ಬೆಂಗಳೂರು: ಉಪಚುನಾವಣೆಗೆ ನಾಮಪತ್ರ ಸಲ್ಲಿಸುತ್ತಿರುವ ಅಭ್ಯರ್ಥಿಗಳು ತಮ್ಮ ಆಸ್ತಿ ವಿವರ ಸಲ್ಲಿಸಿದ್ದು, ಅಭ್ಯರ್ಥಿಗಳು ಸಾವಿರಾರು ಕೋಟಿಯ ಒಡೆಯರೆಂದು ತಿಳಿದ ಜನ ಆಶ್ವರ್ಯಚಕಿತರಾಗಿದ್ದಾರೆ. ಸದ್ಯ ಮಹಾಲಕ್ಷ್ಮಿ ಲೇಔಟ್ ಕಾಂಗ್ರೆಸ್ ಅಭ್ಯರ್ಥಿ ಎಂ. ಶಿವರಾಜು ತಮ್ಮ ಆಸ್ತಿ ವಿವರ ಘೋಷಿಸಿದ್ದು, ಪತ್ನಿಯಿಂದಲೇ ಸಾಲ ಪಡೆದಿದ್ದಾಗಿ ತಿಳಿಸಿದ್ದಾರೆ.
![bangalore-mahalakshmi-layout-m-shivaraju-property-details](https://etvbharatimages.akamaized.net/etvbharat/prod-images/5107990_protery.jpg)
ಕಾಂಗ್ರೆಸ್ ಅಭ್ಯರ್ಥಿ ಎಂ. ಶಿವರಾಜು ತಮ್ಮ ಪತ್ನಿಯಿಂದಲೇ 6,80,000 ರೂಪಾಯಿ ಸಾಲ ಪಡೆದಿದ್ದಾರಂತೆ. ಇದನ್ನು ತಮ್ಮ ಆಸ್ತಿ ವಿವರದಲ್ಲಿ ತಿಳಿಸಿದ್ದಾರೆ. ಶಿವರಾಜ್ ಅವರ ಚರಾಸ್ತಿ ಮೌಲ್ಯ 39,32,929 ರೂಪಾಯಿ ಇದ್ದರೆ, ಸ್ಥಿರಾಸ್ತಿ ಮೌಲ್ಯ 1,19,38,183 ರೂಪಾಯಿ ಇದೆ.
![bangalore-mahalakshmi-layout-m-shivaraju-property-details](https://etvbharatimages.akamaized.net/etvbharat/prod-images/5107990_protery2.jpg)
ನಗದು 15,950 ರೂಪಾಯಿ ಇದ್ದರೆ, ವಿವಿಧ ಬ್ಯಾಂಕ್ ಗಳಲ್ಲಿರುವ 2,50,816 ಡೆಪಾಸಿಟ್ ಇದೆ. ಶಿವರಾಜ್ ಅವರ ಬ್ಯಾಂಕ್ ಸಾಲ 77,66,846 ರೂಪಾಯಿ ಇದ್ದು, ಇತರ ವ್ಯಕ್ತಿ, ಸಂಸ್ಥೆಗಳಿಂದ ಪಡೆದಿರುವ ಸಾಲ ಒಟ್ಟು 72,51,846 ಇದೆ. ಶಿವರಾಜ್ ಅವರ ಒಟ್ಟಾರೆ ಹೂಡಿಕೆ 2,52,00,000. ಕೇವಲ 255 ಗ್ರಾಂ ಚಿನ್ನ, ಬೆಳ್ಳಿ 800 ಗ್ರಾಂ, ಚಿನ್ನ, ಮೌಲ್ಯ ಒಟ್ಟು 3,00,4370 ರೂಪಾಯಿ ಇದೆಯಂತೆ.