ETV Bharat / state

ಹಿಟ್ ಆ್ಯಂಡ್ ರನ್ ಕೇಸ್​- ಸಾವಿಗೀಡಾದ ಪಾದಚಾರಿಯ ಮಾಹಿತಿ ಪತ್ತೆ; ಆರೋಪಿಗಾಗಿ ಪೊಲೀಸರ ತಲಾಶ್​

author img

By

Published : Jan 30, 2023, 3:01 PM IST

Updated : Jan 30, 2023, 3:15 PM IST

ಬೆಂಗಳೂರು ಹಿಟ್ ಆ್ಯಂಡ್ ರನ್ ಪ್ರಕರಣ - ಮೃತಪಟ್ಟಿದ್ದ ಪಾದಚಾರಿಯ ಮಾಹಿತಿ ಪತ್ತೆ - ಪೊಲೀಸರಿಂದ ಹೇಳಿಕೆ

Accident scene
ಅಪಘಾತದ ದೃಶ್ಯ

ಬೆಂಗಳೂರು : ಕಳೆದ ಗುರುವಾರ ರಾತ್ರಿ ಮೇಖ್ರಿ ಸರ್ಕಲ್ ಬಳಿ ಅಪಘಾತವೊಂದು ನಡೆದಿದ್ದು, ಪಾದಚಾರಿ ಮೃತಪಟ್ಟಿದ್ದರು. ಇದೀಗ ಬೆಂಜ್ ಕಾರ್​ ಚಾಲಕನ ಹಿಟ್ ಆ್ಯಂಡ್ ರನ್ ಗೆ ಬಲಿಯಾದ ಪಾದಚಾರಿಯ ಸಂಪೂರ್ಣ ವಿಳಾಸ ಪತ್ತೆಯಾಗಿದೆ. ಮೃತನನ್ನು ಆರ್.ಟಿ. ನಗರದ ಚೋಳನಾಯಕನ ಹಳ್ಳಿ ನಿವಾಸಿ ಡಿ.ಎನ್. ವೆಂಕಟೇಶ್ ಎಂದು ಗುರುತಿಸಲಾಗಿದೆ. ಅಪಘಾತವೆಸಗಿದ್ದ ಕಾರು ಚಾಲಕ ಪರಾರಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಹುಡುಕಾಟ ನಡೆಸುತ್ತಿದ್ದಾರೆ.

ಗುರುವಾರ ರಾತ್ರಿ ಮೇಖ್ರಿ ಸರ್ಕಲ್ ಬಳಿ ಆಟೋ ಇಳಿದು ಮನೆಗೆ ತೆರಳಲು ರಸ್ತೆ ದಾಟುತ್ತಿದ್ದ ವೆಂಕಟೇಶ್ ಗೆ ವೇಗವಾಗಿ ಬಂದ ಬೆಂಜ್ ಕಾರು ಡಿಕ್ಕಿಯಾಗಿತ್ತು, ಅಪಘಾತವಾದ ಕೂಡಲೇ ಸ್ಥಳೀಯರ ನೆರವಿನಿಂದ ಅಂಬ್ಯುಲೆನ್ಸ್ ಮೂಲಕ ಸಮೀಪದ ಆಸ್ಪತ್ರೆಗೆ ಗಾಯಾಳು ವೆಂಕಟೇಶ್​ ಅವರನ್ನು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ವೆಂಕಟೇಶ್ ಮೃತಪಟ್ಟಿದ್ದರು. ಪ್ರತ್ಯಕ್ಷದರ್ಶಿಗಳ ಮಾಹಿತಿಯನ್ವಯ ಸಿಸಿ ಕ್ಯಾಮರಾದ ದೃಶ್ಯಾವಳಿಗಳನ್ನು ಪರಿಶೀಲಿಸಿರುವ ಸದಾಶಿವನಗರ ಸಂಚಾರ ಠಾಣಾ ಪೊಲೀಸರು ಆರೋಪಿಯ ಪತ್ತೆಗಾಗಿ ಬಲೆ ಬೀಸಿದ್ದಾರೆ.

