ETV Bharat / state

ನಾಳೆಯಿಂದ ಸಿಲಿಕಾನ್​ ಸಿಟಿ ಬೆಂಗಳೂರು ಹೇಗಿರುತ್ತೆ; ನಗರ ಆಯುಕ್ತರು ಹೇಳಿದ್ದೇನು ನೋಡಿ! - ಬಾಸ್ಕರ್​ ರಾವ್​ ಸುದ್ದಿಗೋಷ್ಠಿ

ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್​ಡೌನ್​ ನಾಳೆಗೆ ಮುಕ್ತಾಯಗೊಳ್ಳಲಿದ್ದು, ಮೇ.17ರವರೆಗೆ ಹೊಸ ಕಾರ್ಯಸೂಚಿ ಜತೆ ಲಾಕ್​ಡೌನ್​ ವಿಸ್ತರಣೆಯಾಗುತ್ತಿದೆ. ಹೀಗಾಗಿ ನಾಳೆಯಿಂದ ಬೆಂಗಳೂರಿನಲ್ಲಿ ಏನೆಲ್ಲ ಇರುತ್ತೆ. ಏನು ಇರಲ್ಲ ಎಂಬುದರ ಮಾಹಿತಿ ಬೆಂಗಳೂರು ನಗರ ಆಯುಕ್ತರು ನೀಡಿದ್ದಾರೆ.

bangalore police commissioner
bangalore police commissioner
author img

By

Published : May 3, 2020, 8:42 PM IST

ಬೆಂಗಳೂರು: ನಾಳೆಯಿಂದ ಮೇ.17ರವರೆಗೆ 3.0 ಲಾಕ್​ಡೌನ್​ ಮುಂದುವರಿಕೆಯಾಗಿರುವ ಕಾರಣ ನಗರ ಪೊಲಿಸ್ ಆಯುಕ್ತ ‌ಭಾಸ್ಕರ್ ರಾವ್​ ಸುದ್ದಿಗೊಷ್ಠಿ ನಡೆಸಿದರು. ಹೀಗಾಗಿ ಬೆಂಗಳೂರಿನಲ್ಲಿ ಏನೆಲ್ಲ ಇರುತ್ತದೆ, ಏನು ಇರಲ್ಲ ಎಂಬುದರ ಸಂಪೂರ್ಣ ಮಾಹಿತಿ ಅವರು ನೀಡಿದರು.

ಮುಂಜಾನೆ 7ರಿಂದ ಸಂಜೆ 7ರವರೆಗೆ ಕೆಲಸಗಳು ನಡೆಯಲಿದ್ದು, ಸಂಜೆ 7ರಿಂದ ಮುಂಜಾನೆ 7ರವರೆಗೆ ಸಂಪೂರ್ಣವಾಗಿ ಕರ್ಪ್ಯೂ ಇರುತ್ತದೆ. ಇದರ ಜತೆಗೆ ನಾಳೆ ಪೊಲೀಸರು ಸಂಪೂರ್ಣವಾಗಿ ಅಲರ್ಟ್​​ ಆಗಿರಲಿದ್ದಾರೆ ಎಂದು ತಿಳಿಸಿದ್ದಾರೆ. ನಾಳೆಯಿಂದ ಯಾವುದೇ ಪಾಸ್ ಚೆಕ್ ಮಾಡಲ್ಲ, ಅವಶ್ಯಕತೆ ಇಲ್ಲದೇ ಓಡಾಡಬಾರದು ಎಂದಿರುವ ಅವರು, ಬಹುತೇಕ‌ ಅಂಗಡಿಗಳು ಓಪನ್ ಆಗಿರುತ್ತದೆ.‌ ಕಂಟೈನ್​ಮೆಂಟ್​ ಝೋನ್​​ಗಳಲ್ಲಿ ಕಠಿಣ ಕ್ರಮಗಳು ಮುಂದುವರೆಯುತ್ತದೆ. ವಾಹನದಲ್ಲಿ ಓಡಾಟ ಮಾಡುವವರು ಐಡಿ ಕಾರ್ಡ್ ಇಟ್ಟುಕೊಂಡು ಹೊಗಬೇಕು. ಅನುಮಾನ ಬಂದರೆ ತಡೆದು ತಪಾಸಣೆ ನಡೆಸಲಾಗುತ್ತದೆ ಎಂದಿದ್ದಾರೆ.

