ETV Bharat / state

ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಹರಿದು ಬರುತ್ತಿದೆ ಜನಸಾಗರ

ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಜನಸಾಗರವೇ ಹರಿದು ಬರುತ್ತಿದೆ. ವಿದೇಶಿ ಪ್ರವಾಸಿಗರು ಕೂಡ ಆಗಮಿಸಿ ಬಡವರ ಬಾದಾಮಿಯನ್ನು ಸವಿಯುತ್ತಿದ್ದಾರೆ.

BASAVANAGUDI KADALEKAI PARISHE
ಬಸವನಗುಡಿ: ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಹರಿದು ಬರುತ್ತಿದೆ ಜನಸಾಗರ..!
author img

By

Published : Nov 21, 2022, 7:34 PM IST

ಬೆಂಗಳೂರು: ಕಾರ್ತಿಕ ಮಾಸದ ಅಂಗವಾಗಿ ಬಸವನಗುಡಿಯಲ್ಲಿ ನಡೆಯುವ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಸೋಮವಾರವೂ ಜನಸಾಗರ ಹರಿದು ಬರುತ್ತಿದೆ. ಕಡಲೆಕಾಯಿ ಪರಿಷೆಗೆ ಭಾನುವಾರ ಸಂಜೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಿದ್ದರು.

ನಗರದ ಜನತೆ ಪರಿಷೆಗೆ ಬಂದು ದೊಡ್ಡಗಣಪತಿ ಹಾಗೂ ದೊಡ್ಡ ಬಸವಣ್ಣ ದೇವಸ್ಥಾನಗಳಿಗೆ ಭೇಟಿ ನೀಡಿ ಪೂಜೆ ಸಲ್ಲಿಸುತ್ತಿದ್ದಾರೆ. ಬಡವರ ಬಾದಾಮಿಯನ್ನು ಖರೀದಿಸಿ ಸವಿಯಲು, ವಿದೇಶಿ ಪ್ರವಾಸಿಗರು ಕೂಡ ಆಗಮಿಸುತ್ತಿದ್ದಾರೆ. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿರುವ ರೈತರು ರಾಶಿ ರಾಶಿ ಕಡಲೆಕಾಯಿ ಮಾರಾಟದಲ್ಲಿ ಬ್ಯುಸಿಯಾಗಿದ್ದಾರೆ.

BASAVANAGUDI KADALEKAI PARISHE
ಬಸವನಗುಡಿ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಹರಿದು ಬರುತ್ತಿದೆ ಜನಸಾಗರ

ಎರಡು ಸಾವಿರ ಮಳಿಗೆಗಳಿಗೆ ಅವಕಾಶ: ಸುಮಾರು ಎರಡು ಸಾವಿರ ಮಳಿಗೆಗಳಿಗೆ ಅವಕಾಶ ಕಲ್ಪಿಸಲಾಗಿದೆ. ಭಕ್ತಾದಿಗಳ ಹಿತದೃಷ್ಟಿಯಿಂದ ಸಿಸಿ ಕ್ಯಾಮರಾ ಹಾಗೂ ದೇವರ ದರ್ಶನಕ್ಕಾಗಿ ಎಲ್‌ಇಡಿ ಸ್ಕ್ರೀನ್ ಅಳವಡಿಸಲಾಗಿದೆ. ಭದ್ರತೆಗಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿದೆ.

BASAVANAGUDI KADALEKAI PARISHE
ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ

ಕೆಂಪಾಂಬುದಿ ಕೆರೆಯಲ್ಲಿ ತೆಪ್ಪೋತ್ಸವ: ಇಂದು ಕೆಂಪಾಂಬುದಿ ಕೆರೆಯಲ್ಲಿ ಸಾಂಪ್ರದಾಯಿಕ ತೆಪ್ಪೋತ್ಸವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ದೊಡ್ದ ಗಣಪತಿ ದೇವಸ್ಥಾನ, ದೊಡ್ದ ಬಸವಣ್ಣ ದೇವಸ್ಥಾನಗಳ ಪಕ್ಕದ ಬ್ಯುಗಲ್ ರಾಕ್ ಉದ್ಯಾನವನ ಮತ್ತು ನರಸಿಂಹಸ್ವಾಮಿ ಉದ್ಯಾನವನದಲ್ಲಿ ನವೆಂಬರ್ 22ರವರೆಗೂ(ಮಂಗಳವಾರ) ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.

BASAVANAGUDI KADALEKAI PARISHE
ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆ

ಕೆಂಪಾಪುರ ಕೆರೆಗೆ ಮುಂದಿನ ಬಜೆಟ್ ನಲ್ಲಿ ಅನುದಾನ ಒದಗಿಸಿ ಅಭಿವೃದ್ಧಿಗೊಳಿಸಲಾಗುವುದು. ಅಲ್ಲದೇ ಬಸವನಗುಡಿಯಲ್ಲಿ ಪಾರಂಪರಿಕ ಪಾರ್ಕ್ ನಿರ್ಮಾಣವನ್ನು ಪ್ರವಾಸೋದ್ಯಮ ಇಲಾಖೆಯ ವತಿಯಿಂದ ಘೋಷಿಸಿ, ಅನುದಾನ ಒದಗಿಸಲಾಗುವುದು. ಜೊತೆಗೆ ಇತಿಹಾಸ, ಪರಂಪರೆ ಎಂದು ಹೇಳುವ ಕುರುಹುಗಳಿದ್ದಲ್ಲಿ ನಾವು ಹುಡುಕಿ ಅಭಿವೃದ್ಧಿಗೊಳಿಸಲು 'ಅಡಾಪ್ಟ್ ದಿ ಮಾನ್ಯುಮೆಂಟ್' ಕಾರ್ಯಕ್ರಮ ರೂಪಿಸಿದ್ದೇವೆ. ಇಚ್ಛೆಯಿದ್ದವರು ಒಂದೊಂದು ಸ್ಮಾರಕವನ್ನು ದತ್ತು ಪಡೆದು ಅಭಿವೃದ್ಧಿಗೊಳಿಸಲು ಅವಕಾಶವಿದೆ ಎಂದು ಸಿಎಂ ಬೊಮ್ಮಾಯಿ ನಿನ್ನೆ ಕಾರ್ಯಕ್ರಮ ಉದ್ಘಾಟನೆಯ ವೇಳೆ ತಿಳಿಸಿದ್ದಾರೆ.

ಇದನ್ನೂ ಓದಿ: ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆಗೆ ಇಂದು ಸಂಜೆ ಸಿಎಂ ಚಾಲನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.