ಬೆಂಗಳೂರು: ರಿಸರ್ವ್ ಬ್ಯಾಂಕ್ನಿಂದಲೇ ಚಲಾವಣೆಗೆ ಬಂದಿರುವ ಹತ್ತು ರುಪಾಯಿ ನಾಣ್ಯ ಬಳಕೆಯಲ್ಲಿದೆ. ಆದರೆ ಕೆಲವು ತಪ್ಪು ತಿಳುವಳಿಕೆಗಳಿಂದ ಅಂಗಡಿ-ಮಳಿಗೆಗಳು, ದಿನಸಿ ಅಂಗಡಿಗಳಲ್ಲಿ ಈ ನಾಣ್ಯವನ್ನು ನಿರಾಕರಿಸಲಾಗುತ್ತಿದೆ.
ಇದೀಗ ರಾಜ್ಯ ಸರ್ಕಾರದ ಭಾಗವಾದ ಬೆಂಗಳೂರು ವನ್ ಸೆಂಟರ್ಗಳಲ್ಲೂ ನಾಣ್ಯ ನಿರಾಕರಣೆ ಮಾಡಿ ದೊಡ್ಡ ವಿರೋಧಕ್ಕೆ ಕಾರಣವಾಗಿದೆ. ಜನರು ಮೊದಲೇ ಬ್ಯಾನ್ ಆಗಿದೆ ಎಂಬ ಹಿಂಜರಿಕೆಯಲ್ಲಿ ಇರುವಾಗ, ಸರ್ಕಾರಿ ಸಂಸ್ಥೆಗಳು ಈ ಭಾವನೆಯನ್ನು ಹೋಗಲಾಡಿಸಬೇಕಿತ್ತು.


ಆದರೆ ವಿವಿ ಪುರಂ ವಾರ್ಡ್ನ ಬೆಂಗಳೂರು ಒನ್ ಕೇಂದ್ರದಲ್ಲಿ ಹತ್ತು ರುಪಾಯಿ ನಾಣ್ಯ ಸ್ವೀಕರಿಸಲಾಗುವುದಿಲ್ಲ ಎಂಬ ಬೋರ್ಡ್ ಹಾಕುವ ಮೂಲಕ ಸುಳ್ಳು ಸುದ್ದಿ ಹಬ್ಬಿದ್ದಾರೆ. ಈ ಕ್ರಮ ಅಸಮಂಜಸವಾಗಿದ್ದು, ಇದಕ್ಕೆ ಕಾರಣರಾದ ಅಧಿಕಾರಿಗಳ ಮೇಲೆ ರಿಸರ್ವ್ ಬ್ಯಾಂಕ್ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ತಿಳಿಸಿದ್ದಾರೆ.