ETV Bharat / state

ವಿಶೇಷ ಪ್ಯಾಕೇಜ್: ಸರ್ಕಾರದ ಮೇಲೆ ಒತ್ತಡ ಹೇರಲು ’ಸಿದ್ದು’ಗೆ ಬಂಜಾರ ಸಮುದಾಯದ ಮನವಿ - ಸಿದ್ದರಾಮಯ್ಯ

ಪ್ರಸ್ತುತ, ಕೋವಿಡ್-19ರ ಹಿನ್ನೆಲೆಯಲ್ಲಿ ಬಹುತೇಕ ಕೂಲಿ ಕಾರ್ಮಿಕರು ತಮ್ಮ ತಮ್ಮ ತಾಂಡಾಗಳಿಗೆ ತಲುಪಿದ್ದಾರೆ. ಇನ್ನೂ ಕೆಲವರು ತಲುಪುತ್ತಿದ್ದು, ಇವರೆಲ್ಲ ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ಪ್ರತಿಪಕ್ಷ ನಾಯಕರ ಎದುರು ಆ ಸಮುದಾಯದ ನಾಯಕರು ಅಳಲು ತೋಡಿಕೊಂಡಿದ್ದಾರೆ.

ಸಿದ್ದರಾಮಯ್ಯಗೆ ಬಂಜಾರ ಸಮುದಾಯ ನಾಯಕರ ಮನವಿ
ಸಿದ್ದರಾಮಯ್ಯಗೆ ಬಂಜಾರ ಸಮುದಾಯ ನಾಯಕರ ಮನವಿ
author img

By

Published : May 13, 2020, 1:48 PM IST

ಬೆಂಗಳೂರು: ಲಂಬಾಣಿ (ಬಂಜಾರ) ಸಮುದಾಯದ ವಲಸೆ ಕಾರ್ಮಿಕರಿಗೆ ಕೋವಿಡ್-19ನಲ್ಲಿ ವಿಶೇಷ ಪ್ಯಾಕೇಜ್ ಘೋಷಿಸಲು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಸಮುದಾಯದ ಮುಖಂಡರು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು.

ಶಾಸಕರಾದ ಪರಮೇಶ್ವರ ನಾಯಕ, ಪ್ರಕಾಶ್ ರಾಥೋಡ್, ಮಾಜಿ ಸಚಿವರಾದ ಶಿವಮೂರ್ತಿ, ಕಾಂತಾ ನಾಯಕ್ ಮನವಿ ಸಲ್ಲಿಕೆ ಸಂದರ್ಭದಲ್ಲಿ ಹಾಜರಿದ್ದರು. ಪತ್ರದಲ್ಲಿ ಮುಖಂಡರು, ಕರ್ನಾಟಕ ರಾಜ್ಯದಲ್ಲಿ ಲಂಬಾಣಿ (ಬಂಜಾರ) ಸಮುದಾಯದವರು ಕಡು ಬಡವರಾಗಿದ್ದು, ಉದ್ಯೋಗ ಅರಸಿ ನಮ್ಮ ರಾಜ್ಯದ ಪ್ರಮುಖ ಪಟ್ಟಣಗಳೂ ಸೇರಿದಂತೆ ಹೊರ ರಾಜ್ಯಗಳಾದ ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ, ತೆಲಂಗಾಣ ಮತ್ತು ಕೇರಳ ರಾಜ್ಯಗಳಲ್ಲಿ ಹೊಟ್ಟೆಪಾಡಿಗಾಗಿ ಕೂಲಿ ಕೆಲಸ ಮಾಡಿ ಜೀವನ ನಡೆಸುತ್ತಿರುವುದು ತಮಗೆ ತಿಳಿದ ಸಂಗತಿ.

ಮನವಿ ಪತ್ರ
ಮನವಿ ಪತ್ರ

ಪ್ರಸ್ತುತ, ಕೋವಿಡ್-19 ಹಿನ್ನೆಲೆಯಲ್ಲಿ ಬಹುತೇಕ ಕೂಲಿ ಕಾರ್ಮಿಕರು ತಮ್ಮ ತಮ್ಮ ತಾಂಡಾಗಳಿಗೆ ತಲುಪಿದ್ದಾರೆ ಹಾಗೂ ಇನ್ನೂ ಕೆಲವರು ತಲುಪುತ್ತಿದ್ದು, ಇವರು ಕೆಲಸವಿಲ್ಲದೇ ಒಂದು ಹೊತ್ತಿನ ಊಟಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂದು ತಿಳಿಸಿದ್ದಾರೆ.

ಈಗಾಗಲೇ ರಾಜ್ಯದ ಬೇರೆ ವರ್ಗದವರಿಗೆ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಬದುಕು ಕಟ್ಟಿಕೊಳ್ಳಲು ಸಾಧ್ಯವಾಗದೇ ಒಂದು ಹೊತ್ತಿನ ಊಟಕ್ಕಾಗಿ ಕೆಲಸವಿಲ್ಲದೇ ಬರಿಗೈಯಲ್ಲಿ ಇರುವ ಲಂಬಾಣಿ ಜನಾಂಗದ ವಲಸೆ ಕೂಲಿಕಾರ್ಮಿಕರ ಪ್ರತಿ ಕುಟುಂಬಕ್ಕೆ ಮಾಸಿಕವಾಗಿ ಹತ್ತು ಸಾವಿರ ರೂಪಾಯಿ ಸಹಾಯಧನ ನೀಡಲು ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮುಖ್ಯಮಂತ್ರಿಗಳಿಗೆ ಕಾಂಗ್ರೆಸ್ ಪಕ್ಷದ ವತಿಯಿಂದ ಒತ್ತಾಯ ಮಾಡಿ, ನಮ್ಮ ಸಮುದಾಯದ ನೆರವಿಗೆ ಧಾವಿಸಬೇಕು ಎಂದು ತಮ್ಮಲ್ಲಿ ಕೋರುತ್ತೇವೆ ಎಂದು ಸಿದ್ದರಾಮಯ್ಯ ಅವರಲ್ಲಿ ಸಮುದಾಯದ ಮುಖಂಡರು ಮನವಿ ಮಾಡಿಕೊಂಡಿದ್ದಾರೆ.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿರುವ ವಿಧಾನಸಭೆ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಈ ವಿಚಾರವಾಗಿ ಸಿಎಂ ಜೊತೆ ಸಮಾಲೋಚಿಸುವುದು ಇಲ್ಲವೇ ಪತ್ರದ ಮೂಲಕ ಗಮನ ಸೆಳೆಯುವುದಾಗಿ ಭರವಸೆ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.