ETV Bharat / state

ಚುನಾವಣಾ ಹೊಸ್ತಿಲಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇಗೆ ಚಾಲನೆ: ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಹೇಗಿದೆ?

ಬೆಂಗಳೂರು ಮೈಸೂರು ಎಕ್ಸ್‌ಪ್ರೆಸ್‌ ವೇ ಮೂರೂ ಪಕ್ಷಗಳು ಹೈವೇ ಲೋಪಗಳನ್ನು ಒಬ್ಬರ ಮೇಲೊಬ್ಬರು ಹೊರಿಸಿ, ಕ್ರೆಡಿಟ್​ ಅನ್ನು ತಾವು ತೆಗೆದುಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿವೆ. ಹಾಗಾದರೆ, ಈ ಎಕ್ಸ್‌ಪ್ರೆಸ್‌ ವೇ ಹಿಂದಿನ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರ ಏನು?.. ಇಲ್ಲಿದೆ ಅದೆಲ್ಲದರ ಫುಲ್​ ಡಿಟೇಲ್ಸ್​.

Bengaluru- Mysore Expressway
ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ
author img

By

Published : Apr 25, 2023, 3:17 PM IST

Updated : Apr 25, 2023, 5:14 PM IST

ಜಯಪ್ರಕಾಶ್ ನಾರಾಯಣ್ ವಿಚಾರ ವೇದಿಕೆ ಅಧ್ಯಕ್ಷ ಬಿ.ಎಂ.ಶಿವಕುಮಾರ್

ಬೆಂಗಳೂರು: ರಾಜ್ಯದಲ್ಲಿ ಚುನಾವಣಾ ಕಾವು ಜೋರಾಗಿದೆ. ಈ ನಡುವೆ ಹಳೆ ಮೈಸೂರು ಭಾಗದ ಮೇಲೆ ಹಿಡಿತ ಸಾಧಿಸಲು ಕಾಂಗ್ರೆಸ್​ ಹಾಗೂ ಬಿಜೆಪಿ ರಣತಂತ್ರ ರೂಪಿಸಿವೆ. ಜೆಡಿಎಸ್​ ತನ್ನ ಹಿಡಿತವನ್ನು ಬಿಗಿಗೊಳಿಸಲು ತೀವ್ರ ಕಸರತ್ತು ನಡೆಸಿದೆ. ಅಂದ ಹಾಗೆ ಜೆಡಿಎಸ್​​​​​​​​ ಹಿಡಿತದಲ್ಲಿರುವ ಹಳೆ ಮೈಸೂರಿನಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಬಿಜೆಪಿ ಸರ್ವ ಪ್ರಯತ್ನವನ್ನೂ ಮಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಖುದ್ದು ಪ್ರಧಾನಿಯೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಉದ್ಘಾಟಿಸಿ, ದೇಶಾದ್ಯಂತ ಸುದ್ದಿಯಾಗುವಂತೆ ಮಾಡಿದ್ದಾರೆ.

ಬೆಂಗಳೂರು- ಮೈಸೂರು ದಶಪಥ ಹೆದ್ದಾರಿ ಯೋಜನೆ, ಹಳೇ ಮೈಸೂರು ಭಾಗದ ಪ್ರಮುಖ ಯೋಜನೆ. ಇದೀಗ ರಾಜ್ಯದಲ್ಲಿ ನಡೆಯುತ್ತಿರುವ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಧಾಮಿ ಮೋದಿ ಇದೇ ಮಾರ್ಚ್​ನಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಿ, ಮತದಾರರ ಮನಮೊಲೈಕೆಗೆ ಮುನ್ನುಡಿ ಬರೆದಿದ್ದಾರೆ. 118 ಕಿಲೋ ಮೀಟರ್ ಉದ್ದದ ಈ ಹೆದ್ದಾರಿಯನ್ನು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಭಾರತ್ ಮಾಲಾ ಯೋಜನೆಯಡಿ ಸುಮಾರು 8,480 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. 6 ಲೇನ್​ಗಳನ್ನು ಪ್ರಮುಖ ಕ್ಯಾರೇಜ್​ವೇ ಆಗಿ ಗುರುತಿಸಲಾಗಿದ್ದು, ಎರಡೂ ಬದಿಗೆ 2 ಲೇನ್​ನ ಸರ್ವೀಸ್ ರಸ್ತೆ ಇದೆ. ಬೆಂಗಳೂರಿನಿಂದ ಮೈಸೂರನ್ನು‌ ಕೇವಲ 1 ತಾಸಿನಲ್ಲಿ ಕ್ರಮಿಸುವ ಈ ಮಹತ್ವಾಕಾಂಕ್ಷೆಯ ಎಕ್ಸ್‌ಪ್ರೆಸ್‌ ಹೈವೇ ರಾಜಕೀಯ ಪಕ್ಷಗಳ ನಡುವೆ ಕ್ರೆಡಿಟ್ ವಾರ್​ಗೆ ಕಾರಣವಾಗಿದೆ.

