ETV Bharat / state

ಬೆಂಗಳೂರು ಟೆಕ್ ಶೃಂಗ ಸಭೆ: ಪ್ರಧಾನಿಯಿಂದ ನಾಳೆ ಉದ್ಘಾಟನೆ - Bangalore Tech Summit Program

23ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗ ಸಭೆ ನಾಳೆಯಿಂದ ನವೆಂಬರ್ 21ರವರೆಗೆ ಬೆಂಗಳೂರಿನ ಶಾಂಗ್ರಿಲ್ಲಾ ಹೋಟೆಲ್​ನಲ್ಲಿ ನೆಡೆಯಲಿದೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದರು.

Bangalore
ಡಿಸಿಎಂ ಅಶ್ವತ್ಥ ನಾರಾಯಣ
author img

By

Published : Nov 18, 2020, 7:53 PM IST

ಬೆಂಗಳೂರು: 23ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗ ಸಭೆ ನಾಳೆಯಿಂದ ಪ್ರಾರಂಭವಾಗಲಿದ್ದು, ನಾಳೆಯಿಂದ ನವೆಂಬರ್ 21ರವರೆಗೆ ಬೆಂಗಳೂರಿನ ಶಾಂಗ್ರಿಲ್ಲಾ ಹೋಟೆಲ್​ನಲ್ಲಿ ನೆಡೆಯಲಿದೆ. ಈ ಬಾರಿ ಸಂಪೂರ್ಣ ವರ್ಚುವಲ್ ಮೂಲಕ ಟೆಕ್ ಸಮ್ಮಿಟ್ ನಡೆಯುತ್ತಿದ್ದು, ಕಾರ್ಯಕ್ರಮವನ್ನು ಪ್ರಧಾನಿ ನರೇಂದ್ರ ಮೋದಿ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಡಿಸಿಎಂ ಅಶ್ವತ್ಥ ನಾರಾಯಣ

ಡಿಸಿಎಂ ಅಶ್ವತ್ಥ ನಾರಾಯಣ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದು, ಇಂದು ಸಂಜೆ ಸಿದ್ಧತೆಗಳನ್ನು ಪರಿಶೀಲಿಸಿದರು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇದೊಂದು ಪ್ರತಿಷ್ಠಿತ ಕಾರ್ಯಕ್ರಮ. ರಾಜ್ಯಕ್ಕೆ ಒಳ್ಳೆಯ ಹೆಸರು, ಒಳ್ಳೆಯ ಭವಿಷ್ಯ ಈ ಕಾರ್ಯಕ್ರಮ ಕೊಡುತ್ತಿದ್ದು, ವರ್ಚುವಲ್ ಮೂಲಕ ಈ ಕಾರ್ಯಕ್ರಮ ನಡೆಯುತ್ತದೆ ಎಂದು ತಿಳಿಸಿದರು.

ಆವಿಷ್ಕಾರ ಮತ್ತು ತಂತ್ರಜ್ಞಾನದ ಪೂರಕವಾಗಿ ಈ ಟೆಕ್ ಸಮ್ಮಿಟ್ ನಡೆಯುತ್ತಿದೆ. ಕಳೆದ ವರ್ಷವೇ ದಿನಾಂಕ ನಿಗದಿಯಾದ್ದು, ಕೊರೊನಾ ಇದ್ದರೂ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೇರೆ ದೇಶಗಳಿಗಿಂತ ಬೆಂಗಳೂರು ವೇಗವಾಗಿ ಬೆಳೆಯಬೇಕು. ಹೀಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ ಎಂದರು. ಆಗಿನ ಪ್ರಧಾನಿ ವಾಜಪೇಯಿ ಅವರು 1999ರಲ್ಲಿ ಟೆಕ್ ಸಮ್ಮಿಟ್ ಉದ್ಘಾಟನೆ ಮಾಡಿದ್ದರು. ಈಗ 21 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿದ್ದು, ಆಸ್ಟ್ರೇಲಿಯಾ, ಸ್ವಿಜರ್ಲ್ಯಾಂಡ್​ನ ಪ್ರಧಾನಿ, ಉಪ ಪ್ರಧಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದರು.

ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, ಇದೊಂದು ವಿಶೇಷ ಕಾರ್ಯಕ್ರಮವಾಗುತ್ತದೆ ಎಂದರು. ಬೆಂಗಳೂರು ಟೆಕ್ ಸಮ್ಮಿಟ್​ನಲ್ಲಿ‌ 25ಕ್ಕೂ ಹೆಚ್ಚು ದೇಶಗಳುಗಳ ಪ್ರತಿನಿಧಿಗಳು, ಕೆಲ ದೇಶಗಳ ಪ್ರಧಾ‌ನಿಗಳು ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಕೃಷಿ, ಸಂಶೋಧನೆ ಮತ್ತು ಅಭಿವೃದ್ಧಿ, ಸ್ಟಾರ್ಟ್ ಅಪ್ ಪಾಲುದಾರಿಕೆ ವಲಯಗಳಗಳಲ್ಲಿ 7 ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಟೆಕ್ ಸಮ್ಮಿಟ್​ನಲ್ಲಿ‌ ಜಾಗತಿಕ ಆವಿಷ್ಕಾರ ಮೈತ್ರಿಗೆ ಸಂಬಂಧಿಸಿದಂತೆ 15 ಅಧಿವೇಶನಗಳು ನಡೆಯಲಿವೆ. ವಿವಿಧ ದೇಶಗಳ 10ಕ್ಕೂ ಹೆಚ್ಚು ಸಚಿವರ ನಿಯೋಗ ಸಮ್ಮಿಟ್​ನಲ್ಲಿ ಭಾಗಿಯಾಗಲಿದೆ. 60ಕ್ಕೂ ಹೆಚ್ಚು ಭಾಷಣಕಾರರು ಉಪನ್ಯಾಸ ನೀಡಲಿದ್ದಾರೆ ಎಂದು ತಿಳಿಸಿದರು.

500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ನಿಯೋಗಗಳು ಟೆಕ್ ಸಮ್ಮಿಟ್​ನಲ್ಲಿ ಭಾಗಿಯಾಗಲಿದ್ದು, 100ಕ್ಕೂ ಹೆಚ್ಚು ಸ್ಟಾರ್ಟ್ ಅಪ್​ಗಳು, 4000ಕ್ಕೂ ಹೆಚ್ಚು ವಹಿವಾಟು ಪ್ರತಿನಿಧಿಗಳು ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆ. 40,000ಕ್ಕೂ ಹೆಚ್ಚು ಜನರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ಟೆಕ್ ಸಮ್ಮಿಟ್​​ನಲ್ಲಿ ವಿಚಾರಗೋಷ್ಠಿ, ಜೈವಿಕ ಪಾಲುದಾರಿಕೆ, ಸಂಶೋಧನೆಗಳ ಮಂಡನೆ, ರಾಷ್ಟ್ರೀಯ ಹಾಗೂ ಜಾಗತಿಕ ಮೈತ್ರಿ ಮತ್ತು ರಸಪ್ರಶ್ನೆ ಕಾರ್ಯಕ್ರಮ ಇರಲಿವೆ. ಆನ್​ಲೈನ್ ಮೂಲಕ ಸಾರ್ವಜನಿಕರು ಟೆಕ್ ಸಮ್ಮಿಟ್​ನಲ್ಲಿ ಭಾಗವಹಿಸಬಹುದಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.