ಮಹದೇವಪುರ/ಬೆಂಗಳೂರು: ದೀಪಾವಳಿ ಹಬ್ಬದ ಹಿನ್ನೆಲೆ ಈ ಬಾರಿ ಕೇವಲ ಹಸಿರು ಪಟಾಕಿಗಳನ್ನು ಮಾತ್ರ ಮಾರಾಟ ಮಾಡಲು ಮತ್ತು ಸಿಡಿಸಲು ಸರ್ಕಾರ ಅನುಮತಿ ನೀಡಿದೆ.
ಆದರೆ ಬೆಂಗಳೂರಿನ ಮಹದೇವಪುರ, ವೈಟ್ ಫೀಲ್ಡ್, ಕಾಡುಗೋಡಿ ಸಮೀಪ ನಿರ್ಮಿಸಿರುವ ದೊಡ್ಡ ದೊಡ್ಡ ಶೆಡ್ಗಳಲ್ಲಿ ರಾಜಾರೋಷವಾಗಿ ನಿಷೇಧಿತ ಪಟಾಕಿಗಳ ಮಾರಾಟ ಅವ್ಯಾಹತವಾಗಿ ನಡೆಯುತ್ತಿದೆ. ಮಳಿಗೆಗಳ ಮುಂದಿನ ಸಾಲಿನಲ್ಲಿ ಮಾತ್ರ ಹಸಿರು ಪಟಾಕಿಗಳನ್ನು ಇಟ್ಟು ಹಿಂದಿನ ಸಾಲಿನಲ್ಲಿ ಮತ್ತು ದೊಡ್ಡ ದೊಡ್ಡ ಕಾಟನ್ ಬಾಕ್ಸ್ಗಳಲ್ಲಿ ಅಕ್ರಮವಾಗಿ ನಿಷೇಧಿತ ಸಿಡಿಮದ್ದುಗಳನ್ನು ಮಾರಾಟ ಮಾಡುತ್ತಿರುವ ಆರೋಪ ಕೇಳಿಬಂದಿದೆ.
ಮಾರಾಟಗಾರರನ್ನು ವಿಚಾರಿಸಿದರೆ ಲಕ್ಷಾಂತರ ರೂಪಾಯಿ ಬಂಡವಾಳ ಹಾಕಿದ್ದೇವೆ. ಹಸಿರು ಪಟಾಕಿ ಬೆಲೆ ಹೆಚ್ಚಿರುವುದರಿಂದ ಅವುಗಳನ್ನು ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ. ಆದರಿಂದ ಹಾಕಿರುವ ಬಂಡವಾಳ ತೆಗೆಯಲು ಆಗುತ್ತಿಲ್ಲ ಎಂದು ವ್ಯಾಪಾರಿಗಳು ಹೇಳುತ್ತಿದ್ದಾರೆ.ಇನ್ನೂ ಕೆಲವು ಪಟಾಕಿ ಬಾಕ್ಸ್ಗಳ ಮೇಲೆ ಗ್ರೀನ್ ಪಟಾಕಿ ಸ್ಟಿಕ್ಕರ್ಗಳನ್ನು ಅಂಟಿಸಿ ಮಾರಾಟ ಮಾಡುತ್ತಿದ್ದಾರೆ ಎನ್ನಲಾಗ್ತಿದೆ. ಅದು ಕಂಪನಿಯವರೇ ಹಾಕಿರುವುದಾಗಿ ಹೇಳುತ್ತಿದ್ದಾರೆ. ಸ್ಟಾಂಡರ್ಡ್ ಪಟಾಕಿ ಬಿಟ್ಟು ಬೇರೆ ಎಲ್ಲಾ ಕಂಪನಿಯ ಸಿಡಿಮದ್ದುಗಳ ಬಾಕ್ಸ್ಗಳ ಮೇಲೆ ಸ್ಟಿಕ್ಕರ್ ಅಂಟಿಸಿ ಅಕ್ರಮವಾಗಿ ಮಾರಾಟ ಮಾಡಲಾಗ್ತಿದೆ. ಇಷ್ಟಾದರೂ ಯಾವುದೇ ಅಧಿಕಾರಿಗಳು ಕ್ರಮಕ್ಕೆ ಮುಂದಾಗುತ್ತಿಲ್ಲ.ಒಂದು ವೇಳೆ ಮಳಿಗೆಗಳಲ್ಲಿ ಅನಾಹುಸಂಭವಿಸಿದರೆ ಯಾವುದೇ ರೀತಿಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿಲ್ಲ. ಮರಳು, ನೀರಿನ ಟ್ಯಾಂಕ್,ಫೈರ್ ಗ್ಯಾಸ್ ಇದ್ಯಾವುದನ್ನು ಇಟ್ಟುಕೊಂಡಿಲ್ಲ ಎಂದು ಹೇಳಲಾಗ್ತಿದೆ.