ಎಕ್ಸ್‌ಪ್ರೆಸ್‌ ವೇ ಹೆದ್ದಾರಿಗೆ ಪ್ರಧಾನಿ ಮೋದಿ ಚಾಲನೆ ನೀಡಿದ್ದರು. ರೋಡ್ ಶೋ ಮಾಡುವ ಮೂಲಕ ಹೆದ್ದಾರಿಯನ್ನು ಲೋಕಾರ್ಪಣೆ ಮಾಡಿದ್ದರು. ಚುನಾವಣೆ ಹೊಸ್ತಿಲಲ್ಲಿ ಪ್ರಧಾನಿ ಮೋದಿ ಎಕ್ಸ್‌ಪ್ರೆಸ್‌ ವೇಗೆ ಚಾಲನೆ ನೀಡಿರುವುದು ಹಲವು ರಾಜಕೀಯ ಲೆಕ್ಕಾಚಾರಕ್ಕೆ ಎಡೆಮಾಡಿ ಕೊಟ್ಟಿದೆ. ಎಕ್ಸ್‌ಪ್ರೆಸ್‌ ವೇ ಲೋಕಾರ್ಪಣೆ ಆಗುತ್ತಾ ಇದ್ದ ಹಾಗೆ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಮಧ್ಯೆ ಕ್ರೆಡಿಟ್ ವಾರ್ ಆರಂಭವಾಗಿದೆ.

ಎಕ್ಸ್‌ಪ್ರೆಸ್‌ ಹೈವೇ ಲಾಭ‌ ನಷ್ಟದ ಲೆಕ್ಕಾಚಾರ: ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ. ಕರ್ನಾಟಕದ ಮಹತ್ವಾಕಾಂಕ್ಷೆಯ ಯೋಜನೆ.‌ ಪ್ರಧಾನಿ ‌ಮೋದಿ ಅದ್ಧೂರಿಯಾಗಿ ಯೋಜನೆಗೆ ಚಾಲನೆ ನೀಡಿದ್ದರು. 118 ಕಿ.ಮೀ. ಉದ್ದದ ಎಕ್ಸ್‌ಪ್ರೆಸ್‌ ವೇ ಹಿಂದೆ ರಾಜಕೀಯ ಪಕ್ಷಗಳ ಮತ ಲೆಕ್ಕಾಚಾರವೂ ಇದೆ. ಹಳೇ ಮೈಸೂರು ಭಾಗದಲ್ಲಿ ಹಾದು ಹೋಗುವ ಈ ಎಕ್ಸ್‌ಪ್ರೆಸ್‌ ಹೈವೇ ಮೂಲಕ ಬಿಜೆಪಿ ಸರ್ಕಾರ ಮತ ಸೆಳೆಯುವ ನಿರೀಕ್ಷೆಯಲ್ಲಿದೆ‌.

