ETV Bharat / state

ಬೆಂಗಳೂರು ಪೊಲೀಸರಿಂದ ಮಹಾರಾಷ್ಟ್ರದಲ್ಲಿ ಡ್ರಗ್ ಪೆಡ್ಲರ್ಸ್ ವಶಕ್ಕೆ ಪಡೆಯುವಾಗ ಹೈಡ್ರಾಮಾ: ಕೊನೆಗೂ ಆರೋಪಿಗಳ ಬಂಧನ - ಈಟಿವಿ ಭಾರತ್​ ಕನ್ನಡ ನ್ಯೂಸ್

ಮಹಾರಾಷ್ಟ್ರ ಮೂಲದ ಡ್ರಗ್ ಪೆಡ್ಲರ್ಸ್ ಗಳನ್ನು ಗಿರಿನಗರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಡ್ರಗ್ ಪೆಡ್ಲರ್ಸ್ ಆರೋಪಿಗಳ ಬಂಧನ
ಡ್ರಗ್ ಪೆಡ್ಲರ್ಸ್ ಆರೋಪಿಗಳ ಬಂಧನ
author img

By

Published : Jul 3, 2023, 10:12 PM IST

ಬೆಂಗಳೂರು : ಅಂತರ್ ರಾಜ್ಯ ಡ್ರಗ್ ಪೆಡ್ಲರ್ಸ್ ಅನ್ನು ಬಂಧಿಸಿದ ಗಿರಿನಗರ ಠಾಣಾ ಪೊಲೀಸರು ಆರೋಪಿಗಳಿಂದ 50 ಲಕ್ಷ ಮೌಲ್ಯದ 96 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಸೈಯ್ಯದ್ ಸಾಧಿಕ್ ಹಾಗೂ ಮಹಾರಾಷ್ಟ್ರ ಮೂಲದ ಸಹೋದರರಾದ ಅಮೂಲ್, ಆಕಾಶ್, ರಾಹುಲ್ ಬಂಧಿತ ಆರೋಪಿಗಳು. ಮಹಾರಾಷ್ಟ್ರದ ಜಾಲ್ನಾದಲ್ಲಿ ಗ್ಯಾರೇಜ್ ಹೊಂದಿರುವ ಆರೋಪಿಗಳು ಸೈಯದ್ ಸಾಧಿಕ್ ಎಂಬಾತನ ಜೊತೆಗೂಡಿ ಗಾಂಜಾ ಮಾರಾಟ ದಂಧೆ ಮಾಡುತ್ತಿದ್ದರು. ಒಡಿಶಾದಿಂದ ಗಾಂಜಾವನ್ನು ಬೆಂಗಳೂರಿಗೆ ತಂದು ಮಾರಾಟ ಮಾಡಿಸುತ್ತಿದ್ದರು.

ಗಿರಿನಗರ ಠಾಣಾ ಪೊಲೀಸರ ಭರ್ಜರಿ ಕಾರ್ಯಾಚರಣೆ
ಗಿರಿನಗರ ಠಾಣಾ ಪೊಲೀಸರ ಭರ್ಜರಿ ಕಾರ್ಯಾಚರಣೆ

ಆರೋಪಿಗಳ ಬಂಧನದ ವೇಳೆ ಹೈಡ್ರಾಮಾ : ಸಾಯಿ ರಾಮ್ ಎಂಬಾತನನ್ನು ಬಂಧಿಸಿದ್ದ ಗಿರಿನಗರ ಠಾಣಾ ಪೊಲೀಸರು ಬಳಿಕ ಸೈಯ್ಯದ್ ಸಾಧಿಕ್ ನನ್ನು ಬಂಧಿಸಿದ್ದರು. ಸಾಧಿಕ್ ನೀಡಿದ ಮಾಹಿತಿ ಆಧರಿಸಿ ಮಹಾರಾಷ್ಟ್ರದ ಜಾಲ್ನಾಕ್ಕೆ ತೆರಳಿದ್ದರು. ಬಳಿಕ ಆರೋಪಿ ಸಹೋದರರನ್ನು ಬಂಧಿಸಿ ಕರೆ ತರುವಾಗ ಅವರ ಕುಟುಂಬಸ್ಥರ ಹೈಡ್ರಾಮಾ ನಡೆಸಿದ್ದಾರೆ.

