ETV Bharat / state

ದೇವಾಲಯದಿಂದ ರಕ್ಷಿಸಿದ್ದ ಆನೆಗೆ ಬನ್ನೇರುಘಟ್ಟ ಉದ್ಯಾನ ಸಿಬ್ಬಂದಿಯಿಂದ ರಾಜಾತಿಥ್ಯ

author img

By

Published : Nov 12, 2020, 7:53 PM IST

ಆನೆಯನ್ನು ಪೀಟಾ (ಠಿಣಚಿ) ಎಂಬ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿ ಹತ್ತು ಹಲವು ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಎದುರಿಸಿದ ಬಳಿಕ ಅಂತಿಮವಾಗಿ ಬನ್ನೇರುಘಟ್ಟ ಉಧ್ಯಾನವನಕ್ಕೆ ಆನೆಯನ್ನು ಹಸ್ತಾಂತರಿಸಲಾಗಿದೆ ಎಂದು ಉದ್ಯಾನದ ಕಾರ್ಯಪಾಲಕ ನಿರ್ದೇಶಕಿ ವನಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

elephant
ಆನೆ

ಆನೇಕಲ್: ಮಹಾರಾಷ್ಟ್ರದಲ್ಲಿನ ಕೊಲ್ಹಾಪುರದ ದೇವಾಲಯವೊಂದರಲ್ಲಿದ್ದ 20 ವರ್ಷದ ಆನೆ ಸುಂದರ್’ಗೆ ಮುಕ್ತಿ ಸಿಕ್ಕಿದ್ದು, ಬನ್ನೇರುಘಟ್ಟ ಜೈವಿಕ ಉದ್ಯಾನವನದ ಸಿಬ್ಬಂದಿಯಿಂದ ಸಡಗರ ಸಂಭ್ರಮದ ರಾಜಾತಿಥ್ಯ ದೊರೆತಿದೆ.

ಈ ಆನೆಗಾಗಿ ಪೀಟಾ (ಠಿಣಚಿ) ಎಂಬ ಸರ್ಕಾರೇತರ ಸಂಸ್ಥೆಯ ಸಿಬ್ಬಂದಿ ಹತ್ತು ಹಲವು ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನು ಎದುರಿಸಿದ ಬಳಿಕ ಅಂತಿಮವಾಗಿ ಬನ್ನೇರುಘಟ್ಟ ಉದ್ಯಾನವನಕ್ಕೆ ಆನೆಯನ್ನು ಹಸ್ತಾಂತರಿಸಲಾಗಿದೆ ಎಂದು, ಉದ್ಯಾನದ ಕಾರ್ಯಪಾಲಕ ನಿರ್ದೇಶಕಿ ವನಶ್ರೀ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬನ್ನೇರುಘಟ್ಟ ಉದ್ಯಾನ ಸಿಬ್ಬಂದಿಯಿಂದ ರಾಜಾತಿಥ್ಯ

ಈಗಾಗಲೇ ಇರುವ 23 ಆನೆ ಹಿಂಡಿಗೆ ಈ ಸುಂದರ್ ಸೇರ್ಪಡೆಯಿಂದ 24ರ ಸಂಖ್ಯೆ ದಾಟಿರುವ ಉತ್ಸಾಹದಲ್ಲಿ ಉದ್ಯಾನ ಸಂಭ್ರಮಿಸುತ್ತಿದೆ. ಉದ್ಯಾನದಲ್ಲಿಯೇ ಜನಿಸಿದ ಹಲವು ಆನೆಗಳ ಪೈಕಿ ಕೆಲವಷ್ಟೇ ದೇವಾಲಯಗಳಿಂದ ಹಾಗೂ ಸರ್ಕಸ್ ಕಂಪನಿಗಳಿಂದ ರಕ್ಷಿಸಿ ಬನ್ನೇರುಘಟ್ಟ ಉಧ್ಯಾನದಲ್ಲಿರಿಸಲಾಗಿದೆ. ಈಗಾಗಲೇ ಜನರ ಬಳಿ ಪಳಗಿರುವ ಆನೆ ಉಳಿದ ಆನೆಗಳೊಂದಿಗೆ ಹಾಗು ಮಾವುತರೊಂದಿಗೆ ಹೊಂದಾಣಿಕೆಯಾಗಿದ್ದು ಪ್ರಾಣಿಪ್ರಿಯರಿಗೆ, ಸಫಾರಿಗೆ ಬರುವ ವೀಕ್ಷಕರಿಗೆ ಕಾಣ ಸಿಗಲಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.