ETV Bharat / state

ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಇಳಿಕೆಯಾದ ಅಪಘಾತ ಪ್ರಕರಣ: ಪೊಲೀಸರ ಕಾರ್ಯ ಯಶಸ್ವಿ - ಬೆಂಗಳೂರು ಮೈಸೂರು ಹೆದ್ದಾರಿ

ಪೊಲೀಸರು ಕೈಗೊಂಡ ಕ್ರಮದಿಂದಾಗಿ ಬೆಂಗಳೂರು ಮೈಸೂರು ಹೆದ್ದಾರಿಯಲ್ಲಿ ಅಪಘಾತಗಳ ಸಂಖ್ಯೆ ಇಳಿಕೆಯಾಗಿದೆ.

ಬೆಂಗಳೂರು ಮೈಸೂರು ಹೈವೆ
ಬೆಂಗಳೂರು ಮೈಸೂರು ಹೈವೆ
author img

By ETV Bharat Karnataka Team

Published : Sep 8, 2023, 9:06 PM IST

ಬೆಂಗಳೂರು: ಸಾವಿನ ಹೆದ್ದಾರಿ ಎಂದೇ ಬಿಂಬಿತವಾಗಿದ್ದ ಬೆಂಗಳೂರು ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ ಕೊನೆಗೂ ಅಪಘಾತ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಇದೇ ವರ್ಷ ಮಾರ್ಚ್​ನಲ್ಲಿ‌ ಪ್ರಧಾನಿ ನರೇಂದ್ರ ಮೋದಿ ಅವರು ಹೈವೇ ಉದ್ಘಾಟಿಸಿದ್ದರು. ಈ ಮಾರ್ಗದ ಮೂಲಕ ಬೆಂಗಳೂರಿಂದ ಮೈಸೂರಿಗೆ ತೆರಳಬೇಕಾದರೆ ಮೂರುವರೆ ಗಂಟೆಯಿಂದ ಒಂದೂವರೆ ಗಂಟೆಗೆ ಇಳಿಕೆಯಾಗಿತ್ತು.‌

  • Trying hard

    Deaths due to road accidents in state-
    May - 1094
    June- 965
    July- 807
    Aug-795

    Bangalore City, Bangalore Rural & Tumkur major contributors

    1 st half of 2023- 5830 deaths

    “ Road accidents reduction strategy must get due focus to save innumerable precious lives”

    — alok kumar (@alokkumar6994) September 4, 2023 " class="align-text-top noRightClick twitterSection" data=" ">

ಜೊತೆಗೆ ಉದ್ಘಾಟನೆಯಾದ ಆರಂಭದಿಂದಲೂ ಡೆಡ್ಲಿ ಹೆದ್ದಾರಿ ಎಂದು ಕುಖ್ಯಾತಿ ಪಡೆದಿತ್ತು. ವಾಹನಗಳ ಮಿತಿ ಮೀರಿದ ವೇಗ, ಅಗತ್ಯ ಕಡೆಗಳಲ್ಲಿ ಸೂಚನಾ ಫಲಕ ಇಲ್ಲದಿರುವುದು ಸೇರಿದಂತೆ‌ ಹಲವು ಲೋಪದೋಷದಿಂದಾಗಿ ಅಪಘಾತ ಸಂಖ್ಯೆಯಲ್ಲಿ ಹೆಚ್ಚಳವಾಗಿತ್ತು. ಅಲ್ಲದೇ ಸಾವಿನ ಸಂಖ್ಯೆಯೂ ಏರಿಕೆಯಾಗಿತ್ತು‌‌. ಇದು ರಾಷ್ಟ್ರಮಟ್ಟದಲ್ಲೇ ಭಾರಿ ಚರ್ಚೆಗೆ ಗ್ರಾಸವಾಗಿತ್ತು‌‌.‌ ಸದ್ಯ ಆಕ್ಸಿಡೆಂಟ್ ಪ್ರಕರಣಗಳನ್ನ ಕಡಿಮೆಗೊಳಿಸಲು ಹಾಗೂ ವಾಹನ ಸವಾರರ ಸುರಕ್ಷತೆಗಾಗಿ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ‌ ಸಾವಿನ ಪ್ರಕರಣಗಳನ್ನು ನಿಯಂತ್ರಿಸಿದ್ದಾರೆ.