ಬಂದು ಆರೋಪಿಗಳನ್ನು ಬಂಧಿಸಿದ್ದವರು ಕರ್ನಾಟಕ ಪೊಲೀಸರು ಎಂದು ತಿಳಿದಿದ್ದರೂ ಸಹ ತಮ್ಮವರನ್ನು ಯಾರೋ ಅಪಹರಿಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರಿಗೆ ದೂರು ನೀಡಿದ್ದರು. ದೂರು ಬಂದ ಹಿನ್ನೆಲೆಯಲ್ಲಿ ಕಾರ್ಯಪ್ರವೃತ್ತರಾದ , ಕರ್ನಾಟಕ ಪೊಲೀಸರನ್ನು ಸಿನಿಮೀಯ ಮಾದರಿಯಲ್ಲಿ ಚೇಸ್ ಮಾಡಿಕೊಂಡು ಬಂದು ಅಡ್ಡಗಟ್ಟಿದ್ದಾರೆ. ನಂತರ ನಾವು ಕರ್ನಾಟಕ ಪೊಲೀಸರು ಎಂದು ಐಡಿ ಕಾರ್ಡ್ ತೋರಿಸಿ, ತಾವು ಆರೋಪಿಗಳನ್ನು ಬಂಧನ ಮಾಡಲು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ. ಬಳಿಕ ಈ ಪ್ರಕರಣ ಇತ್ಯರ್ಥವಾಗಿದ್ದು, ಆರೋಪಿಗಳೊಂದಿಗೆ ಪೊಲೀಸರು ಬೆಂಗಳೂರಿಗೆ ಮರಳಿದ್ದಾರೆ.

ಡ್ರಗ್ಸ್​ ಮಾರಾಟ, ಜಾರ್ಖಂಡ್‌ ಮಹಿಳೆಯರ ಬಂಧನ : ಮನೆ ಮಾಲೀಕರ ಕುಮ್ಮಕ್ಕಿನಿಂದ ಉತ್ತರ ಭಾರತದಿಂದ‌ ಬೆಂಗಳೂರಿಗೆ ಆಕ್ರಮವಾಗಿ ಡ್ರಗ್ಸ್ ತರಿಸಿಕೊಂಡು ಮಾರಾಟ ಮಾಡುತ್ತಿದ್ದ ಮನೆಯೊಡತಿ ಸೇರಿ ಮೂವರು ಮಹಿಳೆಯರನ್ನು ಜೂನ್​ 5 ರಂದು ಪುಲಕೇಶಿನಗರ ಪೊಲೀಸರು ಬಂಧಿಸಿದ್ದರು. ಜಾರ್ಖಂಡ್ ಮೂಲದ ಪ್ರೇಮಾ, ಸುನಿತಾ ಹಾಗೂ ಮನೆಯೊಡತಿ ಮುತ್ಯಾಲಮ್ಮ ಬಂಧಿತ ಆರೋಪಿಗಳು.

ಜೀವನಹಳ್ಳಿಯ ನಿವಾಸಿಯಾಗಿರುವ ಮುತ್ಯಾಲಮ್ಮ ಮನೆಯಲ್ಲಿ ಪ್ರೇಮ್ ಹಾಗೂ ಸುನಿತಾ ಅವರು ಬಾಡಿಗೆಗೆ ಇದ್ದರು. ಜಾರ್ಖಂಡ್​ನ ಗುಡ್ಡಗಾಡು ಪ್ರದೇಶದಲ್ಲಿಇವರು ಗಾಂಜಾ ಬೆಳೆಯುತ್ತಿದ್ದರು. ಸಣ್ಣ ಸಣ್ಣ ಪೊಟ್ಟಣಗಳಲ್ಲಿ ಗಾಂಜಾ ಇಟ್ಟು ಪುಲಕೇಶಿ ನಗರದ ಸುತ್ತಮುತ್ತಲಿನ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದರು. ಒಂದು ಗ್ರಾಂಗೆ 500 ರೂಪಾಯಿವರೆಗೂ ಹಣ ಸಂಪಾದನೆ ಮಾಡುತ್ತಿದ್ದರು. ಹೀಗೆ ಇವರು ಮಾಡುತ್ತಿದ್ದ ಗಾಂಜಾ ದಂಧೆಗೆ ಮಾಲಕಿ ಸಾಥ್ ನೀಡುತ್ತಿದ್ದು, ಬಾಡಿಗೆ ಪಡೆಯದೇ ಮನೆಯನ್ನು ಉಚಿತವಾಗಿ ನೀಡಿದ್ದರು. ಮಾದಕ ವಸ್ತು ಮಾರಾಟದಿಂದ ಬಂದ ಅಕ್ರಮ ಹಣದಲ್ಲಿ ಪಾಲು ಪಡೆಯುತ್ತಿದ್ದಳು. ಹಾಗೂ ತನಿಖೆ ವೇಳೆ ಮುತ್ಯಾಲಮ್ಮ ಹಲವು ವರ್ಷಗಳಿಂದ ಮಾದಕ ವ್ಯಸ್ಯನ ಮಾರಾಟ ಜಾಲದಲ್ಲಿ ತೊಡಗಿಸಿಕೊಂಡಿದ್ದರು ಎಂಬ ಮಾಹಿತಿ ಪೊಲೀಸರಿಗೆ ಗೊತ್ತಾಗಿತ್ತು.

ಇದನ್ನೂ ಓದಿ : Bengaluru crime: ಹೋಟೆಲ್​ಗೆ ನೀರು ಹಾಕಲು ಬರುತ್ತಿದ್ದವನ ಪರಿಚಯ.. ಪತಿ ಹತ್ಯೆಗೆ ಪತ್ನಿಯ ಸಾಥ್: ತಲಘಟ್ಟಪುರ ಪೊಲೀಸರಿಂದ ಐವರು ಆರೋಪಿಗಳ ಬಂಧನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.