ರಾಜಧಾನಿ ಬೆಂಗಳೂರಿನಿಂದ ರಾಮನಗರ, ಮಂಡ್ಯ, ಮೈಸೂರು ಸಂಪರ್ಕಿಸುವ ಈ ಹೆದ್ದಾರಿ ಮೂಲಕ ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ರಹದಾರಿ ಹುಡುಕುವ ಪ್ರಯತ್ನ ಮಾಡುತ್ತಿದೆ. ಸುಸಜ್ಜಿತ ಎಕ್ಸ್‌ಪ್ರೆಸ್‌ ವೇ ಮೂಲಕ ಡಬಲ್ ಇಂಜಿನ್ ಸರ್ಕಾರದ ಅಭಿವೃದ್ಧಿ ಕಾರ್ಡ್ ಅನ್ನು ಮುಂದಿಟ್ಟುಕೊಂಡು ಬಿಜೆಪಿ ಹಳೇ ಮೈಸೂರು ಭಾಗದ ಜನರ ಮತ ಬ್ಯಾಂಕಿನತ್ತ ಕಣ್ಣಿಟ್ಟಿದೆ. ಬೆಂಗಳೂರು‌- ಮೈಸೂರು ತ್ವರಿತ ಸಂಚಾರ, ರಾಮನಗರ, ಮಂಡ್ಯ, ಮೈಸೂರು ಭಾಗದ ಸುತ್ತಮುತ್ತ ಆರ್ಥಿಕ ಚಟುವಟಿಕೆ ಉತ್ತೇಜಿಸುವ ಈ ಹೈವೇ ಮೂಲಕ ಮೂರು ಜಿಲ್ಲೆಗಳ ಮತಬೇಟೆಗೆ ಬಿಜೆಪಿ ಮುಂದಾಗಿದೆ. ಮೋದಿ ಸರ್ಕಾರ- ಬೊಮ್ಮಾಯಿ ನೇತೃತ್ವದ ಡಬಲ್ ಇಂಜಿನ್ ಸರ್ಕಾರದ ಫಲಶೃತಿಯೇ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಎಂಬ ಅಂಶದೊಂದಿಗೆ ಹಳೇ ಮೈಸೂರು ಭಾಗದ ಜನರ ಮತ ಸೆಳೆಯುವ ತಂತ್ರಗಾರಿಕೆ ಬಿಜೆಪಿಯದ್ದು. ಈ ಯೋಜನೆಯ ಮೂಲಕ ಜೆಡಿಎಸ್ ಹಾಗೂ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕಲು ಯತ್ನಿಸುತ್ತಿದೆ.

ಇತ್ತ ಕಾಂಗ್ರೆಸ್ ಪಕ್ಷ ಈ ಮಹತ್ವಾಕಾಂಕ್ಷೆ ಯೋಜನೆಯ ಕ್ರೆಡಿಟ್ ತೆಗೆದುಕೊಳ್ಳಲು ಯತ್ನಿಸುತ್ತಿದೆ. ಹಳೇ ಮೈಸೂರು ಭಾಗ ಕಾಂಗ್ರೆಸ್ ಪ್ರಾಬಲ್ಯದ ಪ್ರದೇಶ. ಹಾಗಾಗಿ ಈ ಯೋಜನೆಯ ರಾಜಕೀಯ ಲಾಭ ಪಡೆಯಲು ಕಾಂಗ್ರೆಸ್ ಕೂಡ ಕಸರತ್ತು ನಡೆಸುತ್ತಿದೆ. ಈ ಯೋಜನೆಯಲ್ಲಿ ಕಾಂಗ್ರೆಸ್ ಪಾಲು ದೊಡ್ಡದಿದೆ ಎಂದು ಕಾಂಗ್ರೆಸ್ ಹೇಳಿಕೊಳ್ಳುತ್ತಿದೆ. ಮಾಜಿ ಲೋಕೋಪಯೋಗಿ ಸಚಿವ ಮಹದೇವಪ್ಪ 2014ರಲ್ಲಿ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲಿ ಈ ಯೋಜನೆಗೆ ಅನುಮೋದನೆ ನೀಡಲಾಗಿತ್ತು ಎಂದು ತಿಳಿಸಿದ್ದಾರೆ. 2016ರಲ್ಲಿ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಈ ಯೋಜನೆಯನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿತ್ತು. ಭೂ ಸ್ವಾಧೀನವೂ ತಮ್ಮ ಅವಧಿಯಲ್ಲೇ ಪೂರ್ಣಗೊಂಡಿತ್ತು. ಇದು ಕಾಂಗ್ರೆಸ್​ನ‌ ಕನಸಿನ ಯೋಜನೆಯಾಗಿದ್ದು, ಇದರ ಕ್ರೆಡಿಟ್ ಕಾಂಗ್ರೆಸ್​ಗೆ ಸಲ್ಲುತ್ತೆ ಎಂದು ಹೇಳಿಕೊಂಡಿದ್ದಾರೆ.

