ಬೆಂಗಳೂರು: ಹಿಂಬಾಗಿಲಿನ ಮೂಲಕ ಹೋರ್ಡಿಂಗ್ಸ್ ಅಳವಡಿಕೆಗೆ ನಗರಾಭಿವೃದ್ಧಿ ಇಲಾಖೆ ಮುಂದಾಗುತ್ತಿದೆ. ಇದು ಸರಿಯಲ್ಲ ಎಂದು ಮೇಯರ್ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಈ ಹಿಂದೆ 2019ರ ಡಿಸೆಂಬರ್‌ನಲ್ಲೂ ಮುಖ್ಯ ಕಾರ್ಯದರ್ಶಿಗಳಿಗೆ ಮೇಯರ್ ಪತ್ರ ಬರೆದಿದ್ದರು.
![Bangalore Mayor wrote latter, Bangalore Mayor wrote latter to cm, ಸಿಎಂಗೆ ಪತ್ರ ಬರೆದ ಮೇಯರ್, ಸಿಎಂಗೆ ಪತ್ರ ಬರೆದ ಬೆಂಗಳೂರು ಮೇಯರ್,](https://etvbharatimages.akamaized.net/etvbharat/prod-images/kn-bng-04-advertaisement-conflict-7202707_05092020235207_0509f_1599330127_429.jpg)
ಬಿಬಿಎಂಪಿ 2018 ರಲ್ಲಿ ಹೊರಾಂಗಣ ಸೈನೇಜ್, ಜಾಹಿರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018 ಜಾರಿಗೆ ತಂದಿದೆ. ಇದರ ಪ್ರಕಾರ ಅನಧಿಕೃತ ಬ್ಯಾನರ್, ಫ್ಲೆಕ್ಸ್, ಹೋರ್ಡಿಂಗ್ಗಳಿಲ್ಲದೆ ನಗರ ಸುಂದರವಾಗಿದೆ ಎಂದು ಮೇಯರ್ ಗೌತಮ್ ಕುಮಾರ್ ತಮ್ಮ ಪತ್ರದಲ್ಲಿ ಬರೆದಿದ್ದಾರೆ.
![Bangalore Mayor wrote latter, Bangalore Mayor wrote latter to cm, ಸಿಎಂಗೆ ಪತ್ರ ಬರೆದ ಮೇಯರ್, ಸಿಎಂಗೆ ಪತ್ರ ಬರೆದ ಬೆಂಗಳೂರು ಮೇಯರ್,](https://etvbharatimages.akamaized.net/etvbharat/prod-images/kn-bng-04-advertaisement-conflict-7202707_05092020235207_0509f_1599330127_573.jpg)
ಸಂವಿಧಾನದ 24ರ ತಿದ್ದುಪಡಿ ಪ್ರಕಾರ ಪಾಲಿಕೆಗೆ ನಿರ್ಧಾರ ಕೈಗೊಳ್ಳುವ ಅಧಿಕಾರವಿದ್ದು, ಅದರಂತೆ ಬ್ಯಾನ್ ಮಾಡಿರುವ ಜಾಹೀರಾತು ಪ್ರದರ್ಶಗಳಿಗೆ ಸರ್ಕಾರ ಹಸ್ತಕ್ಷೇಪ ಮಾಡುವ ಅಧಿಕಾರ ಇರುವುದಿಲ್ಲ. ಅದರಂತೆ ಬಿಬಿಎಂಪಿಯ ‘ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶನೀತಿ ಹಾಗೂ ಹೊರಾಂಗಣ ಜಾಹೀರಾತು ಮತ್ತು ಸಾರ್ವಜನಿಕ ಸಂದೇಶ ಬೈಲಾ-2018’ ಜಾಹೀರಾತಿಗೆ ವ್ಯತಿರಿಕ್ತವಾದ ಯಾವುದೇ ನಿಯಮಗಳನ್ನು ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದರೂ, ಅದು ಬಿಬಿಎಂಪಿಯ ಸಂವಿಧಾನದತ್ತ ಅಧಿಕಾರದ ಉಲ್ಲಂಘನೆ ಆಗುತ್ತದೆ ಎಂದು ಮೇಯರ್ ಪತ್ರದಲ್ಲಿ ವಿವರಿಸಿದ್ದಾರೆ.
![Bangalore Mayor wrote latter, Bangalore Mayor wrote latter to cm, ಸಿಎಂಗೆ ಪತ್ರ ಬರೆದ ಮೇಯರ್, ಸಿಎಂಗೆ ಪತ್ರ ಬರೆದ ಬೆಂಗಳೂರು ಮೇಯರ್,](https://etvbharatimages.akamaized.net/etvbharat/prod-images/kn-bng-04-advertaisement-conflict-7202707_05092020235207_0509f_1599330127_1043.jpg)
ಅನಧಿಕೃತ ಜಾಹೀರಾತು ನಿಷೇಧವಾಗಲು ಕಾನೂನು ಹೋರಾಟ ನಡೆಸಿದ್ದ ಸಾಮಾಜಿಕ ಕಾರ್ಯಕರ್ತ ಸಾಯಿದತ್ತ ಅವರೂ ಪತ್ರ ಬರೆದಿದ್ದು, ಹಿಂಬಾಗಿಲಿನ ಮೂಲಕ ಜಾಹೀರಾತು ನಗರದಲ್ಲಿ ತರಲು ಕೆಲ ಜಾಹೀರಾತು ಅಸೋಸಿಯೇಷನ್ಗಳು ಪ್ರಯತ್ನಿಸುತ್ತಿವೆ. ಸಾರ್ವಜನಿಕ ಹಿತದೃಷ್ಟಿಯಿಂದ ಇದು ನಗರಕ್ಕೆ ಮಾರಕವಾಗಿದೆ ಎಂದು ಪಾಲಿಕೆಗೆ ಪತ್ರ ಬರೆದಿದ್ದರು.
![Bangalore Mayor wrote latter, Bangalore Mayor wrote latter to cm, ಸಿಎಂಗೆ ಪತ್ರ ಬರೆದ ಮೇಯರ್, ಸಿಎಂಗೆ ಪತ್ರ ಬರೆದ ಬೆಂಗಳೂರು ಮೇಯರ್,](https://etvbharatimages.akamaized.net/etvbharat/prod-images/kn-bng-04-advertaisement-conflict-7202707_05092020235207_0509f_1599330127_75.jpg)