ಬೆಂಗಳೂರು: ನೂತನ ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಆಯ್ಕೆಯಾಗುತ್ತಿದ್ದಂತೆ ಹೋಟೆಲ್ ಮುಂಭಾಗ ಅವರ ಡ್ಯಾನ್ಸ್ ಮಾಡುವ ಮೂಲಕ ಅಭಿಮಾನಿಗಳು ಸಂಭ್ರಮಿಸಿದರು.
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ನಡೆದ ಬಿಜೆಪಿ ಶಾಸಕಾಂಗ ಸಭೆಯಲ್ಲಿ ನೂತನ ಮುಖ್ಯಮಂತ್ರಿ ಸ್ಥಾನಕ್ಕೆ ಬಸವರಾಜ್ ಬೊಮ್ಮಾಯಿ ಹೆಸರು ಅಂತಿಮಗೊಂಡಿತು. ಇದಾದ ಬೆನ್ನಲ್ಲೇ ನಾಯಕರು ರಾಜಭವನಕ್ಕೆ ತೆರಳಿದರು.
ಈ ಸಂದರ್ಭ ಹೋಟೆಲ್ ಬಳಿ ಇದ್ದ ಬಸವರಾಜ್ ಬೊಮ್ಮಾಯಿ ಅಭಿಮಾನಿಗಳು ನೃತ್ಯ ಮಾಡಿ ಸಂಭ್ರಮಿಸಿದರು. ಬೊಮ್ಮಾಯಿ ಪರವಾಗಿ ಘೋಷಣೆ ಕೂಗಿ ಸಂತಸ ವ್ಯಕ್ತಪಡಿಸಿದರು.
ಬಸವರಾಜ್ ಬೊಮ್ಮಾಯಿ ಆಯ್ಕೆ ವಿಚಾರದಲ್ಲಿ ಸಾಕಷ್ಟು ಕುತೂಹಲ ಮೂಡಿದೆ. ಬಿಎಸ್ ಯಡಿಯೂರಪ್ಪ ಅವರೇ ಪರೋೂಕ್ಷವಾಗಿ ಅಧಿಕಾರ ನಡೆಸಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅದೇನೇ ಇರಲಿ ಬೊಮ್ಮಾಯಿ ಅಭಿಮಾನಿಗಳಂತೂ ಅವರ ಆಯ್ಕೆ ಅತೀವ ಸಂತಸ ತಂದಿದೆ.
ಇದನ್ನು ಓದಿ:ಸಿಎಂ ಆಗಲು ಯಾವುದೇ ಷರತ್ತು ವಿಧಿಸಿಲ್ಲ, ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಆಡಳಿತ ನೀಡುವೆ: ಬೊಮ್ಮಾಯಿ