ರಸ್ತೆ ಕಾಮಗಾರಿ ಅಪೂರ್ಣವಾಗಿದ್ದರೂ ಎಕ್ಸ್‌ಪ್ರೆಸ್‌ ವೇಗೆ ಚಾಲನೆ ನೀಡಲಾಗಿದೆ. ಕಳಪೆ ಕಾಮಗಾರಿ, ರಸ್ತೆಯಲ್ಲಿ ನೀರು ನಿಲ್ಲುವ ಮೂಲಕ ಹೆದ್ದಾರಿ ಕಾಮಗಾರಿಯಲ್ಲಿ ಅವ್ಯವಹಾರ ಎಸಗಲಾಗಿದೆ ಎಂಬ ಆರೋಪವನ್ನು ಕಾಂಗ್ರೆಸ್ ಬಿಜೆಪಿ ಮೇಲೆ ಹೊರಿಸುತ್ತಿದೆ‌. ಆ ಮೂಲಕ ಬಿಜೆಪಿಗೆ ಈ ಎಕ್ಸ್‌ಪ್ರೆಸ್‌ ವೇಯ ರಾಜಕೀಯ ಲಾಭ ಸಿಗದಂತೆ ತಂತ್ರಗಾರಿಕೆ ನಡೆಸುತ್ತಿದೆ.

ಇನ್ನು, ಒಕ್ಕಲಿಗ ಪ್ರಾಬಲ್ಯವಿರುವ ಹಳೇ ಮೈಸೂರು ಭಾಗ ಜೆಡಿಎಸ್ ಪಕ್ಷದ ಭದ್ರಕೋಟೆ. ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಯೋಜನೆ ಮೂಲಕ ಬಿಜೆಪಿ ತಮ್ಮ ಮತಬುಟ್ಟಿಗೆ ಕೈ ಹಾಕದಂತೆ ಜೆಡಿಎಸ್ ತಂತ್ರಗಾರಿಕೆ ನಡೆಸುತ್ತಿದೆ. ಈ ಯೋಜನೆ ಕ್ರೆಡಿಟ್ ಅನ್ನು ತೆಗದುಕೊಳ್ಳುವುದರ ಜೊತೆಗೆ ಬಿಜೆಪಿಗೆ ಲಾಭವಾಗದಂತೆ ಯೋಜನೆಯಲ್ಲಿನ ಲೋಪದೋಷಗಳ ಬಗ್ಗೆನೂ ಟೀಕಿಸುತ್ತಿದೆ. ಜೆಡಿಎಸ್ ವರಿಷ್ಠ ದೇವೇಗೌಡರ ಕನಸಿನ ಯೋಜನೆ ಇದಾಗಿದೆ ಎಂದು ಪಕ್ಷ ಪ್ರತಿಪಾದಿಸುತ್ತಿದೆ. ದೇವೇಗೌಡರು ನೀರಾವರಿ ಸಚಿವರಾಗಿದ್ದ ವೇಳೆ ನಾಲ್ಕು ಪಥದ ರಸ್ತೆ ನಿರ್ಮಿಸಿದ್ದರು. ಬಳಿಕ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇ ಸಂಬಂಧ ಅಧ್ಯಯನ ನಡೆಸಲು ದೇವೇಗೌಡರು ತಜ್ಞರ ಸಂಸ್ಥೆಯನ್ನು ನೇಮಕ ಮಾಡಿದ್ದರು ಎಂದು ಜೆಡಿಎಸ್ ಈ ಯೋಜನೆಯ ಕ್ರೆಡಿಟ್ ತೆಗೆದುಕೊಂಡಿದೆ.

ದೇವೇಗೌಡರು 1991 ಸಿಎಂ ಆಗಿದ್ದಾಗ ಬೆಂಗಳೂರು-ಮೈಸೂರು ಕಾರಿಡಾರ್ ಕಾಮಗಾರಿ ಪ್ರಾರಂಭವಾಗಿತ್ತು. ಹಾಗಾಗಿ ಈ ಯೋಜನೆಯ ಮೂಲ ಪುರುಷ ಹೆಚ್. ಡಿ. ದೇವೇಗೌಡರು ಎಂಬುದು ಜೆಡಿಎಸ್ ಪಕ್ಷದ ಪ್ರತಿಪಾದನೆ. ಆ ಮೂಲಕ ಇದರ ರಾಜಕೀಯ ಲಾಭ ಪಡೆಯಲು ಮುಂದಾಗಿದೆ. ಇನ್ನು ಈ ಯೋಜನೆಯಲ್ಲಿ ಮಾಡಿರುವ ಲೋಪದೋಷ, ಅವ್ಯವಹಾರ, ಮಳೆ ಬಂದಾಗ ನೀರು ನುಗ್ಗುತ್ತಿರುವ ಬಗ್ಗೆ ಬಿಜೆಪಿ ಸರ್ಕಾರ ಹಾಗೂ ಮೋದಿ ಸರ್ಕಾರವನ್ನು ಜೆಡಿಎಸ್​ ಆರೋಪಿ ಸ್ಥಾನದಲ್ಲಿ ಇಡುತ್ತಿದೆ.

