ETV Bharat / state

ಪೊಲೀಸರು ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸಬೇಕು: ಪೊಲೀಸ್ ಆಯುಕ್ತ ಭಾಸ್ಕರ್ ರಾವ್..! - Bangalore City Police Commissioner

ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದ, ವಿ.ವಿ.ಪುರಂ ಸಂಚಾರಿ ಠಾಣೆಯ ಎಎಸ್ಐ ಸಾವನ್ನಪ್ಪಿದ್ದು, ಅವರ ಸಾವಿನಿಂದ ತುಂಬಾ ಬೇಜಾರಾಗಿದ್ದು, ಇದಕ್ಕೆ ನಾವು ಹೆದರದೇ ತುಂಬ ಧೈರ್ಯದಿಂದ ಎದುರಿಸಬೇಕೆಂದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

Bangalore City Police Commissioner
ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ
author img

By

Published : Jun 16, 2020, 3:51 PM IST

ಬೆಂಗಳೂರು: ಲಾಕ್​​ಡೌನ್ ಸಡಿಲಿಕೆಯಾದ ನಂತರ ಆರೋಪಿಗಳ ಬಂಧನ, ಕಂಟೈನ್​ಮೆಂಟ್ ಝೋನ್​​​​ನಲ್ಲಿ ಕೆಲಸ ಹಾಗೂ ಬೀಟ್​​​​ನಲ್ಲಿರುವಾಗ ನಗರದಲ್ಲಿ ಸುಮಾರು13 ಪೊಲೀಸರಿಗೆ ಸೋಂಕು ತಗುಲಿದೆ ಎಂದು, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಹೇಳಿದರು.

ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಿಕಿತ್ಸೆಗೊಳಗಾದ ಮೂವರು ಪೊಲೀಸ್ ಸಿಬ್ಬಂದಿ ಡಿಸ್ಚಾರ್ಜ್ ಆಗಿದ್ದು, ಒಬ್ಬರು ಮೃತಪಟ್ಟಿದ್ದಾರೆ ಎಂದರು.

ಲಾಕ್​​​​ಡೌನ್ ಸಡಿಲಿಕೆಯ ಬಳಿಕ ಬೆಂಗಳೂರಿನಲ್ಲಿ ಜನದಟ್ಟಣೆ ಜಾಸ್ತಿಯಾಗಿದ್ದು, ಸದ್ಯ ಅಂತರ್​​​ ರಾಜ್ಯದಿಂದ ಬರುವುದಕ್ಕೆ ಅವಕಾಶವಿದೆ. ಹೀಗಾಗಿ ಎಲ್ಲೆಡೆ ಸಂಚಾರವೂ ಹೆಚ್ಚಾಗಿದೆ. ಮೊದಲು ಕೊರೊನಾ ಬಂದ ಎರಡೂವರೆ ತಿಂಗಳು ಯಾವುದೇ ಸೋಂಕು ಪೊಲೀಸರಲ್ಲಿ ಇರಲಿಲ್ಲ ಎಂದರು.

ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಸುದ್ದಿಗೋಷ್ಠಿ

ಸೋಂಕು ಪತ್ತೆಯಾದ ಠಾಣೆಗಳು ಈಗಾಗಲೇ ಸೀಲ್​​​​ಡೌನ್ ಆಗಿವೆ. ಹಾಗೆ ನಗರದಲ್ಲಿ 13 ಪೊಲೀಸರ ಜೊತೆ ಸಂಪರ್ಕವಿದ್ದ 420 ಜನ ಸಿಬ್ಬಂದಿ ಕ್ವಾರಂಟೈನ್​​​​ನಲ್ಲಿ ಇದ್ದಾರೆ. ಕೊರೊನಾ ಇರುವ ಕಾರಣ ಪೊಲೀಸರು ಎಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯ. ಹೀಗಾಗಿ ಮಾಸ್ಕ್, ಸ್ಯಾನಿಟೈಸರ್, ಗ್ಲೌಸ್ ಬಳಕೆ ಕಡ್ಡಾಯವಾಗಿದೆ. ಇದರ ಬಗ್ಗೆ ಆಯಾ ಠಾಣೆ ಇನ್ಸ್‌ಪೆಕ್ಟರ್ ಜವಾಬ್ದಾರಿ ಹೊತ್ತು ಪ್ರತಿ, ಸಿಬ್ಬಂದಿಯನ್ನು ಮನೆಯವರಂತೆ ನೋಡಿಕೊಳ್ಳಬೇಕು ಎಂದರು.

ಇನ್ನು ಕೊರೊನಾ ವಾರಿಯರ್ ಆಗಿ ಸೇವೆ ಸಲ್ಲಿಸಿದ್ದ, ವಿ.ವಿ.ಪುರಂ ಸಂಚಾರಿ ಠಾಣೆಯ ಎಎಸ್ಐ ಸಾವನ್ನಪ್ಪಿದ್ದು, ಈ ಮೊದಲು ಅವರು ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಅವರಿಗೆ ರಜೆ ನೀಡಲಾಗಿತ್ತು. ಅವರ ಸಾವಿನಿಂದ ತುಂಬಾ ಬೇಜಾರಾಗಿದ್ದು, ಇದಕ್ಕೆ ನಾವು ಹೆದರಬಾರದು, ತುಂಬ ಧೈರ್ಯದಿಂದ ಎದುರಿಸಬೇಕು ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.