ಸಾವಿನ ಸಂಖ್ಯೆಯಲ್ಲಿ ಇಳಿಕೆ: ಕಳೆದ‌ ಮೇ ತಿಂಗಳಲ್ಲಿ 29 ಮಂದಿ ಅಪಘಾತದಲ್ಲಿ ಮೃತಪಟ್ಟಿದ್ದಾರೆ.‌ ಜೂನ್​ನಲ್ಲಿ 28, ಜುಲೈ 8 ಹಾಗೂ ಆಗಸ್ಟ್​ನಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ರಸ್ತೆ ಹಾಗೂ ಸುರಕ್ಷತೆ ಇಲಾಖೆಯ ಎಡಿಜಿಪಿ ಅಲೋಕ್ ಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ಪೋಸ್ಟ್ ಮಾಡಿ ಮಾಹಿತಿ ಹಂಚಿಕೊಂಡಿದ್ದಾರೆ. ನಿರಂತರವಾಗಿ ಪೊಲೀಸರು ಕೈಗೊಂಡ ಕ್ರಮಗಳಿಂದಾಗಿ ಅಪಘಾತ ಪ್ರಕರಣಗಳು ಕಡಿಮೆಯಾಗಿವೆ ಎಂದು ಹೇಳಿದ್ದಾರೆ‌.

ಹೈವೇಯಲ್ಲಿ ಹೆಚ್ಚಾಗುತ್ತಿದ್ದ ಆ್ಯಕ್ಸಿಡೆಂಟ್ ಪ್ರಕರಣಗಳನ್ನು ಕಡಿಮೆಗೊಳಿಸಲು ಖುದ್ದು ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್, ಎಡಿಜಿಪಿ ಅಲೋಕ್ ಕುಮಾರ್ ಭೇಟಿ ನೀಡಿ ಹೆದ್ದಾರಿಯಲ್ಲಿನ ನ್ಯೂನತೆಗಳನ್ನ ಪತ್ತೆ ಹಚ್ಚಿ ಕೈಗೊಳ್ಳಬೇಕಾದ ರಚನಾತ್ಮಕ ಕ್ರಮಗಳ ಅಂಶಗಳ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು.

ಹೈವೇಯಲ್ಲಿ ಗಂಟೆಗೆ 100 ಕೀ.ಮೀ.ವೇಗವಾಗಿ ವಾಹನ ಚಲಾಯಿಸಿದರೆ ದಂಡ ಹಾಕುವುದು, ದ್ವಿಚಕ್ರ ಹಾಗೂ ಕೃಷಿ ಸಂಬಂಧಿತ ವಾಹನಗಳ ನಿಷೇಧಾಜ್ಞೆ, ರಸ್ತೆ ತಿರುವು ಸೇರಿದಂತೆ ಅಗತ್ಯ ಕಡೆಗಳಲ್ಲಿ ಸೂಚನಾ ಫಲಕ ಹಾಗೂ ತಂತ್ರಜ್ಞಾನ ಸುಧಾರಿತ ಸಿಸಿಟಿವಿ ಕ್ಯಾಮರಾ ಅಳವಡಿಕೆ ಸೇರಿ ಹಲವು ಅಂಶಗಳು ಜಾರಿಯಿಂದ ಅಪಘಾತ ಪ್ರಕರಣಗಳು ಇಳಿಕೆಯಾಗಿವೆ.

ರಾಜ್ಯದಲ್ಲಿನ 2023ರ ಅಪಘಾತ: ರಾಜ್ಯದಲ್ಲಿ 2023ರ ಮೊದಲರ್ಧ ವರ್ಷದಲ್ಲಿ ಸಂಭವಿಸಿದ ಒಟ್ಟಾರೆ ರಸ್ತೆ ಅಪಘಾತಗಳಲ್ಲಿ 5,830 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಅದರಲ್ಲಿ ಮೇ ತಿಂಗಳಿನಲ್ಲಿ 1094 ಜನ, ಜೂನ್​ನಲ್ಲಿ - 965, ಜುಲೈನಲ್ಲಿ- 807, ಆಗಸ್ಟ್ ತಿಂಗಳಲ್ಲಿ-795 ಜನರು ಅಪಘಾತದಲ್ಲಿ ಮೃತ ಪಟ್ಟಿದ್ದಾರೆ. ಇದರಲ್ಲಿ ಬೆಂಗಳೂರು ನಗರ, ಬೆಂ. ಗ್ರಾಮಾಂತರ ಮತ್ತು ತುಮಕೂರಿನದ್ದೇ ಹೆಚ್ಚಿನ ಪ್ರಮಾಣ ಇದೆ ಎಂದು ಎಡಿಜಿಪಿ ಅಲೋಕ್​ ಕುಮಾರ್ ಸಾಮಾಜಿಕ ಮಾಧ್ಯಮ ಎಕ್ಸ್​ನಲ್ಲಿ ತಿಳಿಸಿದ್ದಾರೆ.​

ಇದನ್ನೂ ಓದಿ: ರಜೆಗೆಂದು ಊರಿಗೆ ಬಂದಿದ್ದ ಅಥಣಿಯ ಯೋಧ ರಸ್ತೆ ಅಪಘಾತದಲ್ಲಿ ದುರ್ಮರಣ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.