ಎಕ್ಸ್‌ಪ್ರೆಸ್‌ ವೇ ಲೋಪದೋಷದ ಮೂಲಕ ಕೌಂಟರ್: ಇತ್ತ ಬಿಜೆಪಿ ಸರ್ಕಾರ ಈ ಮಹಾತ್ವಾಕಾಂಕ್ಷೆ ಯೋಜನೆಯ ರಾಜಕೀಯ ಲಾಭ ಪಡೆಯಲು ಮುಂದಾಗಿದ್ದರೆ, ಅತ್ತ ಪ್ರತಿಪಕ್ಷ ಕಾಂಗ್ರೆಸ್ ಹಾಗೂ ಜೆಡಿಎಸ್ ಅದಕ್ಕೆ ಕೌಂಟರ್ ಕೊಡುತ್ತಿದೆ. ಎಕ್ಸ್‌ಪ್ರೆಸ್‌ ಹೈವೇ ಲೋಪದೋಷ, ದುಬಾರಿ ಟೋಲ್, ರಸ್ತೆ‌ ಮೂಲಭೂತ ಸೌಕರ್ಯ ಕೊರತೆ, ಎಕ್ಸ್‌ಪ್ರೆಸ್‌ ವೇಗೆ ಮಳೆ ನೀರು ನುಗ್ಗುವ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ಡಬಲ್ ಇಂಜಿನ್ ಸರ್ಕಾರದ ಮೇಲೆ ಟೀಕಾಪ್ರಹಾರ ಮಾಡುತ್ತಿದೆ.‌

ಇತ್ತ ಜೆಡಿಎಸ್ ಪಕ್ಷ ಎಕ್ಸ್‌ಪ್ರೆಸ್‌ ಹೈವೇಯಿಂದ ರಾಮನಗರ, ಮಂಡ್ಯದ ರಸ್ತೆ ಬದಿಯ ವ್ಯಾಪಾರ ವಹಿವಾಟು ಸ್ಥಗಿತವಾಗಿರುವ ಬಗ್ಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿದೆ. ಎಕ್ಸ್‌ಪ್ರೆಸ್‌ ಹೈವೇ ನಗರದ ಹೊಲವಲಯದಿಂದ ಸಾಗುವುದರಿಂದ ಹಳೇ ರಸ್ತೆ ಬದಿ ಹಾಗೂ ನಗರದಲ್ಲಿ ಆರ್ಥಿಕ ಚಟುವಟಿಕೆ ಸ್ಥಗಿತವಾಗಿ ವ್ಯಾಪಾರಿಗಳು ಬೀದಿಗೆ ಬೀಳುತ್ತಿರುವ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಡಬಲ್ ಇಂಜಿನ್ ಸರ್ಕಾರದ ಮೇಲೆ ಟೀಕಾಸ್ತ್ರ ಬಿಟ್ಟಿದ್ದಾರೆ. ಆ ಮೂಲಕ ಎಕ್ಸ್‌ಪ್ರೆಸ್‌ ಹೈವೇಯಿಂದ ನಷ್ಟಕ್ಕೊಳಗಾದ ಮಂಡ್ಯ, ರಾಮನಗರ ಜಿಲ್ಲೆಗಳ ಜನರ ಮತಸೆಳೆಯಲು ಮುಂದಾಗಿದೆ.

ಇದನ್ನೂ ಓದಿ: ಮಂಡ್ಯ: ಬಂಡಾಯ ಅಭ್ಯರ್ಥಿಯಾಗಿ ವಿಜಯಾನಂದ ಕಣಕ್ಕೆ, ಬಿಜೆಪಿ ಪರ ಸುಮಲತಾ ಭರ್ಜರಿ ಪ್ರಚಾರ..

Last Updated : Apr 25, 2023, 5:14 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.