ಬೆಂಗಳೂರು: ಸಿಲಿಕಾನ್ ಸಿಟಿಯ ಸುಮನಹಳ್ಳಿ ಫ್ಲೈಓವರ್ ಬಿರುಕು ಬಿಟ್ಟ ಸ್ಥಳಕ್ಕೆ ಇಂದು ಪಾಲಿಕೆ ಅಧಿಕಾರಿಗಳು ಭೇಟಿ ನೀಡಿದರು. ಗುಂಡಿಬಿದ್ದ ಸ್ಥಳವನ್ನು ರಾಜರಾಜೇಶ್ವರಿ ವಲಯದ ಪಾಲಿಕೆಯ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಇಂದು (ಬುಧವಾರ) ರಾತ್ರಿ 10 ಗಂಟೆ ನಂತರ ದುರಸ್ಥಿ ಕಾರ್ಯ ಆರಂಭವಾಗಲಿದೆ ಎಂದು ಮುಖ್ಯ ರಸ್ತೆ ವಿಭಾಗದ ಅಭಿಯಂತರ ಬಾಲಾಜಿ, ಕಿರಿಯ ಅಭಿಯಂತರ ರಾಜೇಶ್ ತಿಳಿಸಿದರು.
"3 ವರ್ಷಗಳ ಹಿಂದೆ ಕಾಂಕ್ರೀಟ್ ಹಾಗೂ ಸ್ಲ್ಯಾಬ್ ಸಡಿಲಿಕೆ ಮಾಡಲಾಗಿತ್ತು. ಸ್ಟ್ರಕ್ಚರ್ ಹಾಗೂ ಪಿಲ್ಲರ್ನಲ್ಲಿ ಯಾವುದೇ ಸಮಸ್ಯೆ ಇಲ್ಲ. ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯಾಗಿಲ್ಲ. ಸಂಜೆಯ ವೇಳೆಗೆ ಮತ್ತೊಂದು ತಾಂತ್ರಿಕ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಲಿದೆ. ನಂತರ ದುರಸ್ಥಿ ಕಾರ್ಯ ಪ್ರಾರಂಭವಾಗುತ್ತದೆ" ಎಂದು ಬಾಲಾಜಿ ಹೇಳಿದರು.
ಸಾಮಾಜಿಕ ಜಾಲತಾಣಗಳಲ್ಲಿ ವ್ಯಂಗ್ಯ: ಬೆಂಗಳೂರಿನ ರಸ್ತೆ ಗುಂಡಿಗಳಿಗೆ ಬೇಸತ್ತಿರುವ ನಾಗರೀಕರು, ಸ್ವತಂ ರಸ್ತೆ ಗುಂಡಿಗಳ ಚಿತ್ರ ಹಿಡಿದು ಬಿಬಿಎಂಪಿಯ ಗಮನ ಸೆಳೆಯಲು ಮುಂದಾಗಿದ್ದಾರೆ. ರಸ್ತೆ ಗುಂಡಿಗಳ ಚಿತ್ರಗಳನ್ನು ಸೆರೆ ಹಿಡಿದಿರುವ ನೆಟ್ಟಿಗರು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಜೊತೆಗೆ ಬಿಬಿಎಂಪಿ ಹಾಗೂ ಗೂಗಲ್ ಮ್ಯಾಪ್‌ನಲ್ಲಿ ಜಿಯೋ ಟ್ಯಾಗ್ ಸೃಷ್ಟಿ ಮಾಡಿದ್ದಾರೆ. ಈ ಗುಂಡಿಯನ್ನು ಐತಿಹಾಸಿಕ ಹೆಗ್ಗುರುತಾಗಿ ದಾಖಲಿಸಲಾಗಿದೆ. ರಸ್ತೆ ಗುಂಡಿಗಳ ಮುಚ್ಚಲು ಸಾಲು ಸಾಲಾಗಿ ಪೋಸ್ಟ್ ಮಾಡಲಾಗುತ್ತಿದೆ.
-
Bengaluru, Karnataka | Barricades put up after a part of the Sumanahalli flyover caved in. pic.twitter.com/paGsoh6HLl
— ANI (@ANI) September 21, 2022 " class="align-text-top noRightClick twitterSection" data="
">Bengaluru, Karnataka | Barricades put up after a part of the Sumanahalli flyover caved in. pic.twitter.com/paGsoh6HLl
— ANI (@ANI) September 21, 2022Bengaluru, Karnataka | Barricades put up after a part of the Sumanahalli flyover caved in. pic.twitter.com/paGsoh6HLl
— ANI (@ANI) September 21, 2022
ಬೆಳ್ಳಂದೂರಿನಲ್ಲಿ ಗೂಗಲ್ ಮ್ಯಾಪ್‌ನ ಸ್ಥಳವನ್ನು ತೋರಿಸುವ 'ಅಬಿಜರ್ಸ್ ರಸ್ತೆಗುಂಡಿ' ಚಿತ್ರಗಳು ಎನ್ನುವ ಶೀರ್ಷಿಕೆ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ. ಈ ಸ್ಥಳವನ್ನು 'ಕರ್ನಾಟಕದ ಬೆಂಗಳೂರಿನಲ್ಲಿ ಐತಿಹಾಸಿಕ ಹೆಗ್ಗುರುತು' ಎಂದು ನೆಟ್ಟಿಗರು ವ್ಯಂಗ್ಯವಾಡುತ್ತಿದ್ದಾರೆ.
ರಸ್ತೆಗುಂಡಿ ಶೀರ್ಷಿಕೆ ಟ್ಯಾಗ್ ಸದ್ಯ ಸಸ್ಪೆಂಡ್: ಬಹುದೊಡ್ಡ ಗುಂಡಿಗಳು. ಇಲ್ಲೇ ಹತ್ತಿರದಲ್ಲಿ ವ್ಯಾಪಾರ ವಹಿವಾಟು, ಶಾಲೆಗಳನ್ನು ಆರಂಭಿಸಬಹುದು ಎಂದು ಟೀಕಿಸಿದರೆ, ಮತ್ತೊಬ್ಬರು ಇದೊಂದು ಪ್ರವಾಸಿ ಸ್ಥಳ ಒಮ್ಮೆಯಾದರೂ ಭೇಟಿ ನೀಡಬೇಕು ಎಂದು ರಸ್ತೆ ಗುಂಡಿಗಳನ್ನು ತೋರಿಸಿದ್ದಾರೆ. ಅಧಿಕವಾಗಿ ಗೂಗಲ್ ನಕ್ಷೆಯನ್ನು ಬಳಸಿಕೊಂಡು ಟ್ಯಾಗ್ ಮಾಡುತ್ತಿರುವ ಬೆನ್ನಲ್ಲೇ ಸದ್ಯ ರಸ್ತೆಗುಂಡಿ ಶೀರ್ಷಿಕೆ ಟ್ಯಾಗ್ನ್ನು ತೆಗೆದುಹಾಕಲಾಗಿದೆ.
ಇದನ್ನೂ ಓದಿ: ಕೆರೆಯಲ್ಲಿರುವ ವಿದ್ಯುತ್ ಕಂಬಗಳ ದುರಸ್ತಿ: ಬೆಸ್ಕಾಂ ನೌಕರರ ಪರದಾಟ