಾಕಷ್ಟು ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಮಾರತಳ್ಳಿಯ ಸರ್ಜಾಪುರ ಔಟರ್ ರಿಂಗ್‌ರೋಡ್ ಸಂಪೂರ್ಣ ಜಲಾವೃತವಾಗಿ ಜನರು ಸಂಕಟ ಅನುಭವಿಸಿದ್ದಾರೆ. ಈ ಎಲ್ಲದರಿಂದ ಸಾಕಷ್ಟು ಟೀಕೆಗೆ ಗುರಿಯಾಗಿರುವ ಪಾಲಿಕೆ ಇದೀಗ 10 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿ ಜನರ ಆಕ್ರೋಶ ತಣಿಸಲು ಮುಂದಾಗಿದೆ.
ಮಾರತಳ್ಳಿಯಲ್ಲಿ ರಾಜಕಾಲುವೆ ಮುಚ್ಚಿರುವ ಪರಿಣಾಮ ಎಕೋ ಸ್ಪೇಸ್ ಬಳಿಯ ಮುಖ್ಯರಸ್ತೆ ಜಲಾವೃತಗೊಂಡಿದೆ. ಕೈಗೊಂಡನಹಳ್ಳಿ, ಸರ್ಜಾಪುರ ಕೆರೆಗಳ ನೀರು ರಸ್ತೆಗೆ ರಭಸವಾಗಿ ಹರಿದು ಬರುತ್ತಿದೆ.
ಅಧಿಕಾರಿಗಳಿಂದ ಸರ್ವೆ ಕಾರ್ಯ ನಡೆಯುತ್ತಿದೆ. ಕಾನೂನು ಬದ್ಧವಾಗಿ ಪರಿಹಾರ ನೀಡುತ್ತೇವೆ ಎಂದು ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ತಿಳಿಸಿದರು.
ಇದನ್ನೂ ಓದಿ: ಪಿಒಪಿ ಗಣಪತಿ ನಿರಾಕರಿಸಿ, ಜೇಡಿಮಣ್ಣಿನ ಮೂರ್ತಿ ಮನೆಗೆ ತನ್ನಿ: ಸಿಎಂ