ಕರಳು ಹಿಂಡುವಂತಿದೆ ಮೃತ ವೆಂಕಟೇಶ್ ಕಥೆ: ತನಿಖೆ ವೇಳೆ ಮೃತ ವೆಂಕಟೇಶ್ ಕಥೆ ಕೇಳಿ ಪೊಲೀಸರ ಕಣ್ಣಂಚು ಒದ್ದೆಯಾಗಿತ್ತು. ವೆಂಕಟೇಶ್​ ತನ್ನ ತಂದೆಯ ಸಾವಿನ ಬಳಿಕ ಮಾನಸಿಕವಾಗಿ ಕುಗ್ಗಿದ್ದರು. ಬಳಿಕ ತಾಯಿಯೊಂದಿಗೆ ವಾಸವಾಗಿದ್ದರು. ತಂದೆ ಅಗಲಿಕೆಯ ನೋವಲ್ಲಿದ್ದ ಇವರು ಸದಾ ತಂದೆಯ ಫೋಟೋ ಕೈಯಲ್ಲಿ ಹಿಡಿದು ಎಲ್ಲಾ ಕಡೆ ಓಡಾಡುತ್ತಿದ್ದರು. ಇನ್ನು, ಅಪಘಾತ ನಡೆಯುವ ದಿನ ತಮ್ಮ ಸೋದರನ ಮನೆಗೆ ತೆರಳಿದ್ದರು. ಆದರೆ ದುರ್ವಿಧಿ ರಸ್ತೆ ಅಪಘಾತದಲ್ಲಿ ವೆಂಕಟೇಶ್​ ತನ್ನ ಪ್ರಾಣವನ್ನೇ ಕಳೆದುಕೊಂಡಿದ್ದಾರೆ. ಅಪಘಾತದ ಬಳಿಕ ಮೃತನ ಬಗ್ಗೆ ಯಾವುದೇ ಸುಳಿವು ಪೊಲೀಸರಿಗೆ ಇರಲಿಲ್ಲ.

ಮೃತನ ಕೈಯಲ್ಲಿದ್ದ ತಂದೆ ಫೋಟೋದಿಂದಲೇ ಅವರ ಬಗ್ಗೆ ಸುಳಿವು ಪತ್ತೆ ಮಾಡಲಾಗಿದೆ. ಹೌದು, ವೆಂಕಟೇಶ್​ ಕೈಯಲ್ಲಿ ತನ್ನ ತಂದೆ ಫೋಟೋ ಯಾವಾಗಲು ಜೊತೆಗೆ ಇರಿಸಿಕೊಳ್ಳುತ್ತಿದ್ದ, ಅಪಘಾತ ದಿನವು ಫೋಟೋ ಅವರೊಂದಿಗೆ ಇತ್ತು. ಇದರ ಆಧಾರದಿಂದ ಮೃತನ ವಿಳಾಸವನ್ನು ಸದಾಶಿವನಗರ ಸಂಚಾರಿ ಪೊಲೀಸರು ಪತ್ತೆ ಹಚ್ಚಿ ಅವರ ಕುಟುಂಬದವರಿಗೆ ತಿಳಿಸಿದ್ದಾರೆ. ವಿಚಾರಣೆ ವೇಳೆ ಪೊಲೀಸರ ಮುಂದೆ ಅಳಲು ತೋಡಿಕೊಂಡ ವೆಂಕಟೇಶ್ ಕುಟುಂಬಸ್ಥರು ವೇಂಕಟೇಶ್ ತನ್ನ ತಂದೆಯನ್ನು ತುಂಬಾನೇ ಹಚ್ಚಿಕೊಂಡಿದ್ದ ಎಂದು ತಿಳಿಸಿದ್ದಾರೆ. ಸದ್ಯ ಅಪಘಾತವೆಸಗಿದ ಆರೋಪಿಗಾಗಿ ಸದಾಶಿವನಗರ ಸಂಚಾರಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.

ಬೈಕ್​ ಅಪಘಾತ, ಓರ್ವ ಸಾವು.. ಭಾನುವಾರ ಮಧ್ಯರಾತ್ರಿ ವಿಧಾನಸೌಧ ವೀಕ್ಷಣೆಗೆ ಬರುತ್ತಿದ್ದ ಸ್ನೇಹಿತರ ಬೈಕ್ ಅಪಘಾತವಾಗಿದ್ದು, ಓರ್ವ ಸಾವನ್ನಪ್ಪಿದ್ದಾರೆ. ಮತ್ತೋರ್ವ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ. ಹೈಗ್ರೌಂಡ್ ಸಂಚಾರಿ ಠಾಣಾ ವ್ಯಾಪ್ತಿಯ ಸವೆನ್ ಮಿನಿಸ್ಟರ್ಸ್ ಕ್ವಾಟ್ರಸ್ ಬಳಿ ಸಂಭವಿಸಿದೆ. ಬೈಕ್ ನಿಯಂತ್ರಣ ತಪ್ಪಿ ಪಾದಚಾರಿ ಮಾರ್ಗಕ್ಕೆ ಡಿಕ್ಕಿಯಾಗಿ ರಾಜೇಶ್ ಎಂಬವರು ಸಾವನ್ನಪ್ಪಿದರೆ‌ ಪರಶುರಾಮ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಲ್ಮೆಟ್​ ಧರಿಸದಿರುವುದು ಸಾವಿಗೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: ರಾತ್ರಿ ವಿಧಾನಸೌಧ ವೀಕ್ಷಣೆಗೆ ತೆರಳುತ್ತಿದ್ದಾಗ ಬೈಕ್ ಅಪಘಾತ; ಓರ್ವ ಸಾವು

Last Updated : Jan 30, 2023, 3:15 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.