ETV Bharat / state

ಮನೀಶ್‌ ಶೆಟ್ಟಿ ಹಂತಕರ ಬಂಧನಕ್ಕೆ 9 ವಿಶೇಷ ಪೊಲೀಸ್‌ ತಂಡದಿಂದ ಶೋಧ - Manish Shetty Shootout Case

ಬೆಂಗಳೂರಿನಲ್ಲಿ ತಡರಾತ್ರಿ ಬೆಚ್ಚಿಬೀಳಿಸಿದ್ದ ಲೇಡಿಸ್‌ ಬಾರ್ ಮಾಲೀಕನ ಶೂಟೌಟ್ ಪ್ರಕರಣದ ತನಿಖೆಯನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ಒಳಗೊಂಡ 9 ವಿಶೇಷ ತಂಡ ಕೈಗೆತ್ತಿಕೊಂಡಿದೆ.

Bar owner's shoot out case: Search for accused by 9 special squad
ಬಾರ್ ಮಾಲೀಕನ ಶೂಟೌಟ್ ಪ್ರಕರಣ: 9 ವಿಶೇಷ ತಂಡದಿಂದ ಆರೋಪಿಗಳಿಗೆ ಶೋಧ
author img

By

Published : Oct 16, 2020, 12:21 PM IST

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ತಡರಾತ್ರಿ ನಡೆದ ಮನೀಶ್ ಶೆಟ್ಟಿ ಶೂಟೌಟ್ ಪ್ರಕರಣದ ತನಿಖೆಯನ್ನು ಕೇಂದ್ರ ವಿಭಾಗದ ಡಿಸಿಪಿ ಅನುಚೇತ್ ನೇತೃತ್ವದಲ್ಲಿ ಒಂಬತ್ತು ವಿಶೇಷ ಪೊಲೀಸ್‌ ತಂಡಗಳು ಕೈಗೆತ್ತಿಕೊಂಡಿದ್ದು, ಆರೋಪಿಗಳಿಗಾಗಿ ಶೋಧ ಕಾರ್ಯ ನಡೆಸುತ್ತಿದೆ.

ಈ ವಿಶೇಷ ತಂಡಗಳು ಘಟನಾ ಸ್ಥಳದಲ್ಲಿನ ಮಾಹಿತಿ ಆಧರಿಸಿ, ಕೃತ್ಯ ನಡೆದ ಸ್ಥಳದಲ್ಲಿನ ಸಿಸಿಟಿವಿಯನ್ನು ವಶಕ್ಕೆ ಪಡೆದಿದ್ದಾರೆ. ಆರೋಪಿಗಳು ಮುಖಕ್ಕೆ ಮಂಕಿ ಕ್ಯಾಪ್​ ಹಾಗೂ ಜಾಕೆಟ್​ ಧರಿಸಿದ್ದ ಕಾರಣ ಚಹರೆ ಕೊಂಚ ಕಾಣುತ್ತದೆ. ಜೊತೆಗೆ, ಆರೋಪಿಗಳು ಪರಾರಿಯಾದ ಹೆಜ್ಜೆ ಗುರುತನ್ನಾಧರಿಸಿ ತನಿಖಾಧಿಕಾರಿಗಳು ನೆಟ್​ವರ್ಕ್ ಟ್ರ್ಯಾಪ್​ ಮಾಡುತ್ತಿದ್ದಾರೆ. ಹಾಗೆಯೇ ಟೆಕ್ನಿಕಲ್ ಮಾಹಿತಿಗಳನ್ನಾಧರಿಸಿ ಈ ತಂಡಗಳು ಶೋಧ ಕಾರ್ಯ ನಡೆಸುತ್ತಿದೆ. ಈಗಾಗಲೇ ಆರೋಪಿಗಳು ಕೃತ್ಯಕ್ಕೆ ಬಳಸಿದ ಬೈಕ್, ಮಾರಕಾಸ್ತ್ರ ಸ್ಥಳದಲ್ಲೇ ಬಿಟ್ಟು ಹೋಗಿದ್ದಾರೆ. ಇದ್ರಿಂದ ಈಗಾಗಲೇ ಸಾಕಷ್ಟು ಸಾಕ್ಷ್ಯಾಧಾರಗಳು ಪೊಲೀಸರಿಗೆ ಲಭ್ಯವಾಗಿದೆ.‌

ಬ್ರಿಗೇಡ್ ರಸ್ತೆ ಹತ್ತಿರದ ಆರ್​ಹೆಚ್​ಪಿ ರಸ್ತೆಯಲ್ಲಿರುವ ಡ್ಯುಯೆಟ್ ಬಾರ್ ಮುಂದೆ ಕಳೆದ ರಾತ್ರಿ 9:00 ಗಂಟೆ ಸುಮಾರಿಗೆ ಮನೀಶ್ ಶೆಟ್ಟಿ ನಿಂತಿದ್ದಾಗ ಸ್ಕೂಟರ್‌ನಲ್ಲಿ ಬಂದ ಆರೋಪಿಗಳ ತಂಡ ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿತ್ತು. ಈ ವೇಳೆ ಗಾಯಾಳು ಮನೀಶ್‌ ಶೆಟ್ಟಿಯನ್ನು ಹತ್ತಿರದ ಮಲ್ಯ ಆಸ್ಪತ್ರೆಗೆ ದಾಖಲಿಸಿದ್ರೂ ತೀವ್ರ ರಕ್ತಸ್ರಾವದಿಂದ ಅವರು ಮೃತಪಟ್ಟಿದ್ದರು.

ಮನೀಶ್​ ಶೆಟ್ಟಿಗೆ ಭೂಗತಲೋಕದ ನಂಟು ಸಹ ಇದ್ದು, ಕೆಲವರ ಕೊಲೆ, ದರೋಡೆ ಮಾಡಿ ಜೈಲು ಪಾಲಾಗಿದ್ದನಂತೆ. ಸದ್ಯ ಆತನಿಗೆ ಕ್ರಿಮಿನಲ್ ಹಿನ್ನೆಲೆ ಇರುವ ಕಾರಣ ಎಲ್ಲಾ ಆಯಾಮಗಳಲ್ಲಿ ಸಿಸಿಬಿ ಪೊಲೀಸರು ಹಾಗೂ ಕೇಂದ್ರ ವಿಭಾಗ ಪೊಲೀಸರು ಜಂಟಿಯಾಗಿ ತನಿಖಾ ಕಾರ್ಯ ಮಾಡುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.