ETV Bharat / state

ಪಾಲಿಕೆ ಆಸ್ತಿಗಳು-ಜಾಹಿರಾತುಗಳಿಂದ ಹೆಚ್ಚು ಆದಾಯ ಕ್ರೋಢೀಕರಣಕ್ಕೆ ಬಿಬಿಎಂಪಿ ಆಡಳಿತಾಧಿಕಾರಿ ಸೂಚನೆ

author img

By

Published : Oct 17, 2020, 8:12 PM IST

ಬಿಬಿಎಂಪಿಯ ಒಡೆತನದ ಆಸ್ತಿಗಳಿಂದ ಸಂಪನ್ಮೂಲ ಕ್ರೋಢಿಕರಣ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸುವಂತೆ ಆಡಳಿತಾಧಿಕಾರಿ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

Meeting
ಸಭೆ

ಬೆಂಗಳೂರು: ಬಿಬಿಎಂಪಿ ಆಸ್ತಿಗಳು, ಜಾಹಿರಾತು ವಿಭಾಗ ಹಾಗೂ ಟ್ರಾಫಿಕ್ ಇಂಜಿನಿಯರ್​ಗಳ ಜೊತೆ ಬಿಬಿಎಂಪಿ ಆಡಳಿತಾಧಿಕಾರಿ ಗೌರವ್ ಗುಪ್ತಾ ಇಂದು ಸಭೆ ನಡೆಸಿದ್ದಾರೆ.

ಬಿಬಿಎಂಪಿಯ ಒಡೆತನದ ಆಸ್ತಿಗಳಿಂದ ಸಂಪನ್ಮೂಲ ಕ್ರೋಢಿಕರಣ ಮಾಡುವ ನಿಟ್ಟಿನಲ್ಲಿ ಸೂಕ್ತ ಕ್ರಮವಹಿಸಬೇಕು. ಎಲ್ಲಾ ಆಸ್ತಿಗಳನ್ನು ಸರಿಯಾಗಿ ಸರ್ವೇ ಮಾಡಿ ಆ ಜಾಗಕ್ಕೆ ತಂತಿ ಬೇಲಿ (ಫೆನ್ಸಿಂಗ್) ಅಳವಡಿಸಬೇಕು ಎಂದು ಆಡಳಿತಾಧಿಕಾರಿ ಗೌರವ್ ಗುಪ್ತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆಸ್ತಿ ವಿಭಾಗದ ಉಪ ಆಯುಕ್ತರು ಹರೀಶ್ ನಾಯ್ಕ್​ ಮಾತನಾಡಿ, ಬಿಬಿಎಂಪಿಯ ಒಡೆತನದ ಒಟ್ಟು 6,828 ಆಸ್ತಿಗಳಿದ್ದು, ಅವುಗಳಲ್ಲಿ 324 ಆಸ್ತಿಗಳನ್ನು ಗುತ್ತಿಗೆ ನೀಡಲಾಗಿದೆ. ಈ ಪೈಕಿ 168 ಆಸ್ತಿಗಳು ಗುತ್ತಿಗೆ ಅವಧಿಯಲ್ಲಿದ್ದು, 156 ಆಸ್ತಿಗಳ ಗುತ್ತಿಗೆ ಅವಧಿ ಪೂರ್ಣಗೊಂಡಿವೆ. ಗುತ್ತಿಗೆ ಅವಧಿ ಮುಗಿದಿರುವ ಆಸ್ತಿಗಳನ್ನು ಪಾಲಿಕೆ ವಶಕ್ಕೆ ಹಿಂಪಡೆದು, ಪ್ರಸ್ತುತ ಮಾರುಕಟ್ಟೆ ದರ ನಿಗದಿಪಡಿಸಿ ಗುತ್ತಿಗೆ ನೀಡಲು ಕ್ರಮವಹಿಸಲಾಗುತ್ತಿದೆ ಎಂದರು.

ಪಾಲಿಕೆಯ ಆಸ್ತಿಗಳ ನಿಖರ ಮಾಹಿತಿ ಸಂಗ್ರಹಿಸಿಡಲು "ಪಾಲಿಕೆ ಭೂಮಿ” ಸಾಫ್ಟ್ ವೇರ್ ಅಭಿವೃದ್ಧಿ ಪಡಿಸಲಾಗಿದ್ದು, ಎಲ್ಲಾ ಆಸ್ತಿಗಳಿಗೂ ಸ್ವತ್ತಿನ ಗುರುತಿನ ಸಂಖ್ಯೆ(ಪಿ.ಐ.ಡಿ ಸಂಖ್ಯೆ) ನೀಡಲಾಗುತ್ತಿದೆ. ಈ ಪೈಕಿ ಈಗಾಗಲೇ 1,700 ಆಸ್ತಿಗಳಿಗೆ ಪಿ.ಐ.ಡಿ ಸಂಖ್ಯೆ ನೀಡಲಾಗಿದೆ. ಪಾಲಿಕೆ ಆಸ್ತಿಗಳನ್ನು ಸರ್ವೇ ಮಾಡಲು 4 ಮಂದಿ ಭೂಮಾಪಕರು ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.

