ಬೆಂಗಳೂರು: ಮಕ್ಕಳು - ಮಹಿಳೆಯರ ರಕ್ಷಣೆಗೆ ಹಾಗೂ ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಕೇಂದ್ರ ವಿಭಾಗದ ಅಶೋಕ್ ನಗರ ಪೊಲೀಸರು ಹೈ ಕ್ವಾಲಿಟಿ 110 ಸಿಸಿಟಿವಿಗಳನ್ನು ಪ್ರತಿ ಜಂಕ್ಷನ್, ಸೂಕ್ಷ ಪ್ರದೇಶ, ಕ್ರೈಂ ಚಟುವಟಿಕೆ ನಡೆಯುವ ಸ್ಥಳ, ಮಾಲ್, ಪಬ್ ರಸ್ತೆಗಳ ಬಳಿ ಅಳವಡಿಕೆ ಮಾಡಿದ್ದಾರೆ.
ಈ ಸಿಸಿಟಿವಿ ಅಳವಡಿಕೆ ಕುರಿತ ಕಾರ್ಯಕ್ರಮವನ್ನು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್, ಹೆಚ್ಚುವರಿ ಆಯುಕ್ತ ಸೌಮೇಂದ್ರ ಮುಖರ್ಜಿ ಹಾಗೂ ಕೇಂದ್ರ ವಿಭಾಗ ಡಿಸಿಪಿ ಅನುಚೇತ್ ಉದ್ಘಾಟನೆ ಮಾಡಿದರು.
ಈ ಸಿಸಿಟಿವಿಗಳನ್ನು ಖಾಸಗಿ ಸಂಸ್ಥೆಗಳು ತಮ್ಮ ಸ್ವಇಚ್ಛೆಯಿಂದ ನಗರದ ಸುರಕ್ಷತೆಗಾಗಿ ನೀಡಿದ್ದಾರೆ. ಈ ಸಿಸಿಟಿವಿಗಳನ್ನು ಪೊಲೀಸ್ ಠಾಣೆಯಲ್ಲೇ ಕುಳಿತು ಸಿಬ್ಬಂದಿ ಮಾನಿಟರಿಂಗ್ ಮಾಡಲಿದ್ದಾರೆ. ಸಿಸಿಟಿವಿ ಅಳವಡಿಕೆಗೆ ಸ್ಪಾನ್ಸರ್ ಮಾಡಿದ ಪ್ರತಿ ವ್ಯಕ್ತಿಗಳಿಗೆ ನಗರ ಪೊಲೀಸ್ ಆಯುಕ್ತ ಭೇಷ್ ಎಂದು ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ಸಿಸಿಟಿವಿ ಅಳವಡಿಕೆಯಿಂದ ಅಪರಾಧ ಎಸಗುವವರ ಚಲನವಲನಗಳನ್ನು ಗುರುತಿಸಬಹುದು. ಹಾಗೆ ಕ್ರೈಂ ತಡೆಗಟ್ಟಲು ಇದು ಸಹಯಾಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.