ಮದ್ಯದಂಗಡಿಯವರಿಗೆ ಎಚ್ಚರಿಕೆ:

ನಾಳೆಯಿಂದ ಎಣ್ಣೆ ಅಂಗಡಿಗಳು ಓಪನ್ ಇರುವ ಹಿನ್ನೆಲೆ ಮುಂಜಾನೆ 9ಗಂಟೆಯಿಂದ ಸಂಜೆ 6ಗಂಟೆಯವರೆಗೆ ಮಾತ್ರ ಕಾರ್ಯನಿರ್ವಹಿಸಲಿವೆ. ಯಾವುದೇ ಕಾರಣಕ್ಕೂ ನಿಯಮ ಮುರಿಯಬಾರದು. 144ಸೆಕ್ಷನ್ ನಿಯಮದ ಪ್ರಕಾರ ಹೆಚ್ಚು ಹೊತ್ತು ಮದ್ಯದ ಅಂಗಡಿ ಬಳಿ ‌ಇರುವಂತಿಲ್ಲ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಮುಖ್ಯ.

ಪೊಲೀಸ್​ ಆಯುಕ್ತ ಸುದ್ದಿಗೋಷ್ಠಿ

ಮದ್ಯದಂಗಡಿಯಲ್ಲಿ ಕೆಲಸ ಮಾಡುವವರು ಗ್ಲೌಸ್​, ಮಾಸ್ಕ್​ ಹಾಕುವುದು ಕಡ್ಡಾಯ. ಸೆಕ್ಯುರಿಟಿ ಗಾರ್ಡ್, ಸಿಸಿಟಿವಿ ಅವಶ್ಯಕ. ಯಾವುದೇ ನಿಯಮ ಪಾಲನೆ ಮಾಡದಿದ್ದರೆ ಮದ್ಯದಂಗಡಿ ಬಂದ್ ಮಾಡಲಾಗುವುದು. ಎಣ್ಣೆ ಖರೀದಿ ‌ಮಾಡುವವರು ಸ್ಥಳದಲ್ಲೇ ಸೇವನೆ ಮಾಡುವಂತಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಏನೆಲ್ಲ ಲಭ್ಯ?

ಲಾಕೌಡೌನೌ ಸಡಿಲಿಕೆಗೊಳ್ಳುತ್ತಿದ್ದಂತೆ ಯಾವುದೇ ಸಭೆ-ಸಮಾರಂಭ ನಡೆಸುವಂತಿಲ್ಲ. ಮಾಲ್ ತೆರೆಯುವಂತಿಲ್ಲ, ಬಸ್ಸು ಸಂಚಾರ, ಮೆಟ್ರೋ, ಶಿಕ್ಷಣ ಸಂಸ್ಥೆ, ಧಾರ್ಮಿಕ ಕಾರ್ಯ ಚಟುವಟಿಕೆಗಳು ನಡೆಯುವುದಿಲ್ಲ. ಆದರೆ ಐಟಿಬಿಟಿ, ಸರ್ಕಾರಿ ಕಚೇರಿ,ಚಿನ್ನಾಭರಣ ಅಂಗಡಿ, ವಕೀಲರು, ವೈದ್ಯರು,ಬಿಬಿಎಂಪಿ ಸಿಬ್ಬಂದಿಗೆ ಯಾವುದೇ ಕಡಿವಾಣ ಇಲ್ಲ. ಐಟಿಬಿಟಿಯವರು ಪಾಸ್ ಪಡೆದುಕೊಂಡು ಓಡಾಡುವುದು ಕಡ್ಡಾಯವಾದೆ ಎಂದು ತಿಳಿಸಿದ್ದಾರೆ.

ಪೊಲೀಸ್​ ಆಯುಕ್ತ ಸುದ್ದಿಗೋಷ್ಠಿ

ರಾಜ್ಯಗಳಿಗೆ ಹೋಗುವವರು, ಆ ರಾಜ್ಯದಿಂದ ಎನ್​ಓಸಿ ಬರಬೇಕು, ಮಹಾರಾಷ್ಟ್ರ, ಕೇರಳ, ತಮಿಳುನಾಡು ಹೊಗುವರು ನಾಳೆಯಿಂದ ಆನ್​ಲೈನ್​ನಲ್ಲಿ ಅರ್ಜಿ ಸಲ್ಲಿಸಬಹುದು.ನಾವು ಸೂಕ್ತ ಕಾರಣ ಇದ್ರೆ ಕೊಡ್ತೀವಿ ಹಾಗೆ ಇಂದು ರಾಜ್ಯದಿಂದ ಬೇರೆ ರಾಜ್ಯಗಳಿಗೆ ನಾಲ್ಕು ರೈಲು ಹೋಗಿವೆ. ಒಂದು ವೇಳೆ ನಿಯಮ ಉಲ್ಲಂಘನೆ ಮಾಡಿದರೆ ಸೆಕ್ಷನ್ 188, NDMA (ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ) act ಅಡಿ‌ ಪ್ರಕರಣ ದಾಖಲಾಗುವುದು ಎಂದಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.