ಜಾಹಿರಾತು ವಿಭಾಗದ ಜಂಟಿ ಆಯುಕ್ತರು ವೆಂಕಟೇಶ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಜಾಹೀರಾತಿಗೆ ಸಂಬಂಧಿಸಿದಂತೆ ಹೊಸ ಬೈಲಾ ಜಾರಿಗೆ ಬಂದಿದ್ದು, ಸದ್ಯ ಬಿಬಿಎಂಪಿ ಔಟ್‌ ಡೋರ್ ಸೈನೇಜ್ ಅಂಡ್ ಪಬ್ಲಿಕ್ ಮೆಸೆಜಿಂಗ್ ಬೈಲಾ-2018 ಜಾರಿಯಲ್ಲಿದೆ ಎಂದರು.

ನಗರದಲ್ಲಿ ವಾಣಿಜ್ಯ ಜಾಹೀರಾತು ಸಂಬಂಧಿಸಿದ ಹೋರ್ಡಿಂಗ್ಸ್ ಪ್ರದರ್ಶಿಸಲು ಅವಕಾಶವಿಲ್ಲ. ಸಾರ್ವಜನಿಕ ಖಾಸಗಿ ಸಹಭಾಗಿತ್ವ (ಪಿಪಿಪಿ) ದಲ್ಲಿ ಸ್ಥಾಪಿಸಿರುವ ಬಸ್ ತಂಗುದಾಣ, ಪಾದಚಾರಿ ಮೇಲುಸೇತುವೆ (ಸ್ಕೈವಾಕ್), ಸಾರ್ವಜನಿಕ ಶೌಚಾಲಯ ಹಾಗೂ ಪೊಲೀಸ್ ಚೌಕಿಗಳ ಬಳಿ ಮಾತ್ರ ಜಾಹೀರಾತು ಹಾಕಲು ಅವಕಾಶವಿದೆ ಎಂದರು. ಗುತ್ತಿಗೆ ಮುಗಿದಿದ್ದರೆ ಪರಿಶೀಲನೆ ನಡೆಸಿ, ಸೂಕ್ತ ಆದಾಯ ಕ್ರೋಢೀಕರಿಸಲು ತಿಳಿಸಿದರು.

ಪಾಲಿಕೆಯ ಟಿ.ಇ.ಸಿ ವಿಭಾಗದಿಂದ ಆರ್ಟೀರಿಯಲ್, ಸಬ್ ಆರ್ಟೀರಿಯಲ್ ರಸ್ತೆಗಳಲ್ಲಿ ರಸ್ತೆ ಸುರಕ್ಷತಾ ಕಾರ್ಯಗಳನ್ನು ಸಮಪರ್ಕವಾಗಿ ಮಾಡಲು ಗೌರವ್ ಗುಪ್ತಾ ಸೂಚಿಸಿದರು.

ಕಾರ್ಯಪಾಲಕ ಅಭಿಯಂತರರು (ಟಿ.ಇ.ಸಿ) ಶ್ರೀನಿವಾಸ್ ಮಾತನಾಡಿ, ರಸ್ತೆಗಳಲ್ಲಿ ವೈಜ್ಞಾನಿಕ ಉಬ್ಬುಗಳ ಅಳವಡಿಕೆ, ಮೀಡಿಯನ್ಸ್, ಲೈನ್/ಜೀಬ್ರಾ ಮಾರ್ಕಿಂಗ್, ಪಾದಚಾರಿ ಮೇಲುಸೇತುವೆ(ಸ್ಕೈವಾಕ್), ಯು-ಟರ್ನ್ ಅಭಿವೃದ್ಧಿ, ಅಪಘಾತ ಸ್ಥಳಗಳನ್ನು ಗುರುತಿಸಿ ಅಪಘಾತಗಳಾಗಂತೆ ಸೂಕ್ತ ಕ್ರಮವಹಿಸುವುದು, ಜಂಕ್ಷನ್‌ಗಳ ಅಭಿವೃದ್ಧಿ ಸೇರಿದಂತೆ ಇನ್ನಿತರೆ ಕಾರ್ಯಗಳನ್ನು ಮಾಡಲಾಗುತ್ತಿದೆ ಎಂದರು.

ನಗರದ 29 ಕಡೆ ಹೆಚ್ಚು ಅಪಘಾತ ಆಗುವ ಸ್ಥಳಗಳನ್ನು ಸಂಚಾರಿ ಪೊಲೀಸ್ ವಿಭಾಗವು ಗುರುತಿಸಿ ಮಾಹಿತಿ ನೀಡಿದೆ. ಈ ಸಂಬಂಧ ಹೆಚ್ಚು ಅಪಘಾತಗಳಾಗುವ ಸ್ಥಳದಲ್ಲಿ ವೈಜ್ಞಾನಿಕ ರಸ್ತೆ ಉಬ್ಬು, ವೇಗ ಮಿತಿ ನಾಮಫಲಕ, ಲೈನ್ ಮಾರ್ಕಿಂಗ್, ಬ್ಯಾರಿಕೇಡಿಂಗ್, ಲೈಟಿಂಗ್, ರೇಡಿಯಂ ಅಳವಡಿಕೆ, ಗೋಡೆಗಳಿಗೆ ಬಣ್ಣ ಬಳಿಯುವುದು ಆಗುವ ಅಪಘಾತಗಳನ್ನು ಕಡಿಮೆ ಮಾಡಲು ಕ್ರಮವಹಿಸಲಾಗುವುದು